ಸಿಐಎಸ್‌ಸಿಇ ಕರ್ನಾಟಕ–ಗೋವಾ ವಲಯ ಮಟ್ಟದ ಅಥ್ಲೆಟಿಕ್ಸ್: ನ್ಯೂ ಶಮ್ಸ್ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ

ಭಟ್ಕಳ: ಬೆಳಗಾವಿಯ ಜಿಲ್ಲಾ ನೆಹರೂ ಕ್ರೀಡಾಂಗಣದಲ್ಲಿ ಜುಲೈ 22 ಮತ್ತು 23ರಂದು ನಡೆದ ಸಿಐಎಸ್‌ಸಿಇ (CISCE) ಕರ್ನಾಟಕ–ಗೋವಾ ವಲಯ ಮಟ್ಟದ ಅಥ್ಲೆಟಿಕ್ಸ್ ಮತ್ತು ಕ್ರೀಡಾಕೂಟ ಸ್ಪರ್ಧೆಗಳಲ್ಲಿ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿ ಶಾಲೆಗೆ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
14 ವರ್ಷದೊಳಗಿನ ಬಾಲಕರ ವಿಭಾಗ
• 4×100 ಮೀಟರ್ ರಿಲೇ: ಸಯ್ಯದ್ ಸಾಬಿತ್, ಫಿಹಾಮ್, ಮೊಹಮ್ಮದ್ ಮುಫೀದ್ ಹಾಗೂ ಮೊಹಮ್ಮದ್ ಶಾಫ್ ಅವರ ತಂಡ ಪ್ರಥಮ ಸ್ಥಾನ ಪಡೆದುಕೊಂಡಿತು.
• 80 ಮೀಟರ್ ಹರ್ಡಲ್ಸ್: ಮೊಹಮ್ಮದ್ ಮುಫೀದ್ ತೃತೀಯ ಸ್ಥಾನ ಗಳಿಸಿದರು.
• ಡಿಸ್ಕಸ್ ಥ್ರೋ: ಅಬ್ದುಲ್ ಗಫೂರ್ ಪ್ರಥಮ ಸ್ಥಾನ, ಉಮೈರ್ ರುಕ್ನುದ್ದೀನ್ ತೃತೀಯ ಸ್ಥಾನ ಪಡೆದರು.
17 ವರ್ಷದೊಳಗಿನ ಬಾಲಕರ ವಿಭಾಗ
• 4×100 ಮೀಟರ್ ರಿಲೇ: ಅಬ್ದುಲ್ ಅಫ್ಫು, ನಿಬ್ರಾಝ್, ಇಬ್ರಾಝ್ ಹಾಗೂ ಮೊಹಮ್ಮದ್ ಹಮೂಲ್ ಅವರ ತಂಡ ಪ್ರಥಮ ಸ್ಥಾನ ಗಳಿಸಿತು.
• 110 ಮೀಟರ್ ಹರ್ಡಲ್ಸ್: ಅಬ್ದುಲ್ ಅಫ್ಫು ಪ್ರಥಮ ಸ್ಥಾನ, ನಿಬ್ರಾಝ್ ದ್ವಿತೀಯ ಸ್ಥಾನ ಪಡೆದರು.
• 100 ಮೀಟರ್ ಓಟ: ಅಬ್ದುಲ್ ಅಫ್ಫು ಪ್ರಥಮ ಸ್ಥಾನ ಪಡೆದರು.
• 200 ಮೀಟರ್ ಓಟ: ಅಬ್ದುಲ್ ಅಫ್ಫು ಪ್ರಥಮ ಸ್ಥಾನ, ಇಬ್ರಾಝ್ ತೃತೀಯ ಸ್ಥಾನ ಗಳಿಸಿದರು.
• ಶಾಟ್‌ಪುಟ್: ಫಲಾಹ್ ಎಂ.ಜೆ. ತೃತೀಯ ಸ್ಥಾನ ಪಡೆದರು.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ತರಬೇತುದಾರರು, ಶಿಕ್ಷಕ ವೃಂದ ಹಾಗೂ ಪಾಲಕರು ಅಭಿನಂದನೆ ಸಲ್ಲಿಸಿದ್ದು, ಮುಂದಿನ ಹಂತದ ಸ್ಪರ್ಧೆಗಳಲ್ಲಿಯೂ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.






