ಕಸ್ತೂರಿ ರಂಗನ್ ವರದಿಯ 7 ನೇ ಅಧಿಸೂಚನೆವರೆಗೂ ವಿಸ್ತೃತ ವರದಿ ಮಂಡನೆ ಆಗಿಲ್ಲ: ರವೀಂದ್ರ ನಾಯ್ಕ

ಶಿರಸಿ: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿ ಇಲ್ಲಿಯ ವರೆಗೆ ಪ್ರಕಟಗೊಂಡ 7 ನೇ ಅಧಿಸೂಚನೆವರೆಗೂ ವಿಸ್ತೃತ ವರದಿ ಮಂಡನೆ ಆಗಿಲ್ಲ. ಕಸ್ತೂರಿ ರಂಗನ್ ವರದಿಗೆ ಬೌತಿಕ ಪರಿಶೀಲನೆ ಮಾತ್ರ ಮಾನದಂಡ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ರಾಜ್ಯ ಸರ್ಕಾರವು ಕಸ್ತೂರಿ ರಂಗನ್ ವರದಿಗೆ ಭೌತಿಕ ಪರಿಶೀಲನೆ ಜರುಗಸಲು ಕೇಂದ್ರ ಸರ್ಕಾರಕ್ಕೆ ಶಿಪ್ಪಾರಸ್ಸು ಮಾಡಿರುವ ಹಿನ್ನಲೆಯಲ್ಲಿ ಜರುಗಿದ ಸಂವಾದದಲ್ಲಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೊರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾತ್ಕ ಮೇಲಿನಂತೆ ಹೇಳಿದರು.
ಈ ಹಿಂದೆ ಭೌತಿಕ ಸಮೀಕ್ಷೆಗೆ ಕೇಂದ್ರ ಸರ್ಕಾರವು 2 ಸಾರಿ ಸುತ್ತೋಲೆ ರವಾನಿಸಿದಾಗಲೂ, ಕೇರಳಾ ಬಿಟ್ಟು ಕರ್ನಾಟಕ ಸಹಿತ ಸೇರಿ 5 ರಾಜ್ಯಗಳು ಭೌತಿಕ ಸಮೀಕ್ಷೇ ಜರುಗಿಸಿದ್ದು ಇರುವುದಿಲ್ಲ. ಅಲ್ಲದೇ, 2015 ರಲ್ಲಿ ಕೇಂದ್ರ ಸರ್ಕಾರದ ಉಸ್ತುವಾರಿ ಜರುಗಿದ ಉನ್ನತ ಮಟ್ಟದ ಸಭೆಯಲ್ಲಿ ರಾಜ್ಯದ ಪ್ರತಿನಿಧಿ ಭೌತಿ ಪರಿಶೀಲನೆ ಪ್ರಗತಿಯಲ್ಲಿ ಇದೆ ಎಂದು ಪ್ರಸ್ತಾಪಿಸಿದಾಗಲೂ ರಾಜ್ಯದಿಂದ ಬೌತಿಕ ಸಮೀಕ್ಷೇ ಜರುಗಿದ್ದು ಇರುವುದಿಲ್ಲ. ಆದ್ದರಿಂದ ಈಗ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಜರುಗಿಸಿ ಸರ್ವ ಪಕ್ಷ ನಿರ್ಣಯಿಸಿ ಭೌತಿಕ ಪರಿಶೀಲನೆ ಕೇಂದ್ರ ಸರ್ಕಾರಕ್ಕೆ ವರದಿ ನೀಡಿರುವುದರಿಂದ ಕೇಂದ್ರ ಸರ್ಕಾರವು ಭೌತಿಕ ಪರಿಶೀಲನೆಗೆ ಅವಕಾಶ ನೀಡಬೇಕೇಂದು ಸಂಸದರಲ್ಲಿ ಅವರು ಕೋರಿದ್ದರು.
ಸಂವಾದದಲ್ಲಿ ಹಿರಿಯ ವಕೀಲರಾದ ಸದಾನಂದ ಭಟ್ ನೀಡಗೋಡ,ತಾಲೂಕಾ ಗ್ರಾಮ ಪಂಚಾಯತ್ ಒಕ್ಕೋಟದ ಮಾಜಿ ಅಧ್ಯಕ್ಷ ನವೀನ್ ಶೆಟ್ಟಿ ಚಿಪಗಿ , ತಾಲೂಕಾ ಪಂಚಾಯತ್ ಮಾಜಿ ಸದಸ್ಯ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಸಂವಾದದಲ್ಲಿ ಜಿಲ್ಲಾ ಸಂಚಾಲಕರಾದ ಮಹಭಲೇಶ್ವರ ನಾಯ್ಕ ಬೇಡ್ಕಣಿ ಸ್ವಾಗತಿಸಿದರು. ಸಂವಾದದಲ್ಲಿ ಇಬ್ರಾಹಿಂ ಗೌಡಳ್ಳಿ , ಮಹೇಶ ನಾಯ್ಕ ಕಾನಕ್ಕಿ, ರಾಜೇಶ್ ಮಿತ್ರ ನಾಯ್ಕ ತೆಂಗಿನಕೇರಿ,ಯಲ್ಲಾಪುರ ಅಧ್ಯಕ್ಷರಾದ ಭೀಮಸೀ ವಾಲ್ಮೀಕಿ, ಮುಂಡಗೋಡ ಅಧ್ಯಕ್ಷರಾದ ಶಿವಾನಂದ ಜೋಗಿ, ನೆಹರು ನಾಯ್ಕ ಬಿಳೂರು, ಹರಿಹರ ನಾಯ್ಕ ಓಂಕಾರ, ಎಮ್ ಆರ್ ನಾಯ್ಕ ಕಂಡ್ರಾಜಿ, ಕಿರಣ ಮರಾಠಿ ದೇವನಳ್ಳಿ, ಅರವಿಂದ ಗೌಡ ಅಂಕೋಲ, ವಿಜು ಪೀಟರ್ ಪಿಳ್ಳೆ , ಸಂಕೇತ ನಾಯ್ಕ ಹಲಗೇರಿ ಮುಂತಾದವರು ಚರ್ಚಿಸಿದರು. ಗ್ರೀನ್ ಕಾರ್ಡ ಪ್ರಮುಖರಾದ ರಾಜು ನರೇಬೈಲ್, ಚಂದ್ರ ಶಾನಭಾಗ ಬಂಡಲ, ಚಂದ್ರಣ್ಣ ಮರಗುಂಡಿ , ಗಣಪತಿ ಟಿ ನಾಯ್ಕ ಬಾಳೆಕೊಪ್ಪ, ಲಕ್ಷ್ಮಣ ನಾಯ್ಕ, ಸುಭಾಷ್ ಗಾವಡಾ ಜೋಯಿಡಾ, ಯಶವಂತ ನಾಯ್ಕ , ಎಮ್ ಎಸ್ ನಾಯ್ಕ ಬಿದ್ರಖಾನ್ , ಚಂದ್ರಕಾಂತ ಇಟಗಿ, ರಾಮಚಂದ್ರ ನಾಯ್ಕ ಬೇಡ್ಕಣಿ, ಬಸ್ತಾ್ಯಂವ ಕಣ್ಣೀಗೇರಿ, ಸುಧಾಕರ ಮಡಿವಾಳ, ಶಿವಾಜಿ ಬೆಕ್ಕೋಡ, ಉದಯ ನಾಯ್ಕ ಮಂಕಿ , ಯಶೋದ ನೌಟೂರು, ಗಂಗಾ ರಾಮ ನಾಯ್ಕ ನೆಗ್ಗು, ನಿಂಗವ್ವ ಸುಭಾಸ ಮಲ್ಲೂರು, ಸವಿತಾ ನಾಯ್ಕ ಮುಂತಾದವರು ನೇತೃತ್ವ ವಹಿಸಿದರು.
ಭೌತಿಕ ಸರ್ವೇಗೆ ಕಾರಣ:
ಭೌತಿಕ ಸಮೀಕ್ಷೆಯಿಂದ ಸೂಕ್ಷ್ಮ ಪ್ರದೇಶದ ಬೌಗೋಳಿಕ ಚಿತ್ರಣದಲ್ಲಿ ನಿಖರತೆ, ವೈಜ್ಞಾನಿಕ ಅಂಕೆ ಸಂಖ್ಯೆ, ತಜ್ಞರ ಅಭಿಪ್ರಾಯ , ಕ್ಷೇತ್ರದಲ್ಲಿ ದಟ್ಟ ಜನಸಂಖ್ಯೆ ಸಾಂದ್ರತೆ ಪ್ರಮಾಣ, ಸಾರ್ವಜನಿಕ ಮತ್ತು ಮೂಲಭೂತ ಸೌಕರ್ಯದ ಮಾಹಿತಿ ಅಲ್ಲದೇ, ಮಾನವ ಮತ್ತು ಮಾನವ ರಹಿತ ಮತ್ತು ಜನ ಜೀವನ ಪ್ರದೇಶ ಗುರುತಿಸಲು ಸಾದ್ಯವಾಗುವು ದರಿಂದ ಭೌತಿಕ ಸಮೀಕ್ಷೆಗೆ ಅವಕಾಶ ಒದಗಿಸಿ ಕೊಡಬೇಕು ಎಂದು ಕೇಂದ್ರ ಪರಿಸರ ಮತ್ತು ಹಮವಾನ ಬದಲಾವಣೆ ಸಚಿವಾಲಯದ ಸಚಿವರಾದ ಭೂಪೇಂದ್ರ ಯಾಧವ ಅವರಿಗೆ ಬರೆದಂತ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಅವರು ಹೇಳಿದರು.






