ಭಟ್ಕಳದಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವೃತ, ವಾಹನ ಸಂಚಾರಕ್ಕೆ ಅಡ್ಡಿ

ಭಟ್ಕಳ: ಭಟ್ಕಳದಲ್ಲಿ ಬುಧವಾರ ಬೆಳಗ್ಗೆಯಿಂದಲೇ ಭಾರೀ ಮಳೆ ಸುರಿಯುತ್ತಿದ್ದು, ಸಂಜೆಯವರೆಗೂ ನಿರಂತರವಾಗಿ ಮುಂದುವರಿದಿದೆ. ಈ ವ್ಯಾಪಕ ಮತ್ತು ನಿರಂತರ ಮಳೆಯಿಂದಾಗಿ ಭಟ್ಕಳದ ಹಲವು ಪ್ರದೇಶಗಳು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ಕೆರೆಯಂತಾಗಿವೆ.
ಭಟ್ಕಳದ ರಂಗೀನ್‌ಕಟ್ಟೆ ರಾಷ್ಟ್ರೀಯ ಹೆದ್ದಾರಿ ಮತ್ತು ಶಂಸುದ್ದೀನ್ ಸರ್ಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಮ್ಮೆ ನೀರು ತುಂಬಿ ನಿಂತಿದ್ದು, ಇದು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯನ್ನುಂಟುಮಾಡಿದೆ. ಇದಲ್ಲದೆ, ಭಟ್ಕಳದ ಹಳೆಯ ಬಸ್ ನಿಲ್ದಾಣದ ಮುಖ್ಯ ರಸ್ತೆ, ಮಾರಿಕಟ್ಟೆ ಮತ್ತು ಇತರೆ ಪ್ರದೇಶಗಳಲ್ಲಿ ಚರಂಡಿಗಳು ತುಂಬಿ ಹರಿದು ರಸ್ತೆಗಳ ಮೇಲೆ ನೀರು ಪ್ರವಾಹದಂತೆ ಹರಿಯುತ್ತಿದೆ. ಇದರಿಂದಾಗಿ, ನಗರದ ಹಲವು ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
Next Story





