ಭಟ್ಕಳ: ನೀರಿನಲ್ಲಿ ಕೊಚ್ಚಿ ಹೋಗಿ ವ್ಯಕ್ತಿ ಮೃತ್ಯು

ಭಟ್ಕಳ: ಭಾರಿ ಸುರಿಯುತ್ತಿದ್ದ ಮಳೆಯಲ್ಲಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯೋರ್ವ ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಗುಳ್ಮೆ ಬೆಳಲಖಂಡದಲ್ಲಿರುವ ಲಕ್ಕಿ ನೂಡಲ್ ಫ್ಯಾಕ್ಟರಿ ಹಿಂಬದಿಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಮಾದೇವ ನಾರಾಯಣ ದೇವಾಡಿಗ (50) ಎಂದು ಗುರುತಿಸಲಾಗಿದೆ. ಅವರು ಜೂ. 12 ರಂದು 5 ಗಂಟೆಯಿಂದ ಜೂ.14ರ ನಡುವಿನ ಸಮಯದಲ್ಲಿ ಭಾರಿ ಮಳೆ ಸುರಿಯುತ್ತಿದ್ದ ವೇಳೆ ಭಟ್ಕಳದ ಗುಳ್ಮೆ ಬೆಳಲಖಂಡದಲ್ಲಿರುವ ಫ್ಯಾಕ್ಟರಿ ಹಿಂಬದಿಯಿಂದ ತನ್ನ ಮನೆಗೆ ನಡೆದುಕೊಂಡು ಹೋಗುವಾಗ ಭಾರಿ ಮಳೆಯ ನೀರಿಗೆ ಕೊಚ್ಚಿಕೊಂಡು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಅವರ ಪತ್ನಿ ದೂರು ದಾಖಲಿಸಿದ್ದಾರೆ.
Next Story





