ಭಟ್ಕಳ ಉಪವಿಭಾಗದ ಎಎಸ್‌ಪಿಯಾಗಿ ಐಪಿಎಸ್ ಅಧಿಕಾರಿ ರಾನು ಗುಪ್ತಾ ನೇಮಕ

ಭಟ್ಕಳ: ಕರ್ನಾಟಕ ಸರ್ಕಾರದ ಆದೇಶದಂತೆ ಐಪಿಎಸ್ ಅಧಿಕಾರಿ ರಾನು ಗುಪ್ತಾ ಅವರನ್ನು ಭಟ್ಕಳ ಉಪವಿಭಾಗದ ನೂತನ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ)ಯಾಗಿ ನೇಮಕ ಮಾಡಲಾಗಿದೆ.
ಬಿಹಾರ ಮೂಲದ ರಾನು ಗುಪ್ತಾ ಅವರು 2024ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ದ್ದಾರೆ. ಡಿ.29, 2025ರಿಂದ ತುಮಕೂರು ಜಿಲ್ಲೆಯಲ್ಲಿ ಜಿಲ್ಲಾ ಪ್ರೊಬೇಷನರಿ ತರಬೇತಿ (ಡಿಪಿಟಿ) ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸರ್ಕಾರದ ನೂತನ ಆದೇಶದ ಬಳಿಕ ಭಟ್ಕಳಕ್ಕೆ ಆಗಮಿಸಿದ ಅವರು, ಭಟ್ಕಳ ಉಪವಿಭಾಗದ ಎಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
Next Story




