ಜಯಂಟ್ಸ್ ಗ್ರೂಪ್‌ನಿಂದ ವಿವಿಧ ಸಮಾಜ ಸೇವಾ ಕಾರ್ಯಕ್ರಮ

ಉಡುಪಿ, ಸೆ.24: ಜಯಂಟ್ಸ್ ಗ್ರೂಪ್ ಉಡುಪಿ ವತಿಯಿಂದ ಒಂದು ವಾರದ ಅವಧಿಯಲ್ಲಿ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಸೇವಾ ಕಾರ್ಯಕ್ರಮಗಳ ಅಂಗವಾಗಿ ರಕ್ತದಾನ ಶಿಬಿರ, ಗೋಶಾಲೆಗೆ ಜಾನುವಾರುಗಳ ಮೇವಿನ ವಿತರಣೆ, ವೃದ್ಧಾಶ್ರಮದ ಸಿಬ್ಬಂದಿಗೆ ಕೈಗವಸುಗಳ ವಿತರಣೆ, ವೃದ್ಧಾಶ್ರಮಗಳಲ್ಲಿ ಹಣ್ಣುಗಳ ವಿತರಣೆ, ವಯಸ್ಕರ ಬಳಕೆಯ ಪ್ಯಾಡ್ಗಳ ವಿತರಣೆ, ಆಹಾರ ಸಾಮಗ್ರಿಗಳ ವಿತರಣೆ, ವೀಲ್‌ಚೇರ್ ವಿತರಣೆ, ಶಾಲಾ ಮಕ್ಕಳಿಗೆ ಸಮವಸ್ತ್ರಗಳ ವಿತರಣೆ ಹಾಗೂ ರಸ್ತೆ ಉಬ್ಬುಗಳಿಗೆ ಬಣ್ಣ ಬಳಿಯುವ ಕಾರ್ಯ ಸೇರಿದಂತೆ ಹಲವು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ನಡೆಸಲಾಯಿತು.
ಈ ಕಾರ್ಯಕ್ರಮಗಳಲ್ಲಿ ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯ ಜಿ.ದಿನಕರ್ ಅಮೀನ್, ಜಯಂಟ್ಸ್ ಗ್ರೂಪ್ ಉಡುಪಿ ಅಧ್ಯಕ್ಷ ಜಿ.ವಿನಯ್ ಕುಮಾರ್ ಪೂಜಾರಿ, ಉಪಾಧ್ಯಕ್ಷ ಜಿ.ದಯಾನಂದ ಶೆಟ್ಟಿ, ಕಾರ್ಯದರ್ಶಿ ದಿವಾಕರ್ ಪೂಜಾರಿ, ನಿರ್ದೇಶಕರಾದ ವಾದಿರಾಜ್ ಸಾಲ್ಯಾನ್, ಡಯಾನಾ ಸುಪ್ರಿಯಾ, ಟೀನಾ, ಸಮೀತ್ ಶೆಟ್ಟಿ ಹಾಗೂ ರೇಖಾ ಪೈ, ಮಾಜಿ ಅಧ್ಯಕ್ಷರಾದ ಎಂ.ಇಕ್ಬಾಲ್ ಮನ್ನಾ, ಜಗದೀಶ್ ಅಮೀನ್, ರಾಜೇಶ್ ಶೆಟ್ಟಿ ಹಾಗೂ ಚಿದಾನಂದ ಪೈ ಮೊದಲಾದವರು ಉಪಸ್ಥಿತರಿದ್ದರು.




