“ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್(ಸ)” ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ

ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕದ ವತಿಯಿಂದ ಸೆಪ್ಟೆಂಬರ್ 3ರಿಂದ 14ರವರೆಗೆ “ಪ್ರವಾದಿ ಮುಹಮ್ಮದ್(ಸ) – ನ್ಯಾಯದ ಹರಿಕಾರ” ರಾಜ್ಯವ್ಯಾಪಿ ಜಾಗೃತಿ ಅಭಿಯಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಟ್ಕಳ ಶಾಖೆಯು ಉತ್ತರ ಕನ್ನಡ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದೆ.
“ನ್ಯಾಯದ ಹರಿಕಾರ ಪ್ರವಾದಿ ಮುಹಮ್ಮದ್(ಸ)” ಎಂಬ ವಿಷಯದಡಿ ನಡೆಯುವ ಈ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಲು ಅರ್ಹರಾಗಿದ್ದಾರೆ. ಸ್ಪರ್ಧೆ ಎಲ್ಲರಿಗೂ ಮುಕ್ತವಾಗಿದ್ದು, ಪ್ರಬಂಧವು ಕೈಬರಹದಲ್ಲಿಯೇ A4 ಗಾತ್ರದ ಕಾಗದದಲ್ಲಿ ಬರೆಯಲ್ಪಡಬೇಕು. ಒಂದೇ ಬದಿಯಲ್ಲಿ 4ರಿಂದ 5 ಪುಟಗಳನ್ನು ಮೀರದಂತೆ ಬರಹ ಸೀಮಿತವಾಗಿರಬೇಕು. ಮೂಲ ಬರಹವನ್ನೇ ಪರಿಗಣಿಸಲಾಗುವುದು; ನಕಲಿ/ಕಾಪಿ ಮಾಡಿದ ಪ್ರಬಂಧಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಆಯೋಜಕರು ತಿಳಿಸಿದ್ದಾರೆ.
ವಿಜೇತರಿಗೆ ಪ್ರಥಮ ಬಹುಮಾನ: ರೂ. 8,000, ದ್ವಿತೀಯ ಬಹುಮಾನ: ರೂ. 6,000, ತೃತೀಯ ಬಹುಮಾನ: ರೂ. 4,000 ಹಾಗೂ ನಾಲ್ವರಿಗೆ ಸಮಾಧಾನಕರ ಬಹುಮಾನ: ರೂ. 1,000 ಮತ್ತು ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಗುವುದು.
ಪ್ರಬಂಧಗಳನ್ನು ಸೆಪ್ಟೆಂಬರ್ 10, 2025ರೊಳಗೆ “ಸಂಚಾಲಕರು, ಜಿಲ್ಲಾ ಮಟ್ಟದ ಸೀರತ್ ಪ್ರಬಂಧ ಸ್ಪರ್ಧೆ, ದಾವತ್ ಸೆಂಟರ್, ಸುಲ್ತಾನ್ ಸ್ಟ್ರೀಟ್, ಭಟ್ಕಳ” ಎಂಬ ವಿಳಾಸಕ್ಕೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಎಂ.ಆರ್. ಮಾನ್ವಿ (ಮೊ. 98864 55416) ಅವರನ್ನು ಸಂಪರ್ಕಿಸಬಹುದು. ಪ್ರವಾದಿ ಮುಹಮ್ಮದ್(ಸ) ಅವರ ನ್ಯಾಯಪರ ಜೀವನದ ಸಂದೇಶವನ್ನು ಸಮಾಜಕ್ಕೆ ತಲುಪಿಸುವ ಉದ್ದೇಶದಿಂದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.







