ಭಟ್ಕಳ| ಮನೆಯ ಅಂಗಳದಲ್ಲಿ ಎರಡು ಬೈಕ್‌ಗಳಿಗೆ ಬೆಂಕಿ; ಇಬ್ಬರ ವಿರುದ್ಧ ದೂರು

ಭಟ್ಕಳ: ಭಟ್ಕಳ ಪುರವರ್ಗ 3ನೇ ಕ್ರಾಸ್‌ನಲ್ಲಿ ನಿಲ್ಲಿಸಿದ್ದ ಎರಡು ಮೋಟಾರ್‌ಸೈಕಲ್‌ಗಳಿಗೆ ಅಪರಿಚಿತರು ಬೆಂಕಿ ಹಚ್ಚಿದ ಘಟನೆ ನಡೆದಿದ್ದು, ಈ ಅವಘಡದಿಂದ ಮನೆಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
ಪೊಲೀಸ್ ವರದಿಯ ಪ್ರಕಾರ, ಆ. 7ರ ರಾತ್ರಿ 11 ಗಂಟೆಯಿಂದ ಆ. 8ರ ಬೆಳಗಿನ 1 ಗಂಟೆಯ ನಡುವೆ ಅಪರಿಚಿತರು ಒಂದು ಮನೆಯಲ್ಲಿ ಅಕ್ರಮವಾಗಿ ಪ್ರವೇಶಿಸಿ, ಅಂಗಳದಲ್ಲಿದ್ದ ಹೀರೋ ಹೊಂಡಾ ಪ್ಯಾಶನ್ ಪ್ಲಸ್ (ಅಂದಾಜು ರೂ.15,000) ಮತ್ತು ಟಿವಿಎಸ್ ಅಪಾಚಿ (ಅಂದಾಜು ರೂ.25,000) ಮೋಟಾರ್‌ಸೈಕಲ್‌ಗಳಿಗೆ ಬೆಂಕಿಹಚ್ಚಿದ್ದಾರೆ. ಬೆಂಕಿ ಮನೆಯ ತಗಡಿನ ಶೀಟ್ ಹಾಗೂ ಮುಂಭಾಗದ ಹಾಲ್ ಭಾಗಕ್ಕೂ ತಗುಲಿ, ಆಸ್ತಿಪಾಸ್ತಿಗೆ ಗಣನೀಯ ನಷ್ಟ ಉಂಟಾಗಿದೆ.
ಘಟನೆಯ ಬಗ್ಗೆ ಮನೆಯ ಮಾಲೀಕ ಅಬ್ದುಲ್ ವಾಹೀದ್ ಭಟ್ಕಳ ಶಹರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 92/2025ರಡಿ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 326(ಜಿ), 329(3) ಹಾಗೂ 3(5)ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Next Story





