“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜ ಪರಿವರ್ತನೆ” ಲೋಗೋ ಬಿಡುಗಡೆ
ಬೆಂಗಳೂರು: ಅಧ್ಯಾಪಕರ ಅತಿದೊಡ್ಡ ಸಂಘಟನೆ ‘ಆಲ್‌ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್’ AIITA ವತಿಯಿಂದ “ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜ ಪರಿವರ್ತನೆ” ಎಂಬ ವಿಷಯದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರ ಲೋಗೋ ಬಿಡುಗಡೆಯನ್ನು ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್ ತಮ್ಮ ಗೃಹ ಕಚೇರಿಯಲ್ಲಿ ಶುಕ್ರವಾರ ಬಿಡುಗಡೆಗೊಳಿಸಿದರು.
2023 ಸೆಪ್ಟೆಂಬರ್ 24ರಿಂದ 2023 ಅಕ್ಟೋಬರ್ 15ರವರೆಗೆ ದೇಶಾದ್ಯಂತ ನಡೆಯಲಿರುವ ಅಭಿಯಾನದ ಲೋಗೋ ಬಿಡುಗಡೆ ಕಾರ್ಯಕ್ರಮ ರಾಜ್ಯ ವಿಧಾನ ಸಭಾ ಸ್ಪೀಕರ್ ಯು.ಟಿ ಖಾದರ್‌ರವರ ಬೆಂಗಳೂರಿನಲ್ಲಿ ಇರುವ ಗೃಹ ಕಚೇರಿಯಲ್ಲಿ ಸೆ.22ರಂದು ನಡೆಯಿತು ಈ ಸಂದರ್ಭದಲ್ಲಿ ಮಾತನಾಡಿದ ಸ್ಪೀಕರ್ ಯು.ಟಿ ಖಾದರ್, ಶಿಕ್ಣದಲ್ಲಿ ನೈತಿಕ ಮೌಲ್ಯಗಳನ್ನು ವೃದ್ದಿಸುವ ಗುರಿಯೊಂದಿಗೆ ಹಮ್ಮಿ ಕೊಂಡಿರುವ “ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜ ಪರಿವರ್ತನೆ” ಎಂಬ ವಿಷಯದ ಅಭಿಯಾನದಲ್ಲಿ ಎಲ್ಲ ಶೀಕ್ಷಕರು ಆಸಕ್ತಿ ಯಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು.
ಸಮಾಜವು ಇಂದಿಗೂ ಶಿಕ್ಷಣದ ನೈಜ ಫಲಗಳಿಂದ ವಂಚಿತವಾಗಿದೆ. ಶಿಕ್ಷಣ ವ್ಯಾಪಕವಾಗುತ್ತಿದೆ, ಆದರೆ ಸಮಾಜದಿಂದ ನೈತಿಕ ಮೌಲ್ಯಗಳ ಬೇರುಗಳು ಕಡಿದು ಹೋಗುತ್ತಿವೆ. ಈ ಬಾಹ್ಯ ವೈಭವ ಮತ್ತು ಮೇಲ್ನೋಟದ ಪ್ರಗತಿಯ ಹೊರತಾ ಗಿಯೂ ನಮ್ಮ ಸಮಾಜವು ಶಿಕ್ಷಣದ ನೈಜ ಫಲವಾದ ಬದಲಾವಣೆ ಹಾಗೂ ಕ್ರಾಂತಿಯಿಂದ ವಂಚಿತವಾಗಿದೆ ಈ ಹಿನ್ನೆಲೆಯಲ್ಲಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಆಲ್‌ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್’ ರಾಜ್ಯ ಅದಕ್ಷ್ಯ ಎಂ.ಆರ್.ಮಾನ್ವಿ ತಿಳಿಸಿದರು.
ಆಲ್‌ಇಂಡಿಯಾ ಐಡಿಯಲ್ ಟೀಚರ್ಸ್ ಅಸೋಸಿಯೇಶನ್’ ರಾಜ್ಯ ಕಾರ್ಯದರ್ಶೀ ಯಾಸೀನ್ ಬಿಕ್ಬಾ, ಬೆಂಗಳೂರು ಮೆಟ್ರೋ ವಿಭಾಗದ ಅಧ್ಯಕ್ಷ ಮುಹಮ್ಮದ್ ಸನಾವುಲ್ಲಾ ಶರೀಫ್ ಉಪಸ್ಥಿತರಿದ್ದರು.