ಭಟ್ಕಳ: ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ ನಿಂದ ‘ಗೇಟ್-ಟುಗೆದರ್'

ಭಟ್ಕಳ: ಭಟ್ಕಳ ಮುಸ್ಲಿಮ್ ಯೂತ್ ಫೆಡರೇಶನ್ (ಬಿಎಂವೈಎಫ್) ವತಿಯಿಂದ ಹೋಟೆಲ್ ರಾಯಲ್ ಓಕ್ನಲ್ಲಿ ‘ಗೇಟ್-ಟುಗೆದರ್’ಕಾರ್ಯಕ್ರಮ ಶನಿವಾರ ನಡೆಯಿತು,
ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆಯ ವ್ಯವಸ್ಥಾಪಕ ಮುಹಮ್ಮದ್ ಕುಂಞಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಸಮಾಜ ಪರಿವರ್ತನಾ ಕಾರ್ಯದಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಯುವಕರ ಶಕ್ತಿ ಸಮಾಜ ಪರಿವರ್ತನೆಯ ಪ್ರಮುಖ ಚಾಲಕ ಶಕ್ತಿಯಾಗಿದೆ ಎಂದು ಅವರು, ಫ್ರೆಂಚ್ ಕ್ರಾಂತಿಯಿಂದ ಭಾರತದ ಸ್ವಾತಂತ್ರ್ಯ ಹೋರಾಟದವರೆಗೆ, ವಿಶ್ವಾದ್ಯಂತ ಯುವಕರು ಇತಿಹಾಸ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದರು. ಅವರ ನೈತಿಕತೆ, ವರ್ತನೆ ಮತ್ತು ಮಾನವೀಯತೆ ಮಾತ್ರವೇ ಶಾಶ್ವತ ನೆನಪುಗಳನ್ನು ಬಿಟ್ಟು ಹೋಗುತ್ತದೆ” ಎಂದು ಅಭಿಪ್ರಾಯಪಟ್ಟರು.
ಬಿಎಂವೈಎಫ್ನ ಮಾಜಿ ಅಧ್ಯಕ್ಷ ಅಝೀಝುರ್ರಹ್ಮಾನ್ ನದ್ವಿ, ತಂಝೀಮ್ ಪ್ರಧಾನ ಕಾರ್ಯದರ್ಶಿ ಅಬ್ದುರ್ ರಕೀಬ್ ಎಂ.ಜೆ. ಮತ್ತಿತರರು ಮಾತನಾಡಿದರು.
ನಬಿಕ್ ಬರ್ಮಾವರ್ ಅವರ ಕಿರಾಅತ್ ಪಠಣದಿಂದ ಆರಂಭವಾದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಮುಬಶ್ಶಿರ್ ಹಲ್ಲಾರೆ ಸ್ವಾಗತಿಸಿದರು. ಅಧ್ಯಕ್ಷ ಮೌಲಾನಾ ವಸೀವುಲ್ಲಾ ಡಿ.ಎಫ್. ನದ್ವಿ ಅಧ್ಯಕ್ಷತೆ ವಹಿಸಿದ್ದರು.







