ಪ್ರಥಮ ಪಿಯು ವಾರ್ಷಿಕ ಪರೀಕ್ಷೆ| ನಿಯಮ ಉಲ್ಲಂಘಿಸಿ ಪರೀಕ್ಷೆ ನಡೆಸಿದ ಖಾಸಗಿ ಕಾಲೇಜ್: ಆರೋಪ
ಜಿಲ್ಲಾ ಉಪನಿರ್ದೇಶಕರಿಂದ ಕಾರಣ ಕೇಳಿ ನೋಟೀಸ್
ಭಟ್ಕಳ: ಉ.ಕ ಜಿಲ್ಲೆಯಲ್ಲಿ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳು ಫೆ.14 ರಿಂದ ಆರಂಭಗೊಂದ್ದು ಇಲಾಖೆ ನೀಡಿದ ವೇಳಾಪಟ್ಟಿಯಂತೆ ಪರೀಕ್ಷೆಗಳನ್ನು ನಡೆಸದೆ ತನ್ನದೇ ವೇಳಾಪಟ್ಟಿಯೊಂದಿಗೆ ಪರೀಕ್ಷೆ ನಡೆಸಿ ಪ್ರಶ್ನೆಪತ್ರಿಕೆ ಸೋರಿಕೆಗೆ ಭಟ್ಕಳದ ಖಾಸಗಿ ಪದವಿಪೂರ್ವ ಕಾಲೇಜು ಕಾರಣವಾಗಿದೆ ಎನ್ನಲಾಗಿದ್ದು, ಈ ವಿಚಾರವಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಭಟ್ಕಳದ ಸಾಗಾರ ರಸ್ತೆಯಲ್ಲಿರುವ ಶಿಕ್ಷಣ ಸಂಸ್ಥೆಗೆ ನೊಟೀಸು ಜಾರಿಮಾಡಿದ್ದಾರೆ.
ಈ ಕುರಿತಂತೆ ಕಾಲೇಜಿನ ಪ್ರಾಚಾರ್ಯರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೇ ನೀಡುತ್ತಿಲ್ಲ.
ಹಿನ್ನೆಲೆ: ಪ್ರಥಮ ವರ್ಷದ ಪಿಯುಸಿ ವಾರ್ಷಿಕ ಪರೀಕ್ಷೆಗೆ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕರ ಕಚೇರಿ ಕಾರವಾರ ಇವರು ನೀಡಿದ ವೇಳಾ ಪಟ್ಟಿಯ ಅನುಸಾರ ಪರೀಕ್ಷೆ ನಡೆಸುವ ಬದಲು ಪಟ್ಟಣದ ಕಾಲೇಜೊಂದು ಅವರದೆ ಶಾಲೆಯ ವೇಳಾ ಪಟ್ಟಿಯನ್ನು ರಚಿಸಿ ನಿಯಮ ಉಲ್ಲಂಘಿಸಿದ್ದು, ಹಲವು ಪ್ರಶ್ನೆಪತ್ರಿಕೆಗಳು ವಿದ್ಯಾರ್ಥಿಗಳ ಕೈ ಸೇರುತ್ತಿದ್ದು ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಪಿಯುಸಿ ಪ್ರಥಮ ವರ್ಷದ ಪರೀಕ್ಷೆ ನಡೆಸುವ ಮೊದಲು ಜಿಲ್ಲೆಯ ಪಿಯುಸಿ ಕಾಲೇಜಿನ ಪ್ರಾಂಶುಪಾಲರ ಅಸೋಶೀಯೆಸನ್ ಪ್ರತಿ ಕಾಲೇಜುಗಳಿಗೂ ಎರಡು ಆಯ್ಕೆಯನ್ನು ನೀಡಿತ್ತು. ಒಂದು ಪ್ರಶ್ನೆ ಪತ್ರಿಕೆಯನ್ನು ಅವರವರ ಕಾಲೇಜುಗಳೆ ನಿರ್ಮಿಸಿ ಪರೀಕ್ಷ ನಡೆಸುವದು, ಇನ್ನೊಂದು ಜಿಲ್ಲೆಯಿಂದಲೆ ಮೂರು ಆವೃತ್ತಿಯಲ್ಲಿ ಪ್ರಶ್ನೆಪತ್ರಿಕೆ ತಯಾರಿಸಿ ಒಂದೆ ವೇಳಾ ಪಟ್ಟಿ ಯಂತೆ ಪರೀಕ್ಷೆ ನಡೆಸವುದು. ಅದಕ್ಕೆ ಉತ್ತರ ಕನ್ನಡ ಜಿಲ್ಲೆಯ ಅಸೋಶೀಯೇಶನ್ ಒಂದು ವೇಳಾಪಟ್ಟಿಯಂತೆ ಪರೀಕ್ಷೆ ನಡೆಸಲು ಸಮ್ಮತಿಸಿದ್ದವು. ಅದರಂತೆ ಉಪನಿರ್ದೇಶಕರ ಕಚೇರಿ ಕಾರವಾರದವರು 3 ಆವೃತ್ತಿಯಲ್ಲಿ ವೇಳಾ ಪಟ್ಟಿಯನ್ನು ತಯಾರಿಸಿ ಪ್ರತಿ ಕಾಲೇಜುಗಳಿಗೂ ನೀಡಿತ್ತು. ಜಿಲ್ಲೆಯ ಎಲ್ಲಾ ಕಾಲೇಜುಗಳು ನಿಗದಿತ ವೇಳಾ ಪಟ್ಟಿಯಂತೆ ಪರೀಕ್ಷೆ ನಡೆಸಿದರೆ ಭಟ್ಕಳ ಆನಂದ ಆಶ್ರಮ ಪಿಯು ಕಾಲೇಜು ತನ್ನದೆ ವೇಳಾ ಪಟ್ಟಿ ನಿರ್ಮಿಸಿ ಕೊನೆಯಲ್ಲಿ ನಡೆಯುವ ಪರೀಕ್ಷೆ ಗಳನ್ನು ಮೊದಲೆ ನಡೆಸಿದೆ. ಇದರಿಂದ ಫೆ 24ಕ್ಕೆ ನಡೆಯಬೇಕಿದ್ದ ಬೊಯೋಲಜಿ, ಕಂಪ್ಯೂಟರ್ ಸೈನ್ಸ್ ಪರೀಕ್ಷೆಗಳ ಫೆ14ಕ್ಕೆ ನಡೆದಿದ್ದು ಇತರ ಕಾಲೇಜಿನ ವಿದ್ಯಾರ್ಥಿಗಳು ಅದನ್ನೆ ಅನಸರಿಸುತ್ತಿದ್ದಾರೆ. 3 ಆವೃತ್ತಿಯಲ್ಲಿ ಪ್ರಶ್ನೆ ಪತ್ರಿಕೆಗಳು ನಿರ್ಮಾಣಗೊಂಡಿರುವದರಿಂದ ಭಟ್ಕಳದಲ್ಲಿ 6 ಕಾಲೇಜುಗಳು ಇದ್ದರೆ ಯಾವುದಾದರೂ ಎರಡು, ಮೂರು ಅಥವಾ ಎಲ್ಲಾ ಕಾಲೇಜುಗಳಿಗೆ ಒಂದೆ ಪ್ರಶ್ನೆ ಪತ್ರಿಕೆ ವಿತರಣೆ ಆಗುತ್ತದೆ. ಇದನ್ನೆ ಅನುಸರಿಸಿಕೊಂಡ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಮಾಡುಕೊಳ್ಳುವ ಬದಲು ಆನಂದ ಆಶ್ರಮ ಶಾಲೆಯ ವಿದ್ಯಾರ್ಥಿಗಳ ಹಿಂದೆ ಬಿದ್ದಿದು ಅವರ ಪ್ರಶ್ನೆ ಪತ್ರಿಕೆಗಳನ್ನು ಪಡೆಯಲು ಮುಗಿಬಿದ್ದಿದ್ದಾರೆ. ಫೆ 21ರಂದು ಕೆಮೆಸ್ಟ್ರಿ ಪರೀಕ್ಷೆ ನಡೆದಿದ್ದು ಅದರಲ್ಲಿ ಆನಂದ ಆಶ್ರಮ, ಬೀನಾ ವೈದ್ಯ, ಅಂಜುಮನ್ ಹಾಗೂ ಆರ್ ಎನ್ ಎಸ್ ಕಾಲೇಜಿನ ಪ್ರಶ್ನೆ ಪತ್ರಿಕೆಗಳು ಒಂದೆ ಆಗಿದ್ದು, ಸಿದ್ದಾರ್ಥ ಮತ್ತು ನ್ಯೂ ಇಂಗ್ಲೀಷ ಶಾಲೆಯ ಪ್ರಶ್ನೆ ಪತ್ರಿಕೆಗಳು ಒಂದೆ ಇದೆ. ಇದನ್ನೆ ಗಮನಿಸಿದ ವಿದ್ಯಾರ್ಥಿಗಳು ಆನಂದ ಆಶ್ರಮದ ಪ್ರಶ್ನೆ ಪತ್ರಿಕೆಗಳನ್ನು ಪಡೆಯಲು ಯತ್ನಿಸುತ್ತಿದ್ದಾರೆ.
ಪ್ರಥಮ ಪಿಯುಸಿ ಪರೀಕ್ಷಾ ಗೊಂದಲ; ಕಾರಣ ಕೇಳಿ ನೋಟೀಸ್ ಜಾರಿ
ಭಟ್ಕಳ: ಪ್ರಥಮ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳ ವೇಳೆ ಆನಂದಾಶ್ರಮ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಶ್ನೆಪತ್ರಿಕೆ ಸಂಬಂಧಿತ ಗೊಂದಲ ವಿದ್ಯಾರ್ಥಿಗಳಲ್ಲಿ ಆತಂಕ ಹುಟ್ಟಿಸಿದೆ. ಈ ಕುರಿತು ಉಪನಿರ್ದೇಶಕರ ಕಛೇರಿಯಿಂದ ಸ್ಪಷ್ಟನೆ ನೀಡಲಾಗಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಸುತ್ತೋಲೆಯಂತೆ 2024-25ನೇ ಸಾಲಿನ ಪ್ರಥಮ ಪಿ.ಯು.ಸಿ ವಾರ್ಷಿಕ ಪರೀಕ್ಷೆಗಳು ಫೆಬ್ರವರಿ 14ರಿಂದ 27ರ ಒಳಗೆ ನಡೆಯುವಂತೆ ಕಾಲೇಜುಗಳ ಪ್ರಾಚಾರ್ಯರಿಗೆ ಸೂಚನೆ ನೀಡಲಾಗಿತ್ತು. ಎಲ್ಲಾ ಕಾಲೇಜುಗಳು ತಮ್ಮದೇ ವೇಳಾಪಟ್ಟಿಯನ್ನು ಸಿದ್ಧಪಡಿಸಿ, ಯಾವುದೇ ಲೋಪದೋಷವಿಲ್ಲದಂತೆ ಪರೀಕ್ಷೆಗಳನ್ನು ನಡೆಸಬೇಕೆಂದು ಉಪನಿರ್ದೇಶಕರ ಕಛೇರಿಯ 2025ರ ಜನವರಿ 24ರ ಆದೇಶದಲ್ಲಿ ತಿಳಿಸಿಲಾಗಿದೆ.
ಆದಾಗ್ಯೂ, ಆನಂದಾಶ್ರಮ ಪದವಿ ಪೂರ್ವ ಕಾಲೇಜು ಭಟ್ಕಳ ತನ್ನದೇ ವೇಳಾಪಟ್ಟಿ ಅನುಸರಿಸಿ, ವಿಷಯಗಳಲ್ಲಿ ಬದಲಾ ವಣೆ ಮಾಡಿ, ಸಂಘದ ಪ್ರಶ್ನೆಪತ್ರಿಕೆಗಳನ್ನು ಬಳಸಿಕೊಂಡು ಕೆಲವು ಪರೀಕ್ಷೆಗಳನ್ನು ಮೊದಲು ನಡೆಸಿದೆ. ಇದರಿಂದ ಉಳಿದ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದ್ದು, ಈ ಸಂಬಂಧ ಕಾಲೇಜಿಗೆ ನೋಟಿಸ್ ನೀಡಲಾಗಿದೆ. ಇನ್ನಷ್ಟು ತನಿಖೆಯ ನಂತರ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಉಪನಿರ್ದೇಶಕರ ಕಚೇರಿ ಸ್ಪಷ್ಟಪಡಿಸಿದೆ.
ಈ ಹಿನ್ನಲೆಯಲ್ಲಿ, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮನವಿ ಮಾಡಲಾಗಿದೆ: ಮುಂದಿನ ಜೀವಶಾಸ್ತ್ರ ಮತ್ತು ಗಣಕ ವಿಜ್ಞಾನ ಪರೀಕ್ಷೆಗಳಲ್ಲಿ ಆನಂದಾಶ್ರಮ ಕಾಲೇಜಿನಲ್ಲಿ ಬಳಸಿದ ಪ್ರಶ್ನೆಪತ್ರಿಕೆ ಪುನರಾವರ್ತನೆ ಆಗುವುದಿಲ್ಲ. ಯಾವುದೇ ಗೊಂದಲವಿಲ್ಲದೆ ಪರೀಕ್ಷೆ ಬರೆಯಲು ಉಪನಿರ್ದೇಶಕರು ರಾಜಪ್ಪ ಕೆ.ಹೆಚ್. (ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ, ಕಾರವಾರ) ಪ್ರಕಟಣೆಯಲ್ಲಿ ಕೋರಿದ್ದಾರೆ.
ಭಟ್ಕಳದ ಎಲ್ಲಾ ಕಾಲೇಜುಗಳಿಗೆ ಪ್ರಶ್ನೆ ಪತ್ರಿಕೆಯನ್ನು ನಾವೇ ಸರಬರಾಜು ಮಾಡಿದ್ದೇವೆ ನಿಜ. ಆದರೆ ಒಟ್ಟು 3 ಆವೃತ್ತಿಯಲ್ಲಿ ಪ್ರಶ್ನೆ ಪತ್ರಿಕೆಗಳು ತಯಾರಾಗಿದ್ದು, ಯಾರಿಗೆ ಯಾವ ಆವೃತ್ತಿ ಹೋಗುತ್ತದೆ ಎಂದು ಗೊತ್ತಾಗಿಲ್ಲ. ಜಿಲ್ಲೆಯಿಂದ ಪ್ರಶ್ನೆ ಪತ್ರಿಕೆ ಪಡೆದರೆ ಜಿಲ್ಲೆಯ ವೇಳಾ ಪಟ್ಟಿ ಅನುರಿಸಬೇಕು ಇದು ನಿಯಮ.. ಆನಂದ ಆಶ್ರಮದ ಗೊಂದಲ ಗಮನಕ್ಕೆ ಬಂದಿದ್ದು ಮುಂದೆ ನಡೆಯುವ ಪ್ರಶ್ನೆ ಪತ್ರಿಕೆಗಳನ್ನು ಬದಲಿಸಿ ನೀಡಲಾಗುವುದು.
-ಜಿ.ಎಸ್ ಹೆಗಡೆ, ಪ್ರಾಂಶುಪಾಲರು, ನೊಡೆಲ್ ಕಾಲೇಜು ಭಟ್ಕಳ ತಾಲೂಕು.







