ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿ ನಾಪತ್ತೆ; ದೂರು ದಾಖಲು

ಭಟ್ಕಳ: ಇಲ್ಲಿನ ಮಾವಿನಕುರ್ವೆ ಬಂದರ್ ನಿಂದ ಮಂಳವಾರ ರಾತ್ರಿ ಸುಮಾರು 11.30ಗಂಟೆ ಸಾಗರ್ ಎಂಬ ಹೆಸರಿನ ಬೋಟ್ ನಲ್ಲಿ ಅಡಿಗೆ ಕೆಲಸ ಮಾಡಿಕೊಂಡಿದ್ದ ಮೀನುಗಾರ ನಾಪತ್ತೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾಗಿರುವ ವ್ಯಕ್ತಿಯನ್ನು ಕುಮಟಾದ ಮಂಜುನಾಥ್ ಗೌಡ (51) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿಯಂತೆ ಇವರು ಸಾಗರ’ ಪರ್ಷಿಯನ್ ಬೋಟ್ ನಲ್ಲಿ ಮೀನುಗಾರರಿಗೆ ಅಡುಗೆ ಮಾಡುವ ಕೆಲಸಕ್ಕೆ ಮಾಡುತ್ತಿದ್ದು ಮಂಗಳವಾರ ರಾತ್ರಿ ಮಲಗಿಕೊಂಡಿದ್ದು ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಭಟ್ಕಳದಲ್ಲಿ ಸುರಿಯುತ್ತಿರುವ ಭಾರೀ ಮಳೆ ಮತ್ತು ಬಿರುಗಾಳಿಯ ನಡುವೆ ಬುಧವಾರ ಬೆಳಗ್ಗೆ 9 ಗಂಟೆಯಿಂದಲೇ ಶೋಧ ಕಾರ್ಯಾಚರಣೆ ಆರಂಭವಾಗಿದ್ದು, ಸತತ ಪ್ರಯತ್ನಗಳ ಹೊರತಾಗಿಯೂ ಸುಮಾರು ನಾಲ್ಕರಿಂದ ಐದು ಗಂಟೆಗಳಾದರೂ ಕಾಣಿಯಾದ ವ್ಯಕ್ತಿಯ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎನ್ನಲಾಗಿದೆ. ನಿರಂತರ ಮಳೆ ಮತ್ತು ತೀವ್ರ ಗಾಳಿಯಿಂದಾಗಿ ಹುಡುಕಾಟ ಕಾರ್ಯಕ್ಕೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು ಮಾಹಿತಿ ನೀಡಿದ್ದಾರೆ.





