ಭಟ್ಕಳ: ಸಮುದ್ರದಲ್ಲಿ ದೋಣಿ ಮುಳುಗಿ ಓರ್ವ ಮೀನುಗಾರ ಮೃತ್ಯು, ಇನ್ನೋರ್ವ ನಾಪತ್ತೆ

ಫೈಲ್ ಫೋಟೊ
ಭಟ್ಕಳ : ಅರಬ್ಬಿ ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ದೋಣಿ ಅಲೆಗಳ ಹೊಡೆತಕ್ಕೆ ಮುಳುಗಿ ಓರ್ವ ಮೀನುಗಾರ ಮೃತಪಟ್ಟಿದ್ದು, ಇನ್ನೋರ್ವ ನಾಪತ್ತೆಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಸಮೀಪದ ಸಮುದ್ರದಲ್ಲಿ ನಡೆದಿದೆ.
ಜನಾರ್ಧನ ಹರಿಕಾಂತ್ ಎಂಬವರಿಗೆ ಸೇರಿದ ನವಗ್ರಹ ಹೆಸರಿನ ದೋಣಿ ಮುಳುಗಿ, ಮಾಧವ ಹರಿಕಾಂತ (45) ಎಂಬವರು ಮೃತಪಟ್ಟಿದ್ದು, ವೆಂಕಟೇಶ್ ಅಣ್ಣಪ್ಪ ಹರಿಕಾಂತ್ (26) ನಾಪತ್ತೆಯಾಗಿದ್ದಾರೆ. ಆನಂದ ಅಣ್ಣಪ್ಪ ಹರಿಕಾಂತನನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.
ಕಾಣೆಯಾದ ಮೀನುಗಾರನಿಗಾಗಿ ಸ್ಥಳೀಯ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





