ಮೀಸಲಾತಿ ಮರು ಹಂಚಿಕೆಗೆ ಕಾಂತ್ರಿಕಾರಕ ಹೆಜ್ಜೆ: ರವೀಂದ್ರ ನಾಯ್ಕ
ಮೇ 5ರಿಂದ ಪರಿಶಿಷ್ಟ ಜಾತಿಯ ಮನೆ ಮನೆ ಗಣತಿ

ಶಿರಸಿ: ಪರಿಶಿಷ್ಟ ಜಾತಿಯ ಮನೆ, ಮನೆ ಗಣತಿ ಮೇ 5ರಿಂದ ರಾಜ್ಯಾದಂತ ಪ್ರಾರಂಭವಾಗಲಿದ್ದು, ಪರಿಶಿಷ್ಟ ಜಾತಿಯ ಮೀಸಲಾತಿಯ ಮರು ಹಂಚಿಕೆಯ ಉದ್ದೇಶದಿಂದ ಸರ್ಕಾರಿ ನೌಕರಿಯಲ್ಲಿನ ಪ್ರಾತಿನಿತ್ಯ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವಿಕೆಯನ್ನು ವೈಜ್ಞಾನಿಕವಾಗಿ ಗುರುತಿಸುವಿಯು ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಕಾಂತ್ರಿಕಾರಿಯ ಹೆಜ್ಜೆಯಾಗಲಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಕಾರ್ಯಾಲಯದಲ್ಲಿ ಸಮೀಕ್ಷೆಯ ಜಾಗೃತೆ ಅಂಗವಾಗಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-2025ರ ಕೈಪೀಡಿ ಅವಲೋಕಿಸಿದ ಪ್ರದರ್ಶಿಸಿದ ನಂತರ ಅವರು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ಗೌರವಾನ್ವಿತ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಏಕ ಸದಸ್ಯ ವಿಚಾರಣಾ ಆಯೋಗದ ಶಿಫಾರಿಸ್ಸಿನ ಮೇರೆಗೆ ರಾಜ್ಯ ಸರ್ಕಾರದ ಮಾರ್ಚ 27 ರ ಸಚಿವ ಸಂಪುಟದ ತೀರ್ಮಾನ ದಂತೆ ಕರ್ನಾಟಕದಲ್ಲಿನ 101 ಪರಿಶಿಷ್ಟ ಜಾತಿಯ ಸುಮಾರು 25 ಲಕ್ಷ ಕುಟುಂಬಗಳು ಸಮೀಕ್ಷೆಯಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ಜರುಗಲಿದೆ ಎಂದು ಅವರು ಹೇಳಿದರು.
ಸಮೀಕ್ಷೆಯ ಸಂದರ್ಭ ಕುಟುಂಬದ ಹಿನ್ನಲೆ, ವಿದ್ಯಾಭ್ಯಾಸ, ಕುಲಕಸುಬು, ವಾರ್ಷಿಕ ಆದಾಯ, ಮೀಸಲಾ ತಿಯಿಂದ ಈಗಾಗಲೇ ಪಡೆದುಕೊಂಡಿರುವ ಶೈಕ್ಷಣಿಕ, ಉದ್ಯೋಗ ಸೌಲಭ್ಯ, ರಾಜಕೀಯ, ಚರಾಸ್ತಿ, ಭೂಒಡೆತನ, ವಸತಿ ವ್ಯವಸ್ಥೆ, ಮುಂತಾದ 46 ಪ್ರಶ್ನೆ ಮತ್ತು ಉಪ ಪ್ರಶ್ನೆಗಳಿಗೆ ಸೂಕ್ತ ಮಾಹಿತಿ ಗಣತಿ ದಾರರಿಂದ ಸಂಗ್ರಹಿಸಲಾಗುವುದೆಂದು ಅವರು ಹೇಳಿದರು.
ಪರಿಶಿಷ್ಟ ಜಾತಿಗೆ ಒಳಪಟ್ಟು ಮೀಸಲಾತಿ ಸೌಲಭ್ಯದ ಪ್ರಾತಿನಿತ್ಯದಿಂದ ವಂಚಿತವಾಗಿರುವ ಉಪಜಾತಿ ಗಳಿಗೆ ನ್ಯಾಯಮೂರ್ತಿ ಡಾ.ಎಚ್.ಎನ್ ನಾಗಮೋಹನದಾಸ ಅವರ ಏಕ ಸದಸ್ಯ ವಿಚಾರಣಾ ಆಯೋಗ ದಿಂದ ಸಾಮಾಜಿಕ ನ್ಯಾಯ ದೊರಕುವುದೆಂಬ ವಿಶ್ವಾಸವನ್ನು ಅವರು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಉಪಜಾತಿಯ ಮಾಹಿತಿ ನೀಡಿ
ಗಣತಿದಾರರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಜಾತಿ ಪ್ರಮಾಣ ಪತ್ರ, ಆದಾರ ಸಂಖ್ಯೆ, ಪಡಿತರ ಚೀಟಿಯ ದಾಖಲೆಯ ಅಗತ್ಯ ಮಾಹಿತಿಯೊಂದಿಗೆ, ಉಪಜಾತಿಯ ಹೆಸರನ್ನು ನಮೂದಿಸಲು ಮಾಹಿತಿ ನೀಡುವದು ಅವಶ್ಯವಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.







