ನ.12ರಂದು ಮುರ್ಡೇಶ್ವರ ಠಾಣೆಯಲ್ಲಿ ಜಪ್ತಿಯಾದ ಬೈಕ್‌ಗಳ ಸಾರ್ವಜನಿಕ ಹರಾಜು

ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳ ಸಂಬಂಧವಾಗಿ ಜಪ್ತಿ ಮಾಡಲಾಗಿದ್ದ ಎರಡು ಮೋಟಾರ್ ಸೈಕಲ್‌ಗಳನ್ನು ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡುವುದಾಗಿ ಮುರ್ಡೇಶ್ವರ ಪೊಲೀಸರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಹರಾಜು ನ.12, 2025 ರಂದು ಬೆಳಿಗ್ಗೆ 10 ಗಂಟೆಗೆ ಮುರ್ಡೇಶ್ವರ ಪೊಲೀಸ್ ಠಾಣೆ ಆವರಣದಲ್ಲಿ ನಡೆಯಲಿದೆ.
ಪೊಲೀಸ್ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ಹರಾಜಿಗೆ ಇಡಲಾದ ವಾಹನಗಳಲ್ಲಿ ಹೀರೋ ಹೋಂಡಾ ಗ್ಲಾಮರ್ ಮತ್ತು ಬಜಾಜ್ V–15 ಬೈಕ್‌ಗಳು ಸೇರಿವೆ.
ಈ ಹರಾಜು ಕ್ರಮ ಸಂಬಂಧಿತ ನ್ಯಾಯಾಲಯದ ಆದೇಶದಂತೆ ಕೈಗೊಳ್ಳಲಾಗುತ್ತಿದ್ದು, ಆಸಕ್ತ ನಾಗರಿಕರು ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಹರಾಜು ಸ್ಥಳಕ್ಕೆ ಹಾಜರಾಗಿ ಭಾಗವಹಿಸಲು ಪೊಲೀಸ್ ಇಲಾಖೆ ಮನವಿ ಮಾಡಿದೆ.
Next Story





