ಮೌಲ್ಯ ಸಂಗಮ: ವರ್ಷದ ಸರಣಿ ಕಾರ್ಯಕ್ರಮ

ಕಾರ್ಕಳ : ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿ ಮೌಲ್ಯ ಸಂಗಮ ವರ್ಷದ ಸರಣಿ ಕಾರ್ಯಕ್ರಮದಲ್ಲಿ ನವಂಬರ್ ತಿಂಗಳ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಇಸ್ರೋದ ನಿವೃತ್ತ ವಿಜ್ಞಾನಿ ಜನಾರ್ಧನ ಇಡ್ಯಾ ಇಸ್ರೋದ ಕಾರ್ಯ ಚಟುವಟಿಕೆಗಳು ಮತ್ತು ರಾಕೆಟ್ ಉಡಾವಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ಭಾಗದ ಹಿರಿಯ ಸಹ ಶಿಕ್ಷಕರಾದ ಯೋಗೇಂದ್ರ, ಅಧ್ಯಾಪಕ, ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ. ಕೆ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರೌಢಶಾಲೆ ಭಾಗದ ಹಿಂದಿ ಭಾಷಾ ಶಿಕ್ಷಕಿ ಪ್ರಭಾ. ಜಿ ಬೋವಿ ಸ್ವಾಗತಿಸಿದರು. ಆಂಗ್ಲ ಭಾಷಾ ಶಿಕ್ಷಕ ಸುನಿಲ್. ಎಸ್ ಶೆಟ್ಟಿ ಪರಿಚಯಿಸಿದರು. ಉಪನ್ಯಾಸಕ ಪ್ರಭಾತ್ ರಂಜನ್ ವಂದಿಸಿದರು. ವಿಜ್ಞಾನ ಶಿಕ್ಷಕಿ ಪ್ರತೀಕ್ಷಾ ನಿರೂಪಿಸಿದರು.
Next Story





