ಅಕೇಶಿಯಾಕ್ಕೆ ಸರಕಾರ ನಿಷೇಧಿಸಿ 10 ವರ್ಷ| ಸಂಪೂರ್ಣ ನಿಷೇಧಕ್ಕೆ ಅರಣ್ಯವಾಸಿಗಳ ಆಗ್ರಹ: ರವೀಂದ್ರ ನಾಯ್ಕ

ಶಿರಸಿ : ಪರಿಸರ ಅಸಮತೋಲನಕ್ಕೆ ಕಾರಣವಾಗುವುದರಿಂದ ನೀಲಗಿರಿ ಮತ್ತು ಅಕೇಶಿಯಾ ಸಸಿಗಳನ್ನು ನೆಡುವು ದನ್ನು ನೀಷೇಧಿಸಲು ರಾಜ್ಯ ಸರಕಾರ ಕಾನೂನು ಮತ್ತು ಆದೇಶಿಸಿ 10 ವರ್ಷಗಳಾದರು, ಸರ್ಕಾರ ನಿಷೇಧಿಸಿದ ಅಕೇಶಿಯಾ, ಅರಣ್ಯ ಇಲಾಖೆೆ ಇಂದಿಗೂ ಅಕೇಶಿಯಾ ನೆಡುತೋಪು ಮಾಡುತ್ತೀರುವುದು ಖಂಡನಾರ್ಹ ಹಾಗೂ ಸಂಪೂರ್ಣ ನಿಷೇಧಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
ಅಕೇಶಿಯಾ ಮತ್ತು ನೀಲಗಿರಿ ಸಸ್ಯ ಪ್ರಭೇಧ ನೆಡುವುದನ್ನು ನಿಷೇಧಿಸುವಂತೆ, ಅಂದಿನ ಸಿಎಂ ಸಿದ್ದರಾಮಯ್ಯ ಮತ್ತು ಅರಣ್ಯ ಸಚಿವ ರಮಾನಾಥ ರೈ ಕಾನೂನು ಜಾರಿಗೆ ತರಲು ಮತ್ತು ನಿಷೇಧವನ್ನು ಪರಿಣಾಮಕಾರಿಗಾಗಿ ಜಾರಿಗೊಳಿ ಸಲು ಶಾಸಕಾಂಗದಲ್ಲಿ ಮಸೂಧೆ ಜಾರಿಗೊಳಿಸಲಾಗಿತ್ತು. ಆದಾಗ್ಯೂ ಸಹಿತ ಅರಣ್ಯ ಮತ್ತು ವಿವಿಧ ಅರಣ್ಯ ಪ್ರದೇಶ ಅಭಯಾರಣ್ಯ ಹಾಗೂ ಮೀಸಲು ಅರಣ್ಯದಲ್ಲೂ ಸಹಿತ ಅರಣ್ಯ ಇಲಾಖೆ ಅಕೇಶಿಯಾ ನೆಡುತೋಪು ಜರುಗಿಸುತ್ತೀರು ವುದು ವಿಷಾಧಕರವೆಂದು ಅವರು ಹೇಳಿದರು.
ನೈಸರ್ಗಿಕ ಅರಣ್ಯವಲ್ಲದ ಇಂತಹ ನಿಷೇಧಿತ ನಡುತೋಪುಗಳಿಂದಾಗಿಯೇ ಅರಣ್ಯ ಇಲಾಖೆಯು ಅರಣ್ಯ ಪ್ರಮಾಣ ಹೆಚ್ಚಾಗಿದೆ ಎಂದು ವ್ಯಾಖ್ಯಾನಿಸುತ್ತೀದೆ. ಇಂತಹ ಅವೈಜ್ಞಾನಿಕ ಗಿಡಗಳ ನೆಡುತೋಪುಗಳಿಂದ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಭೂಮಿಯ ಪ್ರಮಾಣ 2 ವರ್ಷದಲ್ಲಿ 13 ಚ. ಕಿಮೀ ನಷ್ಟು ಹೆಚ್ಚಿದೆ. ಎಂಬುದಾಗಿ ಭಾರತೀಯ ಅರಣ್ಯ ವರದಿಯಲ್ಲಿ ತಪ್ಪಾಗಿ ಉಲ್ಲೇಖಿಸಿದೆ. ಮಲೆನಾಡಿನಲ್ಲಿ ಕಾಡು ಜಾತಿಯ ಮರಗಳ ಬದಲಿಗೆ ಅಕೇಶಿಯಾ, ನೀಲಗಿರಿ ನೆಡುತೋಪು ಮಾಡುವುದರಿಂದ ಸದಾ ಹಸಿರು ಬಣ್ಣದ ಕಾಡಿನ ಪ್ರಮಾಣ ಕಡಿಮೆಯಾಗಿ, ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರಕ್ಕೆ ಮಾರಕವಾಗಿ ಮಲೆನಾಡಿಗೆ ಅಕೇಶಿಯಾ ಶಾಪವಾಗಿದೆ ಎಂದು ಅವರು ಹೇಳಿದರು.
ಮಲೆನಾಡು ವಿರೋಧಿ ಅಕೇಶಿಯಾ ಕಡಿಯುವುದು, ನೆಡುವುದು ವ್ಯವಹಾರ ಆಗಬಾರದು.ಬಂಜರು ಭೂಮಿ ಮತ್ತು ಮಣ್ಣಿನ ಸವಕಳಿ ತಡೆಯುವ ಉದ್ದೇಶ ಇಲ್ಲದಿದ್ದಾಗ್ಯೂ ಅಕೇಶಿಯಾ ಗಿಡ ನೆಟ್ಟಿರುವುದು ಕಾಣ ಸಿಗುತ್ತದೆ ಎಂದು ನಡುತೋಪು ಮಾಡಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಅರಣ್ಯದಲ್ಲಿ ಅಕೇಶಿಯಾ ನೆಡುವ ಪ್ರದೇಶವು ಹೆಸರಿಗಷ್ಟೇ ಅರಣ್ಯ ಸಮೃದ್ದಿ . ಅಕೇಶಿಯಾ ಕಾಡು ನಾಶ ಮಾಡುತ್ತದೆ, ಉದುರಿದ ಎಲೆಗಳು ಜಮೀನಿನ ಫಲವತ್ತತೆ ಕುಂಟಿತಗೊಳಿಸುತ್ತಿದೆ, ತೆರದ ಬಾವಿ ಮತ್ತು ಕೊಳವೆ ಬಾವಿಗಳಲ್ಲಿ ಅತಂರ್ಜಲ ಮಟ್ಟ ಕುಸಿತವಾಗುವುದು, ಅಕೇಶಿಯಾ ಮರದಲ್ಲಿ ಪಕ್ಷಿಗೂಡು ಕಟ್ಟುವುದಿಲ್ಲ, ಪ್ರಾಣಿಗಳಿಗೆ ನೆಲೆ ಸಾಧ್ಯ ವಿಲ್ಲ, ಅಕೇಶಿಯಾ ಬುಡದಲ್ಲಿ ಬೇರೆ ಗಿಡವಾಗಲೀ ಹುಲ್ಲು ಕೂಡಾ ಹುಟ್ಟುವುದಿಲ್ಲ ಅಲ್ಲದೇ, ವನ್ಯ ಪ್ರಾಣಿ ಪಕ್ಷಿಗಳಿಗೆ ಹಣ್ಣು ಹಂಪಲಿನ ಕೊರತೆ ಎಂದು ವೈಜ್ಞಾನಿಕ ವರದಿಯಲ್ಲಿ ಉಲ್ಲೇಖೀಸ್ಲಟ್ಟಿದೆ. ಪರಿಸರ ವಿರೋಧಿ ಮಾರಕವಾದ ಅಕೇಶಿಯಾ ಸಂಪೂರ್ಣ ನಿಷೇಧಿಸಲು ಅರಣ್ಯವಾಸಿಗಳು ಆಗ್ರಹಿಸಿದರು.
ಕರ್ನಾಟಕ ರಾಜ್ಯದಲ್ಲಿ ಅಕೇಶಿಯಾ ಮತ್ತು ನೀಲಗಿರಿ ಸಸಿಗಳನ್ನು ನೆಡುವುದನ್ನು ನಿಷೇಧಿಸುವ ಪ್ರಮುಖ ತೀರ್ಮಾನ ವನ್ನ ಸಚಿವ ಸಂಪುಟ ಸಭೆಯಲ್ಲಿ ನವೆಂಬರ್ 23, 2016 ರಂದು ತೆÀಗೆದುಕೊಳ್ಳಲಾಗಿತ್ತು. ಈ ಕುರಿತು ಅಧೀಕೃತ ಸೂಚನೆಗಳು ಹಾಗೂ ತಿದ್ದುಪಡಿ ಪ್ರಕ್ರಿಯೆಗಳು ನವೆಂಬರ್ ಮತ್ತು ಡಿಸೆಂಬರ್ 2016 ರ ಅವಧಿಯಲ್ಲಿ ಜಾರಿ ಬಂದವು .ಮೇಲ್ಕಾಣಿಸಿದ ಅಂಶಕ್ಕೆ ಸಂಭಂದಿಸಿ `` ಕರ್ನಾಟಕ ವೃಕ್ಷ ಸಂರಕ್ಷಣಾ ’’ (ತಿದ್ದುಪಡಿ ಕಾಯಿದೆ 2016 ರಲ್ಲಿ) ಕಲಂ 27 ಎಎ - ಕರ್ನಾಟಕ ಮರಗಳ ಸಂರಕ್ಷಣಾ ಕಾಯಿದೆ ಅಡಿಯಲ್ಲಿ ಸರ್ಕಾರವು ಪರಿಸರ, ಅಂತರ್ಜಲ ಅಥವಾ ಸಾರ್ವಜನಿಕ ಆರೋಗ್ಯಕ್ಕೆ ಹಾನಿಕರವೆಂದು ಪರಿಗಣಿಸಲಾದ ಜಾತಿಗಳನ್ನು ನಿಷೇಧಿಸಬಹುದು ಮತ್ತು ನಿಯಂತ್ರಿಸ ಬಹುದು ಎಂದು ಸೇರಲ್ಪಡಿಸಲಾಗಿದೆ. ಈ ನಿರ್ಧಾರಕ್ಕೆ ಅನುಗುಣವಾಗಿ ಕರ್ನಾಟಕ ಸರ್ಕಾರದ ಅರಣ್ಯ , ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯು ಡಿಸೆಂಬರ್ 7, 2016 ರಂದು ಅಧೀಕೃತ ಆದೇಶ ಪಡಿಸಿತ್ತು. ಇದರ ಅನ್ವಯ ಫೇಭ್ರವರಿ 2017 ರಿಂದ ರಾಜ್ಯಾದ್ಯಂತ ಅಕೇಶಿಯಾ ಮತ್ತು ನೀಲಗಿರಿ ತೋಪುಗಳನ್ನ ನಿರ್ಮಿಸುವುದನ್ನು ಸಂಪೂರ್ಣ ವಾಗಿ ನಿರ್ಭಂದಿಸಲಾಗಿತು. ಆದರೆ, ಅರಣ್ಯ ಇಲಾಖೆಯು ನಿಷೇಧಿಸಿದಂತಹ ಇಂತಹ ಸಸಿಗಳನ್ನು ಮಲೆನಾಡು ಮತ್ತು ಅರೆ ಮಲೆನಾಡು ಪ್ರದೇಶಗಳಲ್ಲಿ ನಡುತೋಪಿನ ಮೂಲಕ ನೆಡುವ ನಿರ್ದೇಶನ ಇಂದಿಗೂ ಚಾಲ್ತಿಯಲ್ಲಿದೆ ಎಂದು ಅವರು ಆಪಾಧಿಸಿದರು.






