ಪಡುಬಿದ್ರಿ, ಆ.31: ಅನಾರೋಗ್ಯದಿಂದ ಬಳಲುತ್ತಿದ್ದ ಪಾದೆಬೆಟ್ಟು ಗ್ರಾಮದ ಸುಮತಿ(65) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಆ.30ರಂದು ನಸುಕಿನ ವೇಳೆ ಮನೆಯ ಪಕ್ಕದ ದನದ ಹಟ್ಟಿಯಲ್ಲಿನ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.