ಭಟ್ಕಳ, ಹೊನ್ನಾವರ ತಾಲೂಕುಗಳ ಬಗರ್ ಹುಕುಂ ಸಮಿತಿ ಸಭೆ

ಭಟ್ಕಳ: ತಾಲೂಕಿನ ಭಟ್ಕಳ ತಹಶೀಲ್ದಾರ ಕಚೇರಿಯಲ್ಲಿ ಭಟ್ಕಳ ಹಾಗೂ ಹೊನ್ನಾವರ ತಾಲೂಕುಗಳ ಬಗರ್ ಹುಕುಂ ಸಮಿತಿ ಸಭೆ ನಡೆಯಿತು.
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರು ಮತ್ತು ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ ಮಂಕಾಳ ಎಸ್. ವೈದ್ಯ ಸಭೆಗೆ ಅಧ್ಯಕ್ಷತೆ ವಹಿಸಿದರು.
ಬಗರ್ ಹುಕುಂ ಸಂಬಂಧಿಸಿದ ಬಾಕಿ ಅರ್ಜಿಗಳ ಪರಿಶೀಲನೆ ಹಾಗೂ ತ್ವರಿತ ವಿಲೇವಾರಿಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಸಭೆ ಬಳಿಕ ಭಟ್ಕಳ ಮತ್ತು ಹೊನ್ನಾವರ ತಾಲೂಕುಗಳ ಒಟ್ಟು 10 ಅರ್ಹ ಫಲಾನುಭವಿಗಳಿಗೆ ಬಗರ್ ಹುಕುಂ ಮಂಜೂರಾತಿ ಆದೇಶಪತ್ರಗಳನ್ನು ಸಚಿವರು ಹಸ್ತಾಂತರಿಸಿದರು.
ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ,ಹೊನ್ನಾವರ ತಹಶೀಲ್ದಾರ ಪ್ರವೀಣ್ ಕರಂಡೆ,ಸಮಿತಿಯ ಸದಸ್ಯರು ಮೇಘನ ತಿಮ್ಮಪ್ಪ ನಾಯ್ಕ, ರಾಜು ನಾಗಯ್ಯ ಗೊಂಡ, ಉದಯ ಬಾಬು ನಾಯ್ಕ ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
Next Story





