ವಿಟ್ಲಪಿಂಡಿ: ನಾಗರಿಕ ಸಮಿತಿಯಿಂದ 10 ಸಾವಿರ ಚಕ್ಕುಲಿ ವಿತರಣೆ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ನಗರದ ಮಾರುತಿ ವಿಥೀಕಾದಲ್ಲಿ ವಿಟ್ಲಪಿಂಡಿಯ ಪ್ರಯುಕ್ತ ಹತ್ತು ಸಾವಿರ ಚಕ್ಕುಲಿಯನ್ನು ಪ್ರಸಾದವಾಗಿ ಭಕ್ತರಿಗೆ ವಿತರಿಸಲಾಯಿತು.
ಶ್ರೀವೃಂದಾವನಸ್ಥರಾಗಿರುವ ಶಿರೂರು ಮಠದ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸ್ಮರಣಾರ್ಥವಾಗಿ ಕಳೆದ ಐದು ವರ್ಷ ಗಳಿಂದ ನಾಗರಿಕ ಸಮಿತಿ ಸಂಚಾಲಕ ನಿತ್ಯಾನಂದ ಒಳಕಾಡು ಚಕ್ಕುಲಿ ಪ್ರಸಾದವನ್ನು ಭಕ್ತಾದಿಗಳಿಗೆ ವಿತರಿಸುತ್ತಿದ್ದು, ಈ ಬಾರಿಯೂ ಆ ಸಂಪ್ರದಾಯ ಮುಂದುವರಿಸಿದರು.
ಚಕ್ಕುಲಿ ಪ್ರಸಾದ ವಿತರಣೆಗೆ ಉಡುಪಿ ನಗರ ಪೊಲೀಸ್ ನಿರೀಕ್ಷಕ ಶ್ರೀಧರ ವಸಂತ್ ಸತಾರೆ ಚಾಲನೆ ನೀಡಿದರು. ಉದ್ಯಮಿ ಎಂ.ನಾಗೇಶ್ ಹೆಗ್ಡೆ, ಬಡಗುಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ಶಿರೂರು ಶ್ರೀಪಾದರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ, ಸಮಾಜ ಸೇವಕ ಭಾಸ್ಕರ್ ಶೇರಿಗಾರ್, ಜೋಸ್ ಆಲೂಕ್ಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ಗೋಪಾಲ್, ಜೋಯಾ ಆಲೂಕ್ಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಂಜಿತ್, ಭೀಮಾ ಆಭರಣ ಮಳಿಗೆಯ ಸಿಬ್ಬಂದಿ ಹಾಗೂ ಶಂಕರ್ ಶೆಟ್ಟಿ ಚಿಟ್ಪಾಡಿ, ವಿಕಾಸ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ತೈಲ ಖಾದ್ಯ ತಜ್ಞ ಶಂಕರ್ ನಾಯಕ್ ಚಕ್ಕುಲಿ ತಯಾರಿಸಿದ್ದರು.





