ಶಿರೂರಿನಲ್ಲಿ ಪಶು ಚಿಕಿತ್ಸಾಲಯ: ಸಚಿವರಿಗೆ ಗಂಟಿಹೊಳೆ ಮನವಿ

ಬೈಂದೂರು: ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಇಂದು ಪಶು ಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರನ್ನು ಭೇಟಿ ಮಾಡಿ ಬೈಂದೂರು ಕ್ಷೇತ್ರದ ಅಗತ್ಯತೆಗಳ ಕುರಿತು ಚರ್ಚಿಸಿದರು.
ಶಿರೂರಿನಲ್ಲಿ ಹೊಸ ಪಶು ಚಿಕಿತ್ಸಾಲಯ, ಕಾಲ್ತೋಡು, ಸಿದ್ಧಾಪುರ, ಅಜ್ರಿ, ಅಂಪಾರು, ಪಶು ಚಿಕಿತ್ಸಾಲಯ ಕೇಂದ್ರ ಮೇಲ್ದರ್ಜೆಗೆ, ಪಶು ವೈದ್ಯಕೀಯ ಸಹಾಯಕರ ನೇಮಕಾತಿ, ಖಾಲಿ ಇರುವ ಪಶು ವೈದ್ಯರ ನೇಮಕಾತಿ, ಪಶು ಪಾಲಿ ಕ್ಲಿನಿಕ್ ಮಂಜೂರು ಮಾಡುವಂತೆ ಶಾಸಕರು ಸಚಿವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಅದೇ ರೀತಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರನ್ನು ವಿಕಾಸ ಸೌಧ ಕಚೇರಿಯಲ್ಲಿ ಅವರನ್ನು ಭೇಟಿಯಾದ ಶಾಸಕ ಗುರುರಾಜ್ ಗಂಟಿಹೊಳೆ, ಗಂಗೊಳ್ಳಿ - ಕುಂದಾಪುರ ಸಂಪರ್ಕ ಸೇತುವೆ ಮತ್ತು ಕ್ಷೇತ್ರದ ರಸ್ತೆಗಳ ಅನುದಾನದ ಕುರಿತು ಮನವಿ ಮಾಡಿದರು.
Next Story





