ಭಟ್ಕಳ: ಇಬ್ಬರು ವಿದ್ಯಾರ್ಥಿನಿಯರಿಗೆ ದುಖ್ತರ್-ಎ-ಅಂಜುಮನ್ ಪ್ರಶಸ್ತಿ

ಭಟ್ಕಳ: ನವಾಯತ್ ಕಾಲನಿಯ ಅಂಜುಮನ್ ಬಾಲಕಿಯರ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿನಿಯರು ದುಖ್ತರ್-ಎ-ಅಂಜುಮನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಝೈನಬ್ ಸಫಾ ಗವಾಯಿ ಹಾಗೂ ಶಿಝಾ ಶಾಬಂದ್ರಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರವಿವಾರ ಶಾಲೆಯ ಸಭಾಂಗಣದಲ್ಲಿ ನಡೆದ ಶಾಲೆಯ ವಾರ್ಷಿಕ ಸಭೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಲಾಗಿದೆ.
ಡಿ.೧೪ರಂದು ನಡೆಯುವ ವಿಶೇಷ ಅಂಜುಮನ್ ದಿನಾಚರಣೆಯಲ್ಲಿ ಚಿನ್ನದ ಪದಕವನ್ನು ಔಪಚಾರಿಕವಾಗಿ ಪ್ರದಾನ ಮಾಡಲಾಗುವುದು ಎಂದು ಸಂಸ್ಥೆಯ ಮುಖ್ಯಾಧ್ಯಾಪಕಿ ಸಬಾ ದಮ್ಡಾ ಮಾಹಿತಿ ನೀಡಿದ್ದಾರೆ.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ. ನಯ್ಯರಿನ್ ಮಾತನಾಡಿ, ಇಂದಿನ ಹುಡುಗಿಯರು ಕಷ್ಟಪಟ್ಟು ಕೆಲಸ ಮಾಡುವುದು, ತಮ್ಮ ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ವಿನುತಾ ಎಚ್. ಗೌರವ ಅತಿಥಿಯಾಗಿ ಆಗಮಿಸಿದ್ದರು. ಸೀಮಾ ಕಾಶಿಮ್ಜಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ನಂತರ, ವಿದ್ಯಾರ್ಥಿಗಳು ನಾಟಕ, ಕವನ ವಾಚನ, ದೇಶಭಕ್ತಿ ಗೀತೆ, ಸಾಂಪ್ರದಾಯಿಕ ನೃತ್ಯ ಹಾಗೂ ಸೃಜನಶೀಲ ಪ್ರದರ್ಶನಗಳ ಮೂಲಕ ಪ್ರತಿಭೆಯನ್ನು ಪ್ರದರ್ಶಿಸಿದರು.





