ಉತ್ತರ ಪ್ರದೇಶ: ನೋಂದಣಿಯಾಗದ ಮದರಸಗಳಿಗೆ ಮಾಸಿಕ 10 ಸಾವಿರ ದಂಡ

Photo: PTI
ಲಕ್ನೋ: ಉತ್ತರ ಪ್ರದೇಶದ ಮದರಸ ಶಿಕ್ಷಣ ಮಂಡಳಿಯ ಅಧಿಕೃತ ಮಾನ್ಯತೆ ಪಡೆಯದೇ ಕಾರ್ಯನಿರ್ವಹಿಸುತ್ತಿರುವ ಮದರಸಗಳಿಗೆ ಮಾಸಿಕ 10 ಸಾವಿರ ರೂಪಾಯಿ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸಗಳ ಅಧಿಕೃತತೆ, ಮೂಲಸೌಕರ್ಯ ಮತ್ತು ನೆರವು ಹರಿವಿನ ಬಗ್ಗೆ ವಿವರ ಪಡೆಯಲು ನಡೆಸಿದ್ದ ಸಮಗ್ರ ಸಮೀಕ್ಷೆಯ ಬಳಿಕ ಮಾನ್ಯತೆ ಪಡೆಯದ ಮದರಸಗಳಿಗೆ ಮಂಡಳಿ ನೋಟಿಸ್ ನೀಡಿದೆ. ಈ ಬಗ್ಗೆ ಮೂಲ ಶಿಕ್ಷಣ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಮಜಾಫರ್ ನಗರ ಜಿಲ್ಲೆಯಲ್ಲಿ 12ಕ್ಕೂ ಹೆಚ್ಚು ಮದರಸಗಳಿಗೆ ನೋಟಿಸ್ ಜಾರಿಗೊಳಿಸಿದೆ.
ನೋಟಿಸ್ ಪಡೆದ ಮೂರು ದಿನಗಳ ಒಳಗಾಗಿ ಸೂಕ್ತ ದಾಖಲೆಗಳನ್ನು ಸಲ್ಲಿಸಲು ವಿಫಲವಾದಲ್ಲಿ ಮಾಸಿಕ 10 ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ನೋಟಿಸ್ ನಲ್ಲಿ ಎಚ್ಚರಿಸಲಾಗಿದೆ. ರಾಜ್ಯದಲ್ಲಿ 24 ಸಾವಿರ ಮದರಸಗಳಿದ್ದು, ಕೇವಲ 16 ಮಾತ್ರ ನೋಂದಣಿಯಾಗಿ ಮಾನ್ಯತೆ ಪಡೆದಿವೆ. ಉಳಿದ ಸಂಸ್ಥೆಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುವುದು ಎಂದು ಶಿಕ್ಷಣ ಮಂಡಳಿ ಸ್ಪಷ್ಟಪಡಿಸಿದೆ.
Next Story





