Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇಂಧನ: ಜಾಗತಿಕ ಭವಿಷ್ಯದಲ್ಲಿ ಮೇಲುಗೈ...

ಇಂಧನ: ಜಾಗತಿಕ ಭವಿಷ್ಯದಲ್ಲಿ ಮೇಲುಗೈ ಯಾರದ್ದಾಗಬಹುದು?

ಆರ್. ಜೀವಿಆರ್. ಜೀವಿ31 March 2026 1:28 PM IST
share
ಇಂಧನ: ಜಾಗತಿಕ ಭವಿಷ್ಯದಲ್ಲಿ ಮೇಲುಗೈ ಯಾರದ್ದಾಗಬಹುದು?

ಪಶ್ಚಿಮ ಏಶ್ಯದಲ್ಲಿನ ಸಂಘರ್ಷದಿಂದಾಗಿ ಜಾಗತಿಕವಾಗಿ ತೀವ್ರ ಇಂಧನ ಬಿಕ್ಕಟ್ಟು ಎದುರಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಹಾರ್ಮುಝ್ ಜಲಸಂಧಿಯಲ್ಲಿನ ಅಡಚಣೆಗಳಿಂದಾಗಿ ತೈಲ ಪೂರೈಕೆಗೆ ಧಕ್ಕೆಯಾಗಿದ್ದು, ಇದು ದಶಕಗಳಲ್ಲೇ ಕೆಟ್ಟ ಬಿಕ್ಕಟ್ಟಾಗಿದೆ. ತೈಲ ಬೆಲೆಗಳು ಬ್ಯಾರೆಲ್ಗೆ 125ರಿಂದ 150 ಡಾಲರ್ವರೆಗೆ ಏರಿಕೆಯಾಗುವ ಸಾಧ್ಯತೆಯಿದ್ದು, ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು. ಫಿಲಿಪ್ಪೀನ್ಸ್ ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ ಘೋಷಿಸಿದರೆ, ಶ್ರೀಲಂಕಾ ಮತ್ತು ಪಾಕಿಸ್ತಾನದಂತಹ ದೇಶಗಳು ಪರ್ಯಾಯ ಇಂಧನ ಉಳಿತಾಯ ಕ್ರಮಗಳನ್ನು ಅನುಸರಿಸುತ್ತಿವೆ. ಎಲ್ಲ ಮೂಲಗಳಿಂದ ಇಂಧನ ಖರೀದಿಸಲು ಭಾರತ ಯತ್ನಿಸುತ್ತಿದೆ. ಈ ಇಂಧನ ಬಿಕ್ಕಟ್ಟು ಕೇವಲ ತೈಲ ಬೆಲೆಯಲ್ಲದೆ, ಅಗತ್ಯ ವಸ್ತುಗಳ ಪೂರೈಕೆ ಮತ್ತು ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀರುತ್ತಿದೆ.

ಪರಿಸ್ಥಿತಿ ಹೀಗಿರುವಾಗ, ಇಂಧನ ಮೂಲಗಳ ಭವಿಷ್ಯ, ಪರ್ಯಾಯಗಳ ಬಗೆಗೆ ನೀಡಬೇಕಾದ ಆದ್ಯತೆ ಬಗ್ಗೆ ಸಹಜವಾಗಿಯೇ ಚರ್ಚೆ ಹುಟ್ಟಿಕೊಂಡಿದೆ. ಇಲ್ಲಿ, ನವೀಕರಿಸಲಾಗದ ಇಂಧನಗಳಿಂದ ಹಿಡಿದು ಭವಿಷ್ಯದ ನವೀಕರಿಸಬಹುದಾದ ಇಂಧನಗಳವರೆಗೆ ಜಾಗತಿಕ ಇಂಧನ ವೈವಿಧ್ಯತೆ ಮತ್ತು ಸಂಪನ್ಮೂಲಗಳ ಬಗ್ಗೆ ನೋಡುವ ಯತ್ನವಿದೆ.

ಶಕ್ತಿಯ ಮೂಲಗಳನ್ನು ಮುಖ್ಯವಾಗಿ ನವೀಕರಿಸಬಹುದಾದ ಮತ್ತು ನವೀಕರಿಸಲಾಗದ ಮೂಲಗಳೆಂದು ವಿಂಗಡಿಸಲಾಗಿದೆ. ನವೀಕರಿಸಬಹುದಾದ ಮೂಲಗಳು ಪರಿಸರ ಸ್ನೇಹಿಯಾಗಿವೆ ಮತ್ತು ಮರುಪೂರಣ ಸಾಧ್ಯವಿದೆ. ಆದರೆ ನವೀಕರಿಸಲಾಗದ ಮೂಲಗಳು ಸೀಮಿತವಾಗಿದ್ದು ಮಾಲಿನ್ಯ ಉಂಟುಮಾಡುತ್ತವೆ. ಇವುಗಳನ್ನು ಸಾಂಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಎಂದೂ ಕರೆಯುತ್ತಾರೆ.

ನವೀಕರಿಸಬಹುದಾದ ಇಂಧನದಲ್ಲಿ ಸೌರ ಶಕ್ತಿ, ಪವನ ಶಕ್ತಿ, ಜಲವಿದ್ಯುತ್ ಮುಖ್ಯವಾಗಿವೆ. ಇದಲ್ಲದೆ, ಭೂಶಾಖದ ಶಕ್ತಿ ಅಂದರೆ ಭೂಮಿಯ ಆಂತರಿಕ ಶಾಖವನ್ನು ಬಳಸುವ ಶಕ್ತಿ ಮತ್ತು ಜೀವರಾಶಿ ಶಕ್ತಿ ಅಂದರೆ, ಸಸ್ಯ ಮತ್ತು ಪ್ರಾಣಿಜನ್ಯ ತ್ಯಾಜ್ಯಗಳಿಂದ ಪಡೆಯುವ ಶಕ್ತಿಗಳಿವೆ. ನವೀಕರಿಸಲಾಗದ ಇಂಧನ ಮೂಲಗಳಲ್ಲಿ ಕಲ್ಲಿದ್ದಲು ವಿದ್ಯುತ್ ಉತ್ಪಾದನೆಗೆ ಹೆಚ್ಚಾಗಿ ಬಳಸುವ ಪಳೆಯುಳಿಕೆ ಇಂಧನವಾಗಿದೆ. ಅಲ್ಲದೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಪರಮಾಣು ಶಕ್ತಿ ಸೇರಿವೆ.

ಇತ್ತೀಚಿನ ದಿನಗಳಲ್ಲಿ, ಪರಿಸರ ಕಾಳಜಿಯಿಂದಾಗಿ ಸೌರ ಮತ್ತು ಪವನ ಶಕ್ತಿಯಂತಹ ನವೀಕರಿಸಬಹುದಾದ ಮೂಲಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಬಹುಶಃ ಇಂಧನದ ಭವಿಷ್ಯ ಇಂಥ ನವೀಕರಿಸಬಹುದಾದ ಮೂಲಗಳ ಮೇಲೆ ನಿಂತಿದೆ. ಇಂಗಾಲರಹಿತ ಮತ್ತು ಡಿಜಿಟಲೀಕೃತ ವ್ಯವಸ್ಥೆಯತ್ತ ವೇಗವಾಗಿ ಬದಲಾಗುತ್ತಿರುವ ಸಮಯ ಇದಾಗಿದೆ. ಹೇಳಲಾಗುತ್ತಿರುವ ಪ್ರಕಾರ, ಇವು 2030ರ ವೇಳೆಗೆ ಜಾಗತಿಕ ವಿದ್ಯುತ್ನ ಶೇ. 45ಕ್ಕಿಂತ ಹೆಚ್ಚನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಸೌರಶಕ್ತಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಅತಿದೊಡ್ಡ ಮೂಲವಾಗಿದೆ. ಪವನ ಶಕ್ತಿ ತೇಲುವ ಗಾಳಿ ಟರ್ಬೈನ್ಗಳಂಥ ನವೀನ ತಂತ್ರಜ್ಞಾನಗಳೊಂದಿಗೆ ಹೆಚ್ಚಾಗುವ ನಿರೀಕ್ಷೆಯಿದೆ. ಜಲವಿದ್ಯುತ್ ಕೂಡ ದೊಡ್ಡ ಪ್ರಮಾಣದ ಮತ್ತು ಪರಿಸರ ಸ್ನೇಹಿ ಮೂಲವಾಗಿ ಉಳಿದಿದೆ. ಗ್ರೀನ್ ಹೈಡ್ರೋಜನ್ ಭಾರೀ ಕೈಗಾರಿಕೆ ಮತ್ತು ಸಾರಿಗೆಯನ್ನು ಇಂಗಾಲದಿಂದ ಮುಕ್ತಗೊಳಿಸಲು ಪ್ರಮುಖ ಇಂಧನವಾಗಿ ಸ್ಥಾನ ಪಡೆದಿದೆ.

ವಿಶ್ವಸಂಸ್ಥೆಯ ವರದಿಯ ಪ್ರಕಾರ, 2030ರ ವೇಳೆಗೆ ತೀವ್ರ ಹವಾಮಾನ ಬದಲಾವಣೆ ತಡೆಗಟ್ಟಲು ಪಳೆಯುಳಿಕೆ ಇಂಧನಗಳಿಂದ ದೂರ ಸರಿಯುವ ನಿಟ್ಟಿನಲ್ಲಿ ಜಾಗತಿಕ ಪ್ರಯತ್ನಗಳಿವೆ. ಭಾರತ ಕೂಡ ಈ ಪರಿವರ್ತನೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದು, ಸೌರ, ಪವನ ಮತ್ತು ಗ್ರೀನ್ ಹೈಡ್ರೋಜನ್ನಲ್ಲಿ ಬೃಹತ್ ಹೂಡಿಕೆಗಳ ಮೂಲಕ 2030ರ ವೇಳೆಗೆ 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಗುರಿಯಾಗಿಸಿಕೊಂಡಿದೆ ಎನ್ನಲಾಗಿದೆ. ಸೌರ ಮತ್ತು ಪವನ ಶಕ್ತಿಗಳು ಸ್ಥಿರವಾಗಿಲ್ಲದೇ ಇರುವುದು, ಸಂಗ್ರಹಣೆಯಲ್ಲಿ ಭಾರೀ ಹೂಡಿಕೆ ಬೇಕಿರುವುದು ಇಂಥ ಕೆಲವು ಸವಾಲುಗಳೂ ಇಲ್ಲಿ ಇವೆಯೆಂಬುದು ನಿಜ. ಆದರೆ ಸ್ಪಷ್ಟವಾಗಿ, ಜಾಗತಿಕ ಇಂಧನ ಸಂದರ್ಭ ಪಳೆಯುಳಿಕೆ ಇಂಧನಗಳಿಂದ ನವೀಕರಿಸಬಹುದಾದ ಮೂಲಗಳಿಗೆ ವೇಗವಾಗಿ ಬದಲಾಗುತ್ತಿದೆ.

1970ರ ದಶಕದ ತೈಲ ಬಿಕ್ಕಟ್ಟುಗಳ ಬಳಿಕ ನವೀಕರಿಸಬಹುದಾದ ಇಂಧನ ಮೂಲಗಳನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುವಂತಾಗಿದೆ. ಬೇಡಿಕೆ ಪೂರೈಕೆಯನ್ನು ಮೀರಿದಾಗ ಇಂಧನ ಬಿಕ್ಕಟ್ಟು ಸಂಭವಿಸುತ್ತದೆ. 1973ರಲ್ಲಿ ಯೋಮ್ ಕಿಪ್ಪೂರ್ ಯುದ್ಧದಲ್ಲಿ ಭಾಗವಹಿಸಿದಾಗ ಅಮೆರಿಕ ತೈಲ ಸಮೃದ್ಧ ದೇಶಗಳಿಂದ ವ್ಯಾಪಾರ ನಿಷೇಧ ಎದುರಿಸಿತು. ಸೌದಿ ಅರೇಬಿಯ, ಕುವೈತ್, ಇರಾಕ್ ಮತ್ತು ಖತರ್ನಂತಹ ರಾಷ್ಟ್ರಗಳೊಂದಿಗೆ ಉದ್ವಿಗ್ನತೆ ಉಂಟಾಯಿತು. ಪರಿಣಾಮವಾಗಿ, ತೈಲ ಬೆಲೆಗಳು ಕೇವಲ ಒಂದು ವರ್ಷದಲ್ಲಿ 300 ಪ್ರತಿಶತದಷ್ಟು ಏರಿತು. ಆಗ ಗಾಳಿ ಮತ್ತು ಸೌರಶಕ್ತಿಯಂತಹ ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಳ್ಳಲು ದೊಡ್ಡ ಒತ್ತಡವಿತ್ತು.

ಸೌರ ಮತ್ತು ಪವನ ಶಕ್ತಿಗಳು ಹವಾಮಾನ ಗುರಿಗಳನ್ನು ಪೂರೈಸಲು ಕಾರಣವಾಗಿವೆ. ಪ್ರಸ್ತುತ, ಜಾಗತಿಕ ವಿದ್ಯುತ್ನ ಶೇ. 30ಕ್ಕಿಂತ ಹೆಚ್ಚು ನವೀಕರಿಸಬಹುದಾದ ಮೂಲಗಳಿಂದ ಬರುತ್ತಿದೆ ಮತ್ತು ಇದು 2050ರ ವೇಳೆಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸಲು ಪ್ರಾಥಮಿಕ ಇಂಧನ ಮೂಲವಾಗುವ ನಿರೀಕ್ಷೆಯಿದೆ. ಇಂಗಾಲದ ಹೊರಸೂಸುವಿಕೆ ತಗ್ಗಿಸುವುದು, ಗ್ರೀನ್ ಹೈಡ್ರೋಜನ್ ಮತ್ತು ಸುಧಾರಿತ ಇಂಧನ ಸಂಗ್ರಹಣೆಯಂಥವುಗಳ ಮೂಲಕ ಇಂಧನ ಸುರಕ್ಷತೆ ಹೆಚ್ಚಳ ಸಾಧ್ಯವಿದೆ. ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ ವಿರುದ್ಧ ಹೋರಾಡಲು ನವೀಕರಿಸಬಹುದಾದ ಇಂಧನ ಮೂಲಗಳು ನಿರ್ಣಾಯಕವಾಗಿವೆ. ಪರಿಸರ ಚಳವಳಿ ವೇಗವನ್ನು ಪಡೆದುಕೊಂಡಂತೆ ಮತ್ತು ಪಳೆಯುಳಿಕೆ ಇಂಧನಗಳ ಪ್ರಭಾವದ ಬಗ್ಗೆ ಕಳವಳಗಳು ಬೆಳೆದಂತೆ, ನವೀಕರಿಸಬಹುದಾದ ಶಕ್ತಿಯ ಮೇಲಿನ ಆಸಕ್ತಿ ಹೆಚ್ಚಿದೆ.

ಥಿಂಕ್ಟ್ಯಾಂಕ್ ಎಂಬರ್ 2025ರ ಆರಂಭದಲ್ಲಿ ವರದಿ ಮಾಡಿರುವಂತೆ, ನವೀಕರಿಸಬಹುದಾದ ಇಂಧನಗಳಲ್ಲಿ ದಾಖಲೆಯ ಹೂಡಿಕೆಯಿಂದಾಗಿ ವಿಶ್ವಾದ್ಯಂತ ಶುದ್ಧ ವಿದ್ಯುತ್ ಮೊದಲ ಬಾರಿಗೆ ಶೇ. 40ಕ್ಕಿಂತ ಹೆಚ್ಚಿದೆ. 2024ರಲ್ಲಿ EUನಲ್ಲಿ ಒಟ್ಟಾರೆ ನಿವ್ವಳ ಒಟ್ಟು ಶೇ. 47 ತಲುಪಿದೆ. ಯುರೋಪ್ ಕೂಡ ಸೌರಶಕ್ತಿಯ ಸೂಪರ್ ಪವರ್ ಆಗಿ ವೇಗವಾಗಿ ಹೊರಹೊಮ್ಮುತ್ತಿದೆ. ಅನೇಕ ರಾಷ್ಟ್ರಗಳು ಈಗಾಗಲೇ ತಮ್ಮ ಬಹುಪಾಲು ವಿದ್ಯುತ್ ಅನ್ನು ನವೀಕರಿಸಬಹುದಾದ ಮೂಲಗಳಿಂದ ಉತ್ಪಾದಿಸುತ್ತಿವೆ. ಸೌರಶಕ್ತಿಯ ಬೆಳವಣಿಗೆಯ ಹೊರತಾಗಿಯೂ, ಜಲವಿದ್ಯುತ್ ಹೆಚ್ಚಿನ ಅಗತ್ಯ ಪೂರೈಸುತ್ತಲೇ ಇದೆ.

ತೈಲ, ನೈಸರ್ಗಿಕ ಅನಿಲ, ದ್ರವೀಕೃತ ನೈಸರ್ಗಿಕ ಅನಿಲ (LNG), ಮತ್ತು ದ್ರವೀಕೃತ ಪೆಟ್ರೋಲಿಯಂ ಅನಿಲ (LPG) ವಲಯಗಳಲ್ಲಿ ಸರಕಾರಿ ಸ್ವಾಮ್ಯದ ರಾಷ್ಟ್ರೀಯ ತೈಲ ಕಂಪೆನಿಗಳು ಮತ್ತು ಹೂಡಿಕೆದಾರರ ಸ್ವಾಮ್ಯದ, ಸಾಮಾನ್ಯವಾಗಿ ಸೂಪರ್ಮೇಜರ್ಗಳು ಎನ್ನಲಾಗುವ ಅಂತರರಾಷ್ಟ್ರೀಯ ತೈಲ ಕಂಪೆನಿಗಳ ಸಂಯೋಜಿತ ಪಾತ್ರವಿರುತ್ತದೆ. ಈ ವಲಯದಲ್ಲಿ ಸೌದಿ ಅರೇಬಿಯ, ಅಮೆರಿಕ, ಖತರ್ ಅಂಥವು ಪ್ರಮುಖ ಪಾತ್ರ ವಹಿಸುತ್ತವೆ.

ಸೌದಿ ಅರೇಬಿಯದ ಸೌದಿ ಅರಾಮ್ಕೊ ವಿಶ್ವದ ಅತಿದೊಡ್ಡ ತೈಲ ಉತ್ಪಾದಕ ಕಂಪೆನಿಯಾಗಿದೆ. ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಎರಡರಲ್ಲೂ ಇದು ಪ್ರಾಬಲ್ಯ ಹೊಂದಿದೆ. ಅಮೆರಿಕದ ಎಕ್ಸಾನ್ಮೊಬಿಲ್ ಕೂಡ ಈ ವಲಯದಲ್ಲಿ ಜಾಗತಿಕ ಪ್ರಾಬಲ್ಯ ಹೊಂದಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ಪೆಟ್ರೋಕೆಮಿಕಲ್ಗಳ ಮೇಲೆ ೫೦ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಅಮೆರಿಕದ ಚೆವ್ರಾನ್ ಕಾರ್ಪೊರೇಷನ್ ಅಪ್ಸ್ಟ್ರೀಮ್ ಮತ್ತು ಡೌನ್ಸ್ಟ್ರೀಮ್ ಎರಡರಲ್ಲೂ ಪ್ರಮುಖವಾಗಿದೆ. ಪೆರ್ಮಿಯನ್ ಬೇಸಿನ್, ಕಝಕಿಸ್ತಾನ್ ಮತ್ತು ಮೆಕ್ಸಿಕೊ ಕೊಲ್ಲಿಯಲ್ಲಿನ ಗಮನಾರ್ಹ ನಿಕ್ಷೇಪಗಳ ಮೂಲಕ ಇದು ವಿಶ್ವದ ಅತಿದೊಡ್ಡ ಸಂಯೋಜಿತ ಇಂಧನ ಕಂಪೆನಿಗಳಲ್ಲಿ ಒಂದಾಗಿದೆ. ಯುಕೆಯ ಶೆಲ್ ಪಿಎಲ್ಸಿ 70ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ದೊಡ್ಡ ಪ್ರಮಾಣದ ತೈಲ ಉತ್ಪಾದನೆ ಮತ್ತು ಸಂಸ್ಕರಣೆಗೆ ಹೆಸರು ಮಾಡಿದೆ. LNGಯಲ್ಲಿ ಜಾಗತಿಕ ಮಾರುಕಟ್ಟೆಯ ಸುಮಾರು ಶೇ. 17ರಷ್ಟನ್ನು ಇದು ನಿಯಂತ್ರಿಸುತ್ತದೆ. ಫ್ರಾನ್ಸ್ನ ಟೋಟಲ್ ಎನರ್ಜಿಸ್ ಸಂಪೂರ್ಣ ತೈಲ ಮತ್ತು ಅನಿಲ ಉತ್ಪಾದಕ ಸಂಸ್ಥೆಯಾಗಿದೆ. ಸೌರ, ಪವನ ಮತ್ತು ಜೈವಿಕ ಇಂಧನಗಳಲ್ಲಿಯೂ ಮುಂಚೂಣಿಯಲ್ಲಿದೆ. ಚೀನಾದ ಪೆಟ್ರೋಚೀನಾ ಅಲ್ಲಿನ ಅತಿದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ಕಂಪೆನಿಯಾಗಿದೆ. ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ಸಂಸ್ಕರಣೆಯಲ್ಲಿ ಕೆಲಸ ಮಾಡುತ್ತದೆ. ಗ್ರೀನ್ ಎನರ್ಜಿ ವಲಯದಲ್ಲೂ ಹೂಡಿಕೆ ಮಾಡುತ್ತಿದೆ. ಚೀನಾದ ಬೆಳೆಯುತ್ತಿರುವ ಇಂಧನ ಬೇಡಿಕೆ ಪೂರೈಸಲು ಪಳೆಯುಳಿಕೆ ಇಂಧನ ಉತ್ಪಾದನೆಗೂ ಆದ್ಯತೆ ನೀಡುತ್ತಿದೆ. ಅಮೆರಿಕದ ಕೊನೊಕೊಫಿಲಿಪ್ಸ್ ಉತ್ತರ ಅಮೆರಿಕದ ಅತಿದೊಡ್ಡ ಉತ್ಪಾದಕ ಸಂಸ್ಥೆಯಾಗಿದೆ. ಅಲಾಸ್ಕಾ, ಪೆರ್ಮಿಯನ್ ಬೇಸಿನ್ ಮತ್ತು ಉತ್ತರ ಸಮುದ್ರದಲ್ಲಿ ಇದರ ಕಾರ್ಯವ್ಯಾಪ್ತಿಯಿದ್ದು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಹೊರತೆಗೆಯುವಿಕೆಯಲ್ಲಿ ಪಾತ್ರ ವಹಿಸುತ್ತದೆ. ಯುಕೆಯ ಬಿಪಿ ಪಿಎಲ್ಸಿ ಗಮನಾರ್ಹ ಅಪ್ಸ್ಟ್ರೀಮ್, ಡೌನ್ಸ್ಟ್ರೀಮ್ ಕಾರ್ಯಾಚರಣೆ ಮೂಲಕ ಪ್ರಮುಖ ಜಾಗತಿಕ ಇಂಧನ ಕಂಪೆನಿಯಾಗಿ ಉಳಿದಿದೆ. ಹೈಡ್ರೋಕಾರ್ಬನ್ಗಳು ಇದರ ಆದಾಯದ ಬೆನ್ನೆಲುಬಾಗಿದ್ದರೂ, ಜೈವಿಕ ಶಕ್ತಿ, ಹೈಡ್ರೋಜನ್ ಮೂಲಕವೂ ತನ್ನ ಉತ್ಪಾದನೆಯನ್ನು ವೈವಿಧ್ಯಗೊಳಿಸಿದೆ. ಇಟಲಿಯ ಎನಿ ಆಫ್ರಿಕಾ ಮತ್ತು ಇತರೆಡೆಗಳಲ್ಲಿ ಗಮನಾರ್ಹ ಅನಿಲ ಕಾರ್ಯಾಚರಣೆಗಳನ್ನು ಹೊಂದಿರುವ ಪ್ರಮುಖ ಅಂತರ್ರಾಷ್ಟ್ರೀಯ ಸಂಸ್ಥೆಯಾಗಿದೆ. ಖತರ್ನ ಖತರ್ ಎನರ್ಜಿ ವಿಶ್ವದ ಅತಿದೊಡ್ಡ LNG ಉತ್ಪಾದಕ ಕಂಪೆನಿಯಾಗಿದೆ. ಇದು ಯುರೋಪ್, ಏಶ್ಯ ಮತ್ತು ಯುಎಸ್ಗೆ ಎಲ್ಎನ್ಜಿಯನ್ನು ಪೂರೈಸುತ್ತದೆ. ಇದು ಎಲ್ಎನ್ಜಿ ಜಾಗತಿಕ ಇಂಧನ ಪರಿವರ್ತನೆಯಲ್ಲಿ ಅವಿಭಾಜ್ಯ ಪಾಲುದಾರ ಸಂಸ್ಥೆಯಾಗಿದೆ. 2027ರ ವೇಳೆಗೆ ಸಾಮರ್ಥ್ಯವನ್ನು ಗಮನಾರ್ಹವಾಗಿ ವಿಸ್ತರಿಸಲು ಯೋಜಿಸುತ್ತಿದೆ. ನಾರ್ವೆಯ ಈಕ್ವಿನಾರ್ ನೈಸರ್ಗಿಕ ಅನಿಲ, ಎಲ್ಎನ್ಜಿ ಮತ್ತು ಎಲ್ಪಿಜಿ ಮಾರುಕಟ್ಟೆಗಳಲ್ಲಿ ಗಮನಾರ್ಹವಾಗಿದೆ. ಕೆನಡಾದ ಇಂಧನ ವಿತರಣಾ ಕಂಪೆನಿ ಎನ್ಬ್ರಿಡ್ಜ್ ಉತ್ತರ ಅಮೆರಿಕದ ಕಚ್ಚಾ ತೈಲದ ಸರಿಸುಮಾರು ಶೇ. 30ರಷ್ಟನ್ನು ಸಾಗಿಸುತ್ತದೆ. ಅಲ್ಲದೆ ಯುಎಸ್ನ ನೈಸರ್ಗಿಕ ಅನಿಲ ಅಗತ್ಯದ ಸುಮಾರು 20ರಷ್ಟನ್ನು ತಲುಪಿಸುತ್ತದೆ.

ಭಾರತದ ಸಂಸ್ಥೆಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ನೈಸರ್ಗಿಕ ಅನಿಲ, ಎಲ್ಎನ್ಜಿ ಮತ್ತು ಎಲ್ಪಿಜಿ ಆಮದು ಮತ್ತು ಮಾರಾಟದಲ್ಲಿ ಪ್ರಮುಖವಾಗಿದೆ. ಗೈಲ್ ಕೂಡ ಪ್ರಸರಣದಿಂದ ಎಲ್ಪಿಜಿ ಉತ್ಪಾದನೆವರೆಗೆ ಎಲ್ಲವನ್ನೂ ನಿರ್ವಹಿಸುವ ಪ್ರಮುಖ ನೈಸರ್ಗಿಕ ಅನಿಲ ಕಂಪೆನಿಯಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ಪಿಸಿಎಲ್) ಎಲ್ಪಿಜಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಛಾರಾ ಟರ್ಮಿನಲ್ ಮೂಲಕ ಎಲ್ಎನ್ಜಿ ವಲಯದಲ್ಲೂ ಬೆಳೆಯುತ್ತಿದೆ. ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಭಾರತದಲ್ಲಿ ಎಲ್ಪಿಜಿ ಮತ್ತು ಎಲ್ಎನ್ಜಿ ಆಮದುಗಳ ಪ್ರಮುಖ ಪೂರೈಕೆದಾರ ಸಂಸ್ಥೆಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಎಲ್ಪಿಜಿ ಮತ್ತು ನೈಸರ್ಗಿಕ ಅನಿಲದ ಉತ್ಪಾದನೆ ಗರಿಷ್ಠಗೊಳಿಸುವ ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣವನ್ನು ನಿರ್ವಹಿಸುತ್ತಿದೆ. ಏಜಿಸ್ ಲಾಜಿಸ್ಟಿಕ್ಸ್ ಎಲ್ಪಿಜಿ ಲಾಜಿಸ್ಟಿಕ್ಸ್ ಮತ್ತು ವಿತರಣೆಯಲ್ಲಿ ಪ್ರಮುಖವಾಗಿದೆ.

ಹೆಚ್ಚು ನೈಸರ್ಗಿಕ ಅನಿಲವನ್ನು ಉತ್ಪಾದಿಸುವ ದೇಶಗಳಲ್ಲಿ ಅಮೆರಿಕ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಅದರ ನಂತರ ರಶ್ಯ, ಚೀನಾ ಮತ್ತು ನಾರ್ವೆ ಬರುತ್ತವೆ. ಅಮೆರಿಕದಲ್ಲಿ ಅತಿ ಹೆಚ್ಚು ನೈಸರ್ಗಿಕ ಅನಿಲ ಉತ್ಪಾದಿಸುವ ಐದು ರಾಜ್ಯಗಳೆಂದರೆ ಟೆಕ್ಸಾಸ್, ಪೆನ್ಸಿಲ್ವೇನಿಯಾ, ಲೂಸಿಯಾನ, ಪಶ್ಚಿಮ ವರ್ಜೀನಿಯಾ ಮತ್ತು ಒಕ್ಲಹೋಮ. ನೈಸರ್ಗಿಕ ಅನಿಲವನ್ನು ಬಳಸುವ ಮೊದಲ ಮೂರು ದೇಶಗಳೆಂದರೆ, ಅಮೆರಿಕ, ರಶ್ಯ ಮತ್ತು ಚೀನಾ.

ಚೀನಾದ ಸೌರ ಮರುಭೂಮಿಗಳಿಂದ ಹಿಡಿದು ನಾರ್ವೆಯ ಜಲವಿದ್ಯುತ್ ಶಕ್ತಿಯವರೆಗೆ, ಯುಎಸ್, ಬ್ರೆಝಿಲ್, ಭಾರತ ಮತ್ತು ಜರ್ಮನಿಯಂಥ ದೇಶಗಳು ಪವನ, ಸೌರ ಮತ್ತು ಜಲವಿದ್ಯುತ್ ಮೂಲಕ ಶುದ್ಧ ಇಂಧನ ಭವಿಷ್ಯವನ್ನು ರೂಪಿಸುತ್ತಿವೆ. ಗ್ಲೋಬಲ್ ರಿನಿವೇಬಲ್ ಎನರ್ಜಿ ಇಂಡೆಕ್ಸ್ ೨೦೨೫ ಪ್ರಕಾರ, ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಅಗ್ರ 10 ದೇಶಗಳೆಂದರೆ,

ಚೀನಾ: 2025ರಲ್ಲಿ ಚೀನಾ ಸುಮಾರು 2,894 TWh (ಟೆರಾವಾಟ್-ಅವರ್) ನವೀಕರಿಸಬಹುದಾದ ವಿದ್ಯುತ್ ಅನ್ನು ಉತ್ಪಾದಿಸಿತು. ಇದು ಜಾಗತಿಕ ಪಾಲಿನ ಶೇ.32ಕ್ಕಿಂತ ಹೆಚ್ಚನ್ನು ಹೊಂದಿದೆ. IRENA (ಅಂತರ್ರಾಷ್ಟ್ರೀಯ ನವೀಕರಿಸಬಹುದಾದ ಇಂಧನ ಸಂಸ್ಥೆ) ಪ್ರಕಾರ, ಚೀನಾದ ಸಂಯೋಜಿತ ನವೀಕರಿಸಬಹುದಾದ ವಿದ್ಯುತ್ ಸಾಮರ್ಥ್ಯ ಈಗ 1,400 GW ಮೀರಿದೆ.

ಅಮೆರಿಕ: 2025 ರಲ್ಲಿ ಅಮೆರಿಕ ಸುಮಾರು 974 TWh ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸಿತು. ಇದು ಜಾಗತಿಕ ಒಟ್ಟು ಮೊತ್ತದ ಸುಮಾರು ಶೇ.11ರಷ್ಟಿದೆ.

ತನ್ನ ಒಟ್ಟು ಇಂಧನ ಮಿಶ್ರಣದಲ್ಲಿ ಸುಮಾರು ಶೇ.50 ರಷ್ಟು ನವೀಕರಿಸಬಹುದಾದ ಶಕ್ತಿಯನ್ನು ಬಳಸುವ ಗುರಿ ಹೊಂದಿದೆ.

ಬ್ರೆಝಿಲ್: 2025ರಲ್ಲಿ ಬ್ರೆಝಿಲ್ 631 TWh ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸಿತು. ಹೆಚ್ಚಿನ ಪಾಲನ್ನು ಜಲವಿದ್ಯುತ್ ಹೊಂದಿದ್ದರೂ, ಬ್ರೆಝಿಲ್ ವೇಗವಾಗಿ ಪವನ ಮತ್ತು ಸೌರಶಕ್ತಿ ವಲಯದಲ್ಲಿ ಬೆಳೆಯುತ್ತಿದೆ. ತನ್ನ ಒಟ್ಟು ಇಂಧನ ಮಿಶ್ರಣದಲ್ಲಿ ಸುಮಾರು ಶೇ.೫೦ರಷ್ಟು ನವೀಕರಿಸಬಹುದಾದ ಶಕ್ತಿಯನ್ನು ಬಳಸುವ ಗುರಿ ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೌರ ಯೋಜನೆಗಳನ್ನು ಬೆಂಬಲಿಸುತ್ತದೆ.

ಕೆನಡಾ: ಕೆನಡಾ ನವೀಕರಿಸಬಹುದಾದ ಮೂಲಗಳಿಂದ ಸರಿಸುಮಾರು 421 TWh ಉತ್ಪಾದಿಸಿದೆ. ಶೇ. 60ಕ್ಕಿಂತ ಹೆಚ್ಚು ಜಲವಿದ್ಯುತ್ ಅಣೆಕಟ್ಟುಗಳಿಂದ ಬರುತ್ತದೆ. ಇದು ಕೆನಡಾ ಹಸಿರು ಇಂಧನ ರಫ್ತಿನಲ್ಲಿ ಜಾಗತಿಕ ನಾಯಕನಾಗಲು ಕಾರಣವಾಗಿದೆ.

ಭಾರತ: ಭಾರತ ಈಗ ವಾರ್ಷಿಕವಾಗಿ ಸುಮಾರು 382 TWh ನವೀಕರಿಸಬಹುದಾದ ವಿದ್ಯುತ್ ಅನ್ನು ಉತ್ಪಾದಿಸುತ್ತದೆ. ಇದು ದೊಡ್ಡ ಸೋಲಾರ್ ಪಾರ್ಕ್ಗಳು ಮತ್ತು ಬೆಳೆಯುತ್ತಿರುವ ಪವನ ವಿದ್ಯುತ್ ಸ್ಥಾವರಗಳಿಂದ ಸಾಧ್ಯವಾಗಿದೆ. ದೇಶದ ಮಿಷನ್ 500 ಗಿಗಾವ್ಯಾಟ್ 2030 ರ ವೇಳೆಗೆ ಅರ್ಧ ಟೆರಾವ್ಯಾಟ್ ಶುದ್ಧ ವಿದ್ಯುತ್ ಅನ್ನು ಪಡೆಯುವ ಗುರಿ ಹೊಂದಿದೆ.

ಜರ್ಮನಿ: ಜರ್ಮನಿ 2025 ರಲ್ಲಿ 272 TWhಗಿಂತ ಹೆಚ್ಚು ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸಿತು. ಇದು ಸೀಮಿತ ಸೂರ್ಯನ ಬೆಳಕು ಮತ್ತು ಉತ್ತರ ಯುರೋಪಿಯನ್ ಹವಾಮಾನದ ಹೊರತಾಗಿಯೂ ಜಗತ್ತಿಗೆ ಮಾದರಿಯಾಗಿದೆ.

ಜಪಾನ್: ಜಪಾನ್ 2025ರಲ್ಲಿ ನವೀಕರಿಸಬಹುದಾದ ಮೂಲಗಳಿಂದ 224 TWh ಉತ್ಪಾದಿಸಿತು. ವಿಶೇಷವಾಗಿ ಇದರಲ್ಲಿ ಸೌರ ಮತ್ತು ಸಣ್ಣ ಜಲವಿದ್ಯುತ್ ಪಾಲಿದೆ. ಜಪಾನ್ 2030ರ ವೇಳೆಗೆ ತನ್ನ ಇಂಧನ ಮಿಶ್ರಣದಲ್ಲಿ ಶೇ.36ಕ್ಕಿಂತ ಹೆಚ್ಚು ನವೀಕರಿಸಬಹುದಾದ ಮೂಲಗಳ ಗುರಿಯತ್ತ ಸಾಗುವ ಗುರಿ ಹೊಂದಿದೆ.

ರಶ್ಯ: ರಶ್ಯ 2025 ರಲ್ಲಿ 209 TWh ಹಸಿರು ವಿದ್ಯುತ್ ಉತ್ಪಾದಿಸಿತು. ಜಲವಿದ್ಯುತ್ ಶಕ್ತಿ ಪ್ರಮುಖವಾಗಿದೆ. ತೈಲ ಮತ್ತು ಅನಿಲದ ಮೇಲೆ ಕೇಂದ್ರೀಕರಿಸಿದ್ದರೂ, ಆರ್ಕ್ಟಿಕ್ ಪ್ರದೇಶಗಳ ಬಳಿ ಪವನ ವಿದ್ಯುತ್ ಸ್ಥಾವರಗಳು ಮತ್ತು ಜೀವರಾಶಿ ಕಾರ್ಯಾಚರಣೆಗಳ ಮೇಲೆ ರಶ್ಯ ಹೆಚ್ಚು ಗಮನ ಹರಿಸಿದೆ.

ನಾರ್ವೆ: ನಾರ್ವೆ ನವೀಕರಿಸಬಹುದಾದ ಮೂಲಗಳಿಂದ 151 TWh ಉತ್ಪಾದಿಸುತ್ತದೆ. ಇದು ಹೆಚ್ಚು ಕಡಿಮೆ ನೂರಕ್ಕೆ ನೂರರಷ್ಟು ಜಲವಿದ್ಯುತ್ನಿಂದ ಸಾಧ್ಯವಾಗಿದೆ. ಇದು ನೆರೆಹೊರೆಯ ದೇಶಗಳಿಗೆ ಹಸಿರು ಶಕ್ತಿಯನ್ನು ರಫ್ತು ಮಾಡುತ್ತದೆ.

ಸ್ಪೇನ್: ಸ್ಪೇನ್ ಸುಮಾರು 142 TWh ನವೀಕರಿಸಬಹುದಾದ ವಿದ್ಯುತ್ ಅನ್ನು ಉತ್ಪಾದಿಸಿದೆ. ಬೃಹತ್ ಕಡಲತೀರದ ಗಾಳಿ, ಕೇಂದ್ರೀಕೃತ ಸೌರ ವಿದ್ಯುತ್ ಸ್ಥಾವರಗಳು ಮತ್ತು ಬಲವಾದ EU ಬೆಂಬಲದೊಂದಿಗೆ, ಯುರೋಪಿನ ಹಸಿರು ಇಂಧನ ಗುರಿ ಮುಟ್ಟಲು ಸ್ಪೇನ್ ನೆರವಾಗುತ್ತಿದೆ.

ಚೀನಾ, ಅಮೆರಿಕ ಮತ್ತು ಭಾರತ ವಿಶ್ವದ ಪ್ರಮುಖ ಇಂಧನ ಗ್ರಾಹಕ ಮತ್ತು ಉತ್ಪಾದಕ ದೇಶಗಳಾಗಿರುವಾಗ, ಈ ನಡುವೆ ಸ್ವೀಡನ್, ಡೆನ್ಮಾರ್ಕ್ ಮತ್ತು ಫಿನ್ಲ್ಯಾಂಡ್ನಂತಹ ನಾರ್ಡಿಕ್ ದೇಶಗಳು ಕೂಡ ಇಂಧನ ಪರಿವರ್ತನೆ, ಸುಸ್ಥಿರತೆ ಮತ್ತು ದಕ್ಷತೆಯಲ್ಲಿ ಮುಂದಿವೆ. ಡೆನ್ಮಾರ್ಕ್ 2024ರಲ್ಲಿ ತನ್ನ ಶೇ. 88 ಶಕ್ತಿಯನ್ನು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪಡೆದುಕೊಂಡಿದೆ. ಅದರಲ್ಲಿ ಶೇ. 58ರಷ್ಟು ಪವನ ಮೂಲಗಳಿಂದ ಬಂದಿದೆ. ಸ್ವೀಡನ್, ಫಿನ್ಲ್ಯಾಂಡ್, ಸಿಟ್ಸರ್ಲ್ಯಾಂಡ್ ಪರಿಸರ ಸುಸ್ಥಿರತೆ, ಇಂಧನ ಸುರಕ್ಷತೆ ಮತ್ತು ಪರಿವರ್ತನೆಯಲ್ಲಿ ತಮ್ಮದೇ ಪಾಲು ನಿಡುವಲ್ಲಿ ಸ್ಥಿರತೆ ಕಾಯ್ದುಕೊಂಡಿವೆ.

Tags

fuel
share
ಆರ್. ಜೀವಿ
ಆರ್. ಜೀವಿ
Next Story
X