ಐಸಿಎಸ್ಇ 10ನೇ ತರಗತಿ ಪರೀಕ್ಷೆ: ಭಟ್ಕಳದ ನ್ಯೂ ಶಮ್ಸ್ ಶಾಲೆಗೆ ಶೇ.100 ಫಲಿತಾಂಶ

ಭಟ್ಕಳ: ಐಸಿಎಸ್ಇ 10ನೇ ತರಗತಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಭಟ್ಕಳದ ನ್ಯೂ ಶಮ್ಸ್ ಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ.
ಒಟ್ಟು 83 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ 41 ವಿದ್ಯಾರ್ಥಿಗಳು, ಪ್ರಥಮ ದರ್ಜೆ 32 ವಿದ್ಯಾರ್ಥಿಗಳು, ದ್ವಿತೀಯ ದರ್ಜೆ 9 ವಿದ್ಯಾರ್ಥಿಗಳು, ತೃತೀಯ ದರ್ಜೆಯಲ್ಲಿ ಒಬ್ಬ ವಿದ್ಯಾರ್ಥಿ ಉತ್ತೀರ್ಣನಾಗಿದ್ದಾನೆ.
ಅನಮ್ ರುಕ್ನುದ್ದೀನ್ (ಮೊಹಮ್ಮದ್ ಯಾಕೂಬ್ ರುಕ್ನುದ್ದೀನ್ ಪುತ್ರಿ) – 95.6%, ಫೈಹಾ (ಫೈಯಾಝ್ ಅಹ್ಮದ್ ಸಿದ್ದಿಬಾಪ ಪುತ್ರಿ) – 94.8%, ಅಲ್ವೀನಾ (ಮುಹಮ್ಮದ್ ತಜೀಮ್ ಬಿಡ್ಚೋಲ್ ಪುತ್ರಿ) – 92%, ಅನಾಮ್ ಕಾಜಿಯಾ (ಮೊಹಮ್ಮದ್ ಶೀಝ್ ಕಾಜಿಯಾ ಪುತ್ರಿ) – 91.8%, ಆಯಿಶ ಶಾಬಂದ್ರಿ (ಮುಹಮ್ಮದ್ ಅಸೀಮ್ ಶಾಬಂದ್ರಿ ಪುತ್ರಿ) – 91.8%, ಮುಹಮ್ಮದ್ ಅಝಾನ್ (ಅಬ್ದುಲ್ ಅಝೀಝ್ ಕಾದ್ರಿ ಪುತ್ರ) – 90.4% ಅಂಕಗಳನ್ನು ಗಳಿಸಿ ಶಾಲೆಗೆ ಟಾಪರ್ ಆಗಿದ್ದಾರೆ.
ಉರ್ದುವಿನಲ್ಲಿ ಅಹ್ಮದ್ ದಾಮ್ದಾ ಫಕ್ಕಿ, ಫೈಹಾ, ಆಯಿಷಾ ಶಾಬಂದ್ರಿ, ಸಾಮಾಜಿಕ ಶಾಸ್ತ್ರ ವಿಷಯದಲ್ಲಿ ಅನಮ್ ರುಕ್ನುದ್ದೀನ್, ಶಾರೀರಿಕ ಶಿಕ್ಷಣದಲ್ಲಿ ಅಲ್ವೀನಾ, ಅನಮ್ ರುಕ್ನುದ್ದೀನ್, ಫೈಹಾ 100 ಶೇ. ಅಂಕಗಳನ್ನು ಗಳಿಸಿದ್ದಾರೆ ಎಂದು ಶಾಲೆಯ ಪ್ರಕಟನೆ ತಿಳಿಸಿದೆ.





