ಸಂಪೂರ್ಣ ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವಿಲ್ಲ: ರವೀಂದ್ರ ನಾಯ್ಕ
ಅರಣ್ಯದಲ್ಲಿ ದನಕರು ಮೇಯಿಸಲು ನಿಷೇಧಿಸಿ ಅರಣ್ಯ ಸಚಿವರ ಆದೇಶ

ಶಿರಸಿ: ರಾಜ್ಯದ ಅರಣ್ಯ ಪ್ರದೇಶದಲ್ಲಿ ದನಕರು ಮೇಯಿಸುವುದನ್ನು ನಿಷೇಧಿಸವಂತೆ ಸಚಿವ ಈಶ್ವರ ಖಂಡ್ರೆ ಆದೇಶಿಸಿದ ಆದೇಶವು, ದನ ಪ್ರಾಣಿ ಮೇಯಿಸಲು ಸಂಪೂರ್ಣ ನಿಯಂತ್ರಿಸಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರದ ಅರಣ್ಯ ಸಚಿವರು ಜು.22ರಂದು ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷರಾಧಿಕಾರಿ ಅವರಿಗೆ ಅರಣ್ಯ ಪ್ರದೇಶದಲ್ಲಿ ದನ, ಕರು, ಮೇಕೆ, ಕುರಿ ಮುಂತಾದ ಸಾಕು ಪ್ರಾಣಿಗಳನ್ನ ಮೇಯಿಸಲು ನಿಷೇಧಿಸಿ ನೀಡಿದ ಸೂಚನೆಗೆ ಅವರು ಮೇಲಿನಂತೆ ಪ್ರತ್ರಿಕ್ರಿಯೆ ತಿಳಿಸಿದ್ದಾರೆ.
ಬಳಕೆದಾರರು ಜಾನುವಾರಗಳನ್ನು ನಿರ್ಧೀಷ್ಟ ಅರಣ್ಯ ಪ್ರದೇಶದಲ್ಲಿ ಮೇಯಿಸುವ ಅನುಮತಿ ಹಕ್ಕನ್ನು ಹೊಂದಿದವರಾಗಿರುತ್ತಾರೆ. ಮೇಯಿಸುವ ಹಕ್ಕುಗಳು ದೇಶದಲ್ಲಿ, ವಿದೇಶ ರಾಷ್ಟ್ರಗಳಲ್ಲಿ ಹಾಗೂ ನ್ಯಾಯಾಲಯದ ಪ್ರಕರಣದಲ್ಲಿ ಮೂಲಭೂತ ಹಕ್ಕುಗಳನ್ನಾಗಿ ಪರಿವರ್ತಿಸಿ ಕೊಂಡಿರುವುದು ವಿವಿಧ ಕಾನೂನುಗಳಲ್ಲಿ ದಾಖಲಾಗಿದ್ದು ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಶೇ.29 ರಷ್ಟು ಇರುವ ಸಂರಕ್ಷಿತ ಅರಣ್ಯಗಳಲ್ಲಿ ಹಾಗೂ ಶೆ.18ರಷ್ಟು ಇರುವ ವರ್ಗಿಕರಿಸದ ಅರಣ್ಯ ಪ್ರದೇಶಗಳಲ್ಲಿ ಮೇಯಿಸದಕ್ಕೆ ನಿರ್ಭಂಧಿಸುವ ಪೂರ್ಣಪ್ರಮಾಣದ ಅಧಿಕಾರ ಸರ್ಕಾರಕ್ಕೆ ಇರುವುದಿಲ್ಲ. ಸರ್ಕಾರದ ನಿಯಮ ಮತ್ತು ಅನುಮತಿ ಪ್ರಕಾರ ಮೇಯಿಸಲು ಅವಕಾಶವಿರುತ್ತದೆ. ಇಂತ ನಿಯಮಗಳ ಅರಣ್ಯ ಸಂರಕ್ಷಣೆ ಮಟ್ಟ ಮತ್ತು ಅರಣ್ಯ ಪ್ರಕಾರದ ಮೇಲೆ ಅವಲಂಬಿತವಾಗಿತ್ತದೆ ಎಂದು ಅವರು ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.
ಜಿಲ್ಲಾ, ಗ್ರಾಮ, ಸಾಮಾಜಿಕ ಅರಣ್ಯ ಪ್ರದೇಶದಲ್ಲಿ "ಮುಕ್ತ ವಲಯ" ವನ್ನು ಮೇಯಿಸಲು ಪ್ರತಿ ವರ್ಷ ಪರವಾನಿಗೆ ಮೇರೆಗೆ ಮೇಯಿಸುವ ಪ್ರದೇಶವೆಂದು ಪ್ರಕಟಿಸುವ ಗ್ರಾಮದ ಸಮಿತಿ ಅಥವಾ ಗ್ರೀನ್ ಜೊತೆ ಯೋಜನೆಗಳ ಮೂಲಕ ಗುರುತಿಸುವ ಅವಕಾಶವಿದ್ದಾಗಲೂ ಹಾಗೂ ಮೇಯುವಿಕೆಗೆ ಸಂಬಂಧಿಸಿ ಪ್ರಸಕ್ತ ಕಾಯಿದೆಯಲ್ಲಿನ ಅಂಶ ಚಾಲ್ತಿಯಲ್ಲಿ ಇರುವಾಗಲೇ, ಟಿಪ್ಪಣೆ ಮೂಲಕ ಹೊಸ ಸೂಚನೆ ನೀಡಿರುವುದು ಸಾರ್ವಜನಿಕವಾಗಿ ಚರ್ಚಿಗೆ ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಅರಣ್ಯ ಹಕ್ಕು ಕಾಯಿದೆ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯದಲ್ಲಿ ವಾಸಿಸುವ ಸಮೂದಾಯಗಳಿಗೆ ಕೆಲವು ಹಕ್ಕುಗಳನ್ನು ಗುರುತಿಸಲಾಗಿದೆ ಮತ್ತು ನಿಹಿತಗೊಳಿಸಲಾಗಿದೆ. ಇದರಲ್ಲಿ ಮೇಯಿಸುವ ಹಕ್ಕು ಸಮುಹ ಹಕ್ಕು ಎಂದು ಗುರುತಿಸಲಾಗಿದೆ. ಇವುಗಳನ್ನು ಸಾಮಾನ್ಯವಾಗಿ ಸಮೂದಾಯ ಹಕ್ಕುಗಳು ಎಂದು ಪರಿಗಣಿಸಲಾಗು ತ್ತದೆ. ಈ ಹಕ್ಕುಗಳು ವಿವಿಧ ಪ್ರಕಾರದ ಅರಣ್ಯ ಭೂಮಿಯಲ್ಲಿ ಮೇಯಿಸಲು ಬಳಸಲು ಅವಕಾಶ ನೀಡಿದೆ. ಅಲ್ಲದೇ, ಮೇವು ಉತ್ಪನ್ನಗಳನ್ನು ಸಂಗ್ರಹಿಸಲು ಅರಣ್ಯ ಹಕ್ಕು ಕಾಯಿದೆಯಲ್ಲಿ ಅವಕಾಶವಿದೆ. ಜೀವ ನೋಪಾಯಕ್ಕೆ ಅವಿಭಾಜ್ಯವಾಗಿರುವುದು ಮೇಯಿಸುವಿಕೆಗೆ ಸೇರಿದಂತ ಸಂಪ್ರದಾಯಿಕ ಪದ್ದತಿಗಳನ್ನು ರಕ್ಷಿಸಲು ಅರಣ್ಯ ಹಕ್ಕು ಕಾಯಿದೆಯ ಗುರಿ ಆಗಿದೆ ಎಂದು ಅರಣ್ಯ ಸಚಿವರ ಹೇಳಿಕೆಯನ್ನು ಪ್ರಭ ವಾಗಿ ವಿರೋಧಿಸಲಾಗುವುದು ಎಂದು ಅವರು ಹೇಳಿದರು.
ಮೇಯಿಸುವಿಕೆಯ ವಲಯ:
ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕದ ಅರಣ್ಯದಲ್ಲಿ ಸಾಕು ಪ್ರಾಣಿಗಳನ್ನು ಮೇಯಿಸುವ ಅನುಮತಿ ಕಾನೂನಾತ್ಮಕವಾಗಿ ಸಿಗುತ್ತದೆ. ಆದರೆ, ಅದು ಶಾಸನಾನುಸಾರ ನಿಯಮ ಅಡಿಯಲ್ಲಿ ಮಾತ್ರ ಎಂದು ಅವರು ತಿಳಿಸಿದ್ದಾರೆ. ಅಲ್ಲದೇ, ಅರಣ್ಯದಲ್ಲಿ ಮೇಯಿಸುವಿಕೆಯ ಕಾನೂನಾತ್ಮಕ ಪರಿಹಾರಕ್ಕೆ ಅರಣ್ಯ ಸಚಿವರು ಅರಣ್ಯ ಪ್ರದೇಶದಲ್ಲಿ ಮೇಯಿಸುವಿಕೆಯ ವಲಯ ಎಂದು ಗುರುತಿಸಬೇಕೆಂದು ಒತ್ತಾಯಿಸಿದ್ದಾರೆ.







