ತೆಂಗಿನಗುಂಡಿ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಭಟ್ಕಳ: ಸರ್ಕಾರಿ ಪ್ರೌಢಶಾಲೆ ತೆಂಗಿನ ಗುಂಡಿ ವಿದ್ಯಾರ್ಥಿಗಳು 14 ವರ್ಷ ವಯೋಮಿತಿಯ ಕ್ರೀಡಾಕೂಟದಲ್ಲಿ ಹರ್ಷಿತಾ ವಸಂತ ದೇವಾಡಿಗ 100 ಮೀಟರ್ ಓಟ, 200 ಮೀಟರ್ ಓಟದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಭುವನ್ ಆನಂದ್ ನಾಯ್ಕ್ ಚಕ್ರ ಎಸೆತದಲ್ಲಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. 17 ವರ್ಷ ವಯೋಮಿತಿ ಕ್ರೀಡಾಕೂಟದಲ್ಲಿ ಧನ್ಯ ದುರ್ಗಯ್ಯಗೊಂಡ ದ್ವಿತೀಯ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.
ಈ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮುಖ್ಯೋಪಾಧ್ಯಾಯರಾದ ಉಷಾ ಜಿ ಭಟ್ ಎಸ್ ಡಿ ಎಮ್ ಸಿ ಅಧ್ಯಕ್ಷ ಮೋಹನ್ ದೇವಾಡಿಗ ಹಾಗು ಸದಸ್ಯರು, ದೈಹಿಕ ಶಿಕ್ಷಣ ಶಿಕ್ಷಕ ಗಿರೀಶ್ ವಿ ನಾಯಕ್ ಹಾಗೂ ಶಿಕ್ಷಕ ವೃಂದ, ಊರ ನಾಗರಿಕರು, ಹಳೆ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
Next Story