ಬೈಲೂರಿನಲ್ಲಿ ಆಕಸ್ಮಿಕ ಅಗ್ನಿ ಅವಘಡ: ಮನೆ ಸಂಪೂರ್ಣ ಹಾನಿ

ಭಟ್ಕಳ: ಬೈಲೂರು ಗ್ರಾಮದ ಮೂರುಕಟ್ಟೆ ನಿವಾಸಿ ಈಶ್ವರ ನಾಯ್ಕ ಸಸಿಹಿತ್ತಲ ಅವರ ಮನೆಯಲ್ಲಿ ನವೆಂಬರ್ 2ರಂದು ಸಂಜೆ ಸುಮಾರು 4 ಗಂಟೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಮನೆ ಸಂಪೂರ್ಣ ಹಾನಿಗೊಳ ಗಾಗಿದೆ. ಘಟನೆಯಿಂದಾಗಿ ಕುಟುಂಬವು ಸಂಕಷ್ಟಕ್ಕೆ ಸಿಲುಕಿದೆ.
ಅಗ್ನಿ ಅವಘಡದ ವಿಷಯ ತಿಳಿದ ತಕ್ಷಣ ಮಾಸ್ತಪ್ಪ ನಾಯ್ಕ ಬಲಸೆ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದ ಮನೆಯನ್ನು ಪರಿಶೀಲಿಸಿದರು. ಬಳಿಕ ಸಂತ್ರಸ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದರು.
ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬದ ನೆರವಿಗೆ ಧಾವಿಸಿದ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬೈಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣ ನಾಯ್ಕ ಬಲಸೆ, ನಾಗರಾಜ ನಾಯ್ಕ, ಚೇತನ್ ನಾಯ್ಕ, ಕೃಷ್ಣ ನಾಯ್ಕ ಹಾಗೂ ಭಾಸ್ಕರ ದೇವಾಡಿಗ ಉಪಸ್ಥಿತರಿದ್ದರು.
Next Story




