Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಅಧಿಕಾರಿಗಳ ಸೇವಾ ನಿಯೋಜನೆ:...

ಅಧಿಕಾರಿಗಳ ಸೇವಾ ನಿಯೋಜನೆ: ಕೇಂದ್ರ-ರಾಜ್ಯಗಳ ತಕರಾರೇನು?

ವಾರ್ತಾಭಾರತಿವಾರ್ತಾಭಾರತಿ6 Aug 2025 4:12 PM IST
share
ಅಧಿಕಾರಿಗಳ ಸೇವಾ ನಿಯೋಜನೆ: ಕೇಂದ್ರ-ರಾಜ್ಯಗಳ ತಕರಾರೇನು?

2014ರಿಂದ ಪಿಎಂಒದಿಂದ ಹಿಡಿದು ಪ್ರಮುಖ ಸಚಿವಾಲಯಗಳು, ತನಿಖಾ ಸಂಸ್ಥೆಗಳು ಮತ್ತು ಭಾರತದ ಉನ್ನತ ತೆರಿಗೆ ಸಂಗ್ರಹ ಪ್ರಾಧಿಕಾರದವರೆಗೆ, ದಿಲ್ಲಿಯ ಅಧಿಕಾರ ವಲಯದಲ್ಲಿನ ಅನೇಕ ನಿರ್ಣಾಯಕ ಹುದ್ದೆಗಳು ಗುಜರಾತ್ ಕೇಡರ್‌ನ ಅಧಿಕಾರಿಗಳು ಅಥವಾ ಗುಜರಾತ್ ಜೊತೆ ಸಂಬಂಧವಿರುವ ಅಧಿಕಾರಿಗಳ ಹಿಡಿತದಲ್ಲೇ ಇವೆ. 2014ರಿಂದಲೂ ಮೋದಿ ಸ್ವತಃ ತಾವೇ ಆರಿಸಿಕೊಳ್ಳುವ ತಮ್ಮದೇ ಅಧಿಕಾರಿಗಳ ತಂಡವನ್ನು ಹೊಂದಿದ್ದಾರೆ.

ಭಾಗ - 2

ಪಿ.ಕೆ. ಮಿಶ್ರಾ

ಈಗ ಮೋದಿಯವರ ಪ್ರಿನ್ಸಿಪಲ್ ಸೆಕ್ರೆಟರಿಯಾಗಿರುವ ಪಿ.ಕೆ. ಮಿಶ್ರಾ 1972ರ ಬ್ಯಾಚ್‌ನ ಗುಜರಾತ್ ಕೇಡರ್ ಐಎಎಸ್ ಅಧಿಕಾರಿ. ಅವರು ಮೋದಿ ಅವರ ಮೊದಲ ಅವಧಿಯಲ್ಲಿ ಐದು ವರ್ಷಗಳ ಕಾಲ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದವರು. ಅದು ಅವರಿಗಾಗಿಯೇ ವಿಶೇಷವಾಗಿ ರಚಿಸಲಾದ ಹುದ್ದೆಯಾಗಿತ್ತು. ಬಳಿಕ ಅವರು ಪ್ರಧಾನಿಯವರ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಅಧಿಕಾರ ವಹಿಸಿಕೊಂಡರು. ಮೋದಿಯವರ ಗುಜರಾತ್ ಅವಧಿಯಿಂದಲೂ ಅವರ ವಿಶ್ವಾಸಾರ್ಹ ಅಧಿಕಾರಿ. ಮೋದಿ ಆಡಳಿತದಲ್ಲಿ ಪ್ರಮುಖ ಪಾತ್ರ ಹೊಂದಿರುವ ಮಿಶ್ರಾ ಅವರಿಗೆ 2019ರಲ್ಲಿ ಕ್ಯಾಬಿನೆಟ್ ಶ್ರೇಣಿ ನೀಡಲಾಯಿತು.

ಹಸ್ಮುಖ್ ಅಧಿಯಾ

1981ರ ಬ್ಯಾಚ್ ಗುಜರಾತ್ ಕೇಡರ್ ಐಎಎಸ್ ಅಧಿಕಾರಿ ಹಸ್ಮುಖ್ ಅಧಿಯಾ ಅವರು ಹಣಕಾಸು ಕಾರ್ಯದರ್ಶಿ (2014-2018) ಮತ್ತು ಕಂದಾಯ ಕಾರ್ಯದರ್ಶಿಯಾಗಿದ್ದರು. ಅವರು ಜಿಎಸ್‌ಟಿ ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2016ರಲ್ಲಿ ನೋಟು ರದ್ದತಿ ಬಗ್ಗೆ ತಿಳಿದಿದ್ದ ಕೆಲವೇ ಜನರಲ್ಲಿ ಒಬ್ಬರಾಗಿದ್ದರು.

ಪಿ.ಡಿ. ವಘೇಲಾ

2020ರಲ್ಲಿ ಮೋದಿ ಸರಕಾರ 1986ರ ಬ್ಯಾಚ್‌ನ ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿ ಪಿ.ಡಿ. ವಘೇಲಾ ಅವರನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷರನ್ನಾಗಿ ನೇಮಿ ಸಿತು. ಇದರೊಂದಿಗೆ, ಆಗ ನಾಲ್ಕು ಪ್ರಮುಖ ನಿಯಂತ್ರಕ ಸಂಸ್ಥೆಗಳು ಗುಜರಾತ್ ಕೇಡರ್‌ನ ಅಧಿಕಾರಿಗಳ ನೇತೃತ್ವದಲ್ಲಿದ್ದಂತಾಗಿತ್ತು. ವಘೇಲಾ ಕೂಡ 2017ರಲ್ಲಿ ಜಿಎಸ್‌ಟಿ ಜಾರಿಗೆ ತರುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ವಘೇಲಾ ನಿವೃತ್ತರಾಗಬೇಕಿದ್ದ ಹೊತ್ತಲ್ಲೇ ಮೂರು ವರ್ಷಗಳ ಅವಧಿಗೆ ಟ್ರಾಯ್ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಜಿ.ಸಿ. ಮುರ್ಮು

ಅದೇ 2020ರ ಆರಂಭದಲ್ಲಿ ಗುಜರಾತ್ ಕೇಡರ್‌ನ ಮತ್ತೊಬ್ಬ ಅಧಿಕಾರಿ ಜಿ.ಸಿ. ಮುರ್ಮು ಅವರನ್ನು ಮೋದಿ ಸರಕಾರ ಸಿಎಜಿ ಮುಖ್ಯಸ್ಥರನ್ನಾಗಿ ನೇಮಿಸಿತು. ಅದಕ್ಕೂ ಮೊದಲು, ಮುರ್ಮು ಹಣಕಾಸು ಸಚಿವಾಲಯದಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಹೊಸದಾಗಿ ರೂಪುಗೊಂಡ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಕೂಡ ಆಗಿದ್ದರು.

ಪಿ.ಕೆ. ಪೂಜಾರಿ

ಮತ್ತೊಂದು ಪ್ರಮುಖ ನಿಯಂತ್ರಕ ಸಂಸ್ಥೆಯಾದ ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್‌ಸಿ) ಕೂಡ ಆಗ ಗುಜರಾತ್‌ನ ನಿವೃತ್ತ ಐಎಎಸ್ ಅಧಿಕಾರಿಯ ಕೈಯಲ್ಲಿತ್ತು. ಅವರು ಪಿ.ಕೆ. ಪೂಜಾರಿ. ಅವರು 2018ರಿಂದ ಈ ಹುದ್ದೆಯಲ್ಲಿದ್ದರು.

ರೀಟಾ ಟಿಯೋಟಿಯಾ

2019ರಲ್ಲಿ 1981ರ ಬ್ಯಾಚ್‌ನ ಗುಜರಾತ್ ಕೇಡರ್ ಅಧಿಕಾರಿ ರೀಟಾ ಟಿಯೋಟಿಯಾ ಅವರನ್ನು ಭಾರತೀಯ ಆಹಾರ ಸುರಕ್ಷತಾ ಮಾನದಂಡಗಳ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಅಧ್ಯಕ್ಷರನ್ನಾಗಿ ನೇಮಿಸಲಾಯಿತು.

ಮೋದಿ ದಿಲ್ಲಿ ದರ್ಬಾರಿಗೆ ಬಂದಾಗಿನಿಂದಲೂ ಆಡಳಿತದಲ್ಲಿ ಗುಜರಾತ್‌ನ ಅಧಿಕಾರಿಗಳದ್ದೇ ಪಾರುಪತ್ಯ ಎಂಬ ಬಗ್ಗೆ ಬಹಳಷ್ಟು ಟೀಕೆಗಳಿವೆ. ಆ ಪಾರುಪತ್ಯ ಮೋದಿಯವರ ಎರಡು ಮತ್ತು ಮೂರನೇ ಅವಧಿಯಲ್ಲೂ ಮುಂದುವರಿದಿದೆ.

ಪಿಎಂಒ ಮಾತ್ರವಲ್ಲದೆ, ಮೋದಿ ಸರಕಾರ ದಲ್ಲಿನ ಅತ್ಯಂತ ಪ್ರಮುಖ ಹುದ್ದೆಗಳಲ್ಲೂ ಗುಜರಾತ್ ಅಧಿಕಾರಿಗಳು ಮೆರೆದಿದ್ದಾರೆ. 1989ರ ಬ್ಯಾಚ್‌ನ ಗುಜರಾತ್ ಕೇಡರ್ ಅಧಿಕಾರಿ ಕಟಿಕಿಥಲ ಶ್ರೀನಿವಾಸ್ ಅವರನ್ನು ಕೇಂದ್ರ ಸರಕಾರದ ಎಲ್ಲಾ ಉನ್ನತ ಹುದ್ದೆಗಳಿಗೆ ನೇಮಕಾತಿಗಳನ್ನು ನಿರ್ಧರಿಸುವ ನೇಮಕಾತಿ ಸಮಿತಿಯ (ಎಸಿಸಿ) ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಸಚಿವಾಲಯಗಳಲ್ಲಿ ಕೆಲಸ ಮಾಡಿದ ಗುಜರಾತಿನ ಇತರ ಅಧಿಕಾರಿಗಳೆಂದರೆ, ಗುರುಪ್ರಸಾದ್ ಮೊಹಾಪಾತ್ರ (ಕಾರ್ಯದರ್ಶಿ, ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ ಅಥವಾ ಡಿಪಿಐಐಟಿ); ಎ.ಕೆ. ಶರ್ಮಾ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ); ಅನಿತಾ ಕರ್ವಾಲ್ (ಶಾಲಾ ಶಿಕ್ಷಣ ಕಾರ್ಯದರ್ಶಿ); ಆರ್.ಪಿ. ಗುಪ್ತಾ (ನೀತಿ ಆಯೋಗದಲ್ಲಿ ವಿಶೇಷ ಕಾರ್ಯದರ್ಶಿ). 2020ರ ಆರಂಭದಲ್ಲಿ ಮೋದಿಯವರ ಆಪ್ತ ವಲಯದ ಮತ್ತು 1988ರ ಬ್ಯಾಚ್‌ನ ಗುಜರಾತ್ ಕೇಡರ್‌ನ ಐಎಫ್‌ಒಎಸ್ ಅಧಿಕಾರಿ ಭರತ್ ಲಾಲ್ ಅವರನ್ನು ಜಲಶಕ್ತಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಅದು ಹೊಸದಾಗಿ ರಚಿಸಲಾದ ಸಚಿವಾಲಯಕ್ಕೆ ಗಮನ ಕೊಡುವ ಅಗತ್ಯದ ಹಿನ್ನೆಲೆಯ ನೇಮಕವಾಗಿತ್ತು. ಇನ್ನು, ಗುಜರಾತ್ ಕೇಡರ್‌ನ 1984ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ರಾಕೇಶ್ ಅಸ್ತಾನಾ ಅವರನ್ನು ಸಿಬಿಐ ವಿಶೇಷ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಭ್ರಷ್ಟಾಚಾರದ ಆರೋಪಕ್ಕೆ ತುತ್ತಾಗಿ ಅವರು ಅಲ್ಲಿಂದ ಹೊರಬೀಳಬೇಕಾಯಿತು. ಕಡೆಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಅವರಿಗೆ ಕ್ಲೀನ್ ಚಿಟ್ ನೀಡಿತು. 1984ರ ಬ್ಯಾಚ್‌ನ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ವೈ.ಸಿ. ಮೋದಿ ಅವರನ್ನು ಎನ್‌ಐಎಗೆ 2017ರ ಸೆಪ್ಟಂಬರ್‌ನಲ್ಲಿ ನೇಮಿಸಲಾಗಿತ್ತು. 1982ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ಪಿ.ಸಿ. ಮೋದಿ ಅವರನ್ನು ಕೇಂದ್ರ ನೇರ ತೆರಿಗೆ ಮಂಡಳಿಯ (ಸಿಬಿಡಿಟಿ) ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಆ ಹುದ್ದೆಯಲ್ಲಿ ಅವರಿಗೆ ಎರಡನೇ ವಿಸ್ತರಣೆಯನ್ನೂ ನೀಡಲಾಗಿತ್ತು. ದಿಲ್ಲಿಯ ಈ ಉನ್ನತ ಹುದ್ದೆಗೆ ಬರುವ ಮೊದಲು ಅವರು ಗುಜರಾತ್‌ನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿದ್ದರು.

ಮೋದಿ ಆಡಳಿತದಲ್ಲಿ ಗುಜರಾತ್ ಕೇಡರ್ ಅಧಿಕಾರಿಗಳು ನಿರಂತರ ಜಾಗ ಪಡೆಯುತ್ತಿರುವುದು ಒಂದೆಡೆಯಾದರೆ, ಮೋದಿ ಆಪ್ತ ವಲಯದ ಅಧಿಕಾರಿಗಳಿಗೆ ವಿವಾದವೇಳುವ ಮಟ್ಟಿಗೆ ಸೇವಾವಧಿ ವಿಸ್ತರಣೆ ಸಿಗುವುದು ಮತ್ತೊಂದೆಡೆ ನಡೆಯುತ್ತ ಬಂದಿದೆ. ಸಂಪುಟ ಕಾರ್ಯದರ್ಶಿಗಳು, ತಮ್ಮ ಮುಖ್ಯ ಕಾರ್ಯದರ್ಶಿಗಳು, ತಮ್ಮ ಗೃಹ ಕಾರ್ಯದರ್ಶಿ, ತಮ್ಮ ಕಾರ್ಯದರ್ಶಿ, ತಮ್ಮ ಸಲಹೆಗಾರರನ್ನು ಮೋದಿ ಸರಕಾರ ವಿಸ್ತರಣೆ ಕೊಟ್ಟು ಕೊಟ್ಟು ಜೊತೆಗೇ ಉಳಿಸಿಕೊಳ್ಳುತ್ತಿರುವುದು ಹಲವು ಸಲ ವಿವಾದವನ್ನೆಬ್ಬಿಸಿದೆ.

ಉದಾಹರಣೆಗೆ, ಈ.ಡಿ. ನಿರ್ದೇಶಕರಾಗಿದ್ದ ಸಂಜಯ್ ಕುಮಾರ್ ಮಿಶ್ರಾ ಅವರಿಗೆ ಒಂದರ ಬೆನ್ನಿಗೆ ಒಂದರಂತೆ ವಿಸ್ತರಣೆ ನೀಡಲಾಗಿತ್ತು. ಮೂರು ಬಾರಿ ಅವರಿಗೆ ವಿಸ್ತರಣೆ ಕೊಟ್ಟಿದ್ದಕ್ಕೆ ಮೋದಿ ಸರಕಾರದ ವಿರುದ್ಧ ತೀವ್ರ ಕಟುವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಮಿಶ್ರಾ ಅವಧಿಯನ್ನು ಏಕೆ ವಿಸ್ತರಿಸಬೇಕು? ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತ್ತು. ಅವರನ್ನು ಹೊರತುಪಡಿಸಿ ಇಡೀ ಇಲಾಖೆಯೇ ಅಸಮರ್ಥರಿಂದ ತುಂಬಿದೆಯೇ ಎಂದು ಕಿಡಿ ಕಾರಿತ್ತು. ಹಾಲಿ ನಿರ್ದೇಶಕರನ್ನು ಹೊರತುಪಡಿಸಿ ಬೇರಾರೂ ಸಮರ್ಥರಿಲ್ಲ ಎಂಬ ಚಿತ್ರಣವನ್ನು, ತಪ್ಪು ಸಂದೇಶವನ್ನು ಇದು ನೀಡುವುದಿಲ್ಲವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ನಿಮ್ಮ ಇಡೀ ಇಲಾಖೆ ಅಸಮರ್ಥ ವ್ಯಕ್ತಿಗಳಿಂದ ತುಂಬಿದೆ ಮತ್ತು ನಿಮ್ಮ ಇಲಾಖೆ ಒಬ್ಬನೇ ಒಬ್ಬ ಸಮರ್ಥ ವ್ಯಕ್ತಿಯನ್ನು ಮಾತ್ರ ಹೊಂದಿದೆ. ಆ ಒಬ್ಬ ವ್ಯಕ್ತಿಯಿಲ್ಲದೆ ನೀವು ಕೆಲಸ ಮಾಡುವುದಕ್ಕೇ ಸಾಧ್ಯವಿಲ್ಲ ಎಂಬ ಅಸಹಾಯಕತೆ ತೋರಿಸುತ್ತಿಲ್ಲವೇ? ಇದು ಈ.ಡಿ. ಬಲವನ್ನು ಕುಗ್ಗಿಸುವುದಿಲ್ಲವೇ ಎಂದು ಪ್ರಶ್ನಿಸಿತ್ತು.

ಮಿಶ್ರಾ ಅವರನ್ನು ಮೊದಲು ನವೆಂಬರ್ 19, 2018ರಂದು ಎರಡು ವರ್ಷಗಳ ಅವಧಿಗೆ ಈ.ಡಿ. ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿತ್ತು. ನಂತರ, ನವೆಂಬರ್ 13, 2020ರ ಆದೇಶದ ಮೂಲಕ ನೇಮಕಾತಿ ಆದೇಶ ಮಾರ್ಪಡಿಸಿದ ಕೇಂದ್ರ ಸರಕಾರ, ಅವರ ಎರಡು ವರ್ಷಗಳ ಅವಧಿಯನ್ನು ಮೂರು ವರ್ಷಗಳಿಗೆ ವಿಸ್ತರಿಸಿತ್ತು. ಇದಾದ ಮೇಲೆ, ಈ.ಡಿ. ಮತ್ತು ಕೇಂದ್ರ ತನಿಖಾ ದಳದ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಡ್ಡಾಯ ಅವಧಿಯ ನಂತರ ಮೂರು ವರ್ಷಗಳವರೆಗೆ ವಿಸ್ತರಿಸಬಹುದು ಎಂದು ಸುಗ್ರೀವಾಜ್ಞೆ ತಂದು, 2022ರ ನವೆಂಬರ್ ನಲ್ಲಿ ಮಿಶ್ರಾ ಅವಧಿಯನ್ನು ಮತ್ತೆ ಒಂದು ವರ್ಷ ವಿಸ್ತರಣೆ ಮಾಡಲಾಗಿತ್ತು. ಕಡೆಗೆ ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಸೂಚಿಸಿದ ಬಳಿಕ ಅವರ ಅವಧಿ 2023ರ ಸೆಪ್ಟಂಬರ್ 15ಕ್ಕೆ ಕೊನೆಗೊಂಡಿತ್ತು. ಅಷ್ಟಾದ ಮೇಲೆಯೂ, ಈ ವರ್ಷ ಮಾರ್ಚ್‌ನಲ್ಲಿ ಅವರನ್ನು ಪ್ರಧಾನಿ ಮೋದಿಯ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಯಿತು.

ಪಿ.ಕೆ. ಮಿಶ್ರಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರದೂ ಮರು ನೇಮಕವೇ ಆಗಿದೆ. ಇದಲ್ಲದೆ, ಅಮಿತ್ ಖರೆ ಮತ್ತು ತರುಣ್ ಕಪೂರ್ ಅವರನ್ನು ಪ್ರಧಾನಿಯವರ ಸಲಹೆಗಾರರನ್ನಾಗಿ ಸರಕಾರ ಮರು ನೇಮಕ ಮಾಡಲಾಗಿದೆ. 2017ರಿಂದ ಆಯುಷ್ ಸಚಿವಾಲಯದ ಕಾರ್ಯದರ್ಶಿಯಾಗಿರುವ ರಾಜೇಶ್ ಕೋಟೆಚಾ ಅವರಿಗೆ ನಾಲ್ಕನೇ ವಿಸ್ತರಣೆ ನೀಡಲಾಗಿದ್ದು, ಅವರ ಅವಧಿ 2026ರ ಜೂನ್ 28ರವರೆಗೆ ಇರುತ್ತದೆ. ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ 1982ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು, ಅವರಿಗೆ ಮೂರು ವಿಸ್ತರಣೆಗಳನ್ನು ನೀಡಲಾಗಿತ್ತು. 1984ರ ಬ್ಯಾಚ್‌ನ ಅಧಿಕಾರಿ ಅಜಯ್ ಭಲ್ಲಾ ಭಾರತೀಯ ಇತಿಹಾಸದಲ್ಲಿ ಎರಡನೇ ಅತಿ ಹೆಚ್ಚು ಅವಧಿಗೆ ಸೇವೆ ಸಲ್ಲಿಸಿದ ಗೃಹ ಕಾರ್ಯದರ್ಶಿಯಾಗಿದ್ದರು. ಆಗಸ್ಟ್ 2019 ರಲ್ಲಿ ಈ ಹುದ್ದೆಗೆ ನೇಮಕಗೊಂಡ ನಂತರ ಅವರಿಗೆ ನಾಲ್ಕು ವಿಸ್ತರಣೆಗಳನ್ನು ನೀಡಲಾಯಿತು. ಆಗಸ್ಟ್ 22, 2024 ರವರೆಗೆ ಅಧಿಕಾರದಲ್ಲಿದ್ದ ಅವರನ್ನು 2024ರ ಡಿಸೆಂಬರ್ ನಲ್ಲಿ ಮಣಿಪುರ ಗವರ್ನರ್ ಆಗಿ ನೇಮಿಸಲಾಯಿತು. ಐಎಫ್‌ಎಸ್ ಅಧಿಕಾರಿ ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ, ನವೆಂಬರ್ 2022ರಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ 1988ರ ಬ್ಯಾಚ್‌ನ ಐಎಎಸ್ ಅಧಿಕಾರಿ ಅರಮನೆ ಗಿರಿಧರ್, 1986ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿ ನಿತಿನ್ ಗುಪ್ತಾ ಇವರೆಲ್ಲರೂ ವಿಸ್ತರಣೆ ಪಡೆದವರೇ ಆಗಿದ್ದಾರೆ.

ಇದಲ್ಲದೆ ಕೇಂದ್ರ ಸೇವೆಗೆ ಅಧಿಕಾರಿಗಳ ನಿಯೋಜನೆ ವಿಚಾರದಲ್ಲಿ ರಾಜ್ಯ ಸರಕಾರಗಳು ಕೇಂದ್ರದ ನಿರ್ಧಾರವನ್ನು ವಿರೋಧಿಸಿದ ಹಲವಾರು ಪ್ರಮುಖ ಘಟನೆಗಳು ನಡೆದಿವೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ, 2021ರಲ್ಲಿ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿಯಾಗಿದ್ದ ಅಲಪನ್ ಬಂದೋಪಾಧ್ಯಾಯ ಅವರ ಪ್ರಕರಣ. ಕೇಂದ್ರ ಸರಕಾರ ಅವರನ್ನು ಏಕಾಏಕಿ ಕೇಂದ್ರ ಸೇವೆಗೆ ನಿಯೋಜಿಸಲು ಆದೇಶಿಸಿದಾಗ, ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ ಅದನ್ನು ತೀವ್ರವಾಗಿ ವಿರೋಧಿಸಿ, ಅವರನ್ನು ಬಿಡುಗಡೆ ಮಾಡಲು ನಿರಾಕರಿಸಿತ್ತು. ಇದೇ ರೀತಿಯ ಮತ್ತೊಂದು ಘಟನೆಯಲ್ಲಿ, 2020ರಲ್ಲಿ, ಪಶ್ಚಿಮ ಬಂಗಾಳದಲ್ಲೇ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಬೆಂಗಾವಲು ವಾಹನದ ಮೇಲಿನ ದಾಳಿಯ ನಂತರ, ಮೂವರು ಐಪಿಎಸ್ ಅಧಿಕಾರಿಗಳಾದ ಭೋಲಾನಾಥ್ ಪಾಂಡೆ, ಪ್ರವೀಣ್ ತ್ರಿಪಾಠಿ ಮತ್ತು ರಾಜೀವ್ ಮಿಶ್ರಾ ಅವರನ್ನು ಕೇಂದ್ರಕ್ಕೆ ನಿಯೋಜಿಸಲಾಗಿತ್ತು. ಆಗಲೂ ಸಹ, ರಾಜ್ಯ ಸರಕಾರ ಕೇಂದ್ರದ ಆದೇಶವನ್ನು ತಿರಸ್ಕರಿಸಿ, ಆ ಅಧಿಕಾರಿಗಳನ್ನು ತಮ್ಮ ಕೇಡರ್‌ನಿಂದ ಬಿಟ್ಟುಕೊಡಲು ಒಪ್ಪಲಿಲ್ಲ. 2014ರಲ್ಲಿ, ತಮಿಳುನಾಡು ಸರಕಾರದಿಂದ ಅಧಿಕೃತವಾಗಿ ಬಿಡುಗಡೆಯಾಗುವ ಮೊದಲೇ ಕೇಂದ್ರದ ಆದೇಶದ ಮೇರೆಗೆ ಸಿಬಿಐಗೆ ಸೇರಿದ ತಮ್ಮ ಕೇಡರ್‌ನ ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಂ ಅವರನ್ನು ರಾಜ್ಯ ಸರಕಾರ ಅಮಾನತುಗೊಳಿಸಿತ್ತು. ಈ ಎರಡೂ ಪ್ರಕರಣಗಳು, ರಾಜ್ಯಗಳು ತಮ್ಮ ಅಧಿಕಾರಿ ಗಳ ನಿಯಂತ್ರಣವನ್ನು ಉಳಿಸಿಕೊಳ್ಳಲು ಕೇಂದ್ರ ದೊಂದಿಗೆ ಹೇಗೆ ನೇರವಾಗಿ ಸಂಘರ್ಷಕ್ಕಿಳಿದವು ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X