ಗಾಳಿ-ಮಳೆ : ಕುಂದಾಪುರದಲ್ಲಿ ಎರಡು ಮನೆಗಳಿಗೆ ಹಾನಿ

ಉಡುಪಿ : ಜಿಲ್ಲೆಯಲ್ಲಿ ಗಾಳಿ-ಮಳೆಯಿಂದ ಕುಂದಾಪುರ ತಾಲೂಕಿನಲ್ಲಿ ಎರಡು ಮನೆಗಳಿಗೆ ಭಾಗಶ: ಹಾನಿಯಾಗಿವೆ. ವಕ್ವಾಡಿ ಗ್ರಾಮದಲ್ಲಿ ಮಲ್ಲಿಕಾ ಎಂಬವರ ಮನೆ ಮಳೆಯಿಂದ ಹಾನಿಗೊಂಡಿದ್ದು 50 ಸಾವಿರ ರೂ. ನಷ್ಟದ ಅಂದಾಜು ಮಾಡಿದ್ದರೆ, ಕುಂದಾಪುರ ಕಸಬಾದ ಬಿಬಿ ಹಾಜಿರ ಅವರ ಮನೆಯೂ ಮಳೆಯಿಂದ ಹಾನಿಗೊಂಡು 20,000ರೂ. ನಷ್ಟವಾಗಿರುವ ಅಂದಾಜು ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಸರಾಸರಿ 29.7ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ 30.3, ಕುಂದಾಪುರದಲ್ಲಿ 34.8, ಉಡುಪಿಯಲ್ಲಿ 16.8, ಬೈಂದೂರಿನಲ್ಲಿ 33.8, ಬ್ರಹ್ಮಾವರದಲ್ಲಿ 25.0, ಕಾಪುವಲ್ಲಿ 13.1 ಹಾಗೂ ಹೆಬ್ರಿಯಲ್ಲಿ 35.ಮಿ.ಮೀ. ಮಳೆಯಾಗಿರುವ ವರದಿ ಬಂದಿದೆ.
Next Story




