ವಿಶ್ವ ರೇಬೀಸ್ ದಿನಾಚರಣೆ: ನಾಯಿಕಡಿತ, ಇಲಿಜ್ವರದ ಬಗ್ಗೆ ಮಾಹಿತಿ
ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಛೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ನಾಯಿಕಡಿತ ಹಾಗೂ ಇಲಿಜ್ವರದ ಕುರಿತ ಮಾಹಿತಿ ಕಾರ್ಯಕ್ರಮ ಪೂರ್ಣ ಪ್ರಜ್ಞ ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿ, ರೇಬೀಸ್ ಕಾಯಿಲೆ, ರೇಬೀಸ್‌ನಿಂದ ಉಂಟಾಗುವ ಮರಣ ಪ್ರಮಾಣ, ಇಲಿಜ್ವರ ಹಾಗೂ ಕಾಲರಾದಂತ ಸಾಂಕ್ರಾಮಿಕ ರೋಗಗಳ ಕುರಿತು ಮಾಹಿತಿ ನೀಡಿದರಲ್ಲದೇ, ರೋಗಗಳಿಂದ ರಕ್ಷಿಸಿಕೊಳ್ಳಲು ತೆಗೆದು ಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಿವರಿಸಿದರು.
ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ.ರೆಡ್ಡಪ್ಪ ಮಾತನಾಡಿ, ರೇಬೀಸ್ ಕಾಯಿಲೆಯ ಮುನ್ನೆಚ್ಚರಿಕಾ ಕ್ರಮಗಳು, ಲಸಿಕೆಗಳು, ಬೀದಿನಾಯಿಗಳ ನಿಯಂತ್ರಣ ಕುರಿತು ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮೈಕ್ರೋಬಯಾಲಜಿಸ್ಟ್ ಸುಮಾ ಹೆಗ್ಡೆ, ಎಪಿಡಮೊಲಜಿಸ್ಟ್ ಡಾ.ತೇಜಸ್ವಿನಿ ಇಲಿಜ್ವರ ಹಾಗೂ ರೇಬೀಸ್ ಕುರಿತು ಉಪನ್ಯಾಸ ನೀಡಿದರು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ.ರಾಮು ಎಲ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್, ಸಹಾಯಕ ಪ್ರಾಧ್ಯಾಪಕ ಡಾ.ಮಹೇಶ್ ಭಟ್, ಐ.ಕ್ಯೂ.ಎ.ಸಿ ನ ಸಂಯೋಜಕ ವಿನಯ ಕುಮಾರ್, ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ರಮೇಶ್ ಟಿ.ಎಸ್, ರೇಂಜರ್ಸ್ ಲೀಡರ್ ಜ್ಯೋತಿ ಆಚಾರ್ಯ, ಜಯಲಕ್ಷ್ಮಿ, ಪೂರ್ಣ ಪ್ರಜ್ಞ ಕಾಲೇಜಿನ ವಿದ್ಯಾರ್ಥಿಗಳು ಪ್ರಾಧ್ಯಾಪಕರು ಉಪಸ್ಥಿತರಿದ್ದರು.