Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಖಾಸಗಿ ವಲಯದ ಮೀಸಲಾತಿಗಿರುವ...

ಖಾಸಗಿ ವಲಯದ ಮೀಸಲಾತಿಗಿರುವ ಅಡೆತಡೆಗಳನ್ನು ನಿವಾರಿಸಲು ಸಾಧ್ಯವೇ?

ಆರ್.ಜೀವಿಆರ್.ಜೀವಿ21 May 2025 12:45 PM IST
share
ಖಾಸಗಿ ವಲಯದ ಮೀಸಲಾತಿಗಿರುವ ಅಡೆತಡೆಗಳನ್ನು ನಿವಾರಿಸಲು ಸಾಧ್ಯವೇ?
ಜಾತಿ ಜನಗಣತಿಯ ಕುರಿತ ಬೇಡಿಕೆಯ ಬೆನ್ನಲ್ಲೇ ಖಾಸಗಿ ವಲಯದಲ್ಲಿನ ಮೀಸಲಾತಿಯ ಆಗ್ರಹ ಹೆಚ್ಚತೊಡಗಿದೆ. ಇದು ಬಹಳ ವರ್ಷಗಳಿಂದ ಇರುವ ಬೇಡಿಕೆಯೇ ಆಗಿದೆ. ಆದರೆ, ಆ ನಿಟ್ಟಿನ ಪ್ರಯತ್ನಗಳು ದಡ ಮುಟ್ಟದೇ ಉಳಿದಿವೆ ಎಂಬುದು ಕೂಡ ಸತ್ಯ. ಅದೊಂದು ರೀತಿಯಲ್ಲಿ ಕಟು ಸತ್ಯವೂ ಹೌದು. ಸರಕಾರಗಳ ದೌರ್ಬಲ್ಯ ಗೊತ್ತಿರುವ ಕಾರ್ಪೊರೇಟ್ ವಲಯ ಲಗಾಮನ್ನು ತನ್ನ ಕೈಯಲ್ಲಿಯೇ ಇಟ್ಟುಕೊಳ್ಳಲು ನೋಡುತ್ತದೆ. ಹೀಗಿರುವುದರ ನಡುವೆಯೂ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷ ನಾಯಕರುಗಳಿಂದ ಖಾಸಗಿ ವಲಯದ ಮೀಸಲಾತಿ ಒತ್ತಾಯಗಳು ಪ್ರಬಲವಾಗುತ್ತಲೇ ಇವೆ. ಮೊನ್ನೆ ಬಿಹಾರ ಭಾಷಣದಲ್ಲಿ ರಾಹುಲ್ ಈ ವಿಚಾರವನ್ನು ಮತ್ತೆ ತಂದಿದ್ದಾರೆ. ಹಾಗಾದರೆ, ಮೀಸಲಾತಿ ಕಲ್ಪಿಸಲೇಬೇಕಾದ ಅನಿವಾರ್ಯತೆಗೆ ಖಾಸಗಿ ವಲಯವನ್ನು ಸಿಲುಕಿಸುವುದು ಸಾಧ್ಯವೆ? ಖಾಸಗಿ ವಲಯದಲ್ಲಿ ಮೀಸಲಾತಿಯ ಅಗತ್ಯ ಏನಿದೆ? ಸಾಂವಿಧಾನಿಕವಾಗಿ ಅದು ಸಾಧ್ಯವೇ? ಖಾಸಗಿ ವಲಯದಲ್ಲಿ ಮೀಸಲಾತಿಯ ಐತಿಹಾಸಿಕ ನೋಟ, ಪರ-ವಿರೋಧ ವಾದಗಳು, ಅಂತರ್‌ರಾಷ್ಟ್ರೀಯ ಮಾದರಿಗಳು, ಕಾನೂನು ಅಡೆತಡೆಗಳು ಮತ್ತು ಇದರ ಹಿಂದಿನ ರಾಜಕೀಯ ಹಾಗೂ ಕಾರ್ಪೊರೇಟ್ ಒತ್ತಡಗಳು ಏನೇನು?

ಭಾಗ- 1

ಮೇ 15ರಂದು ರಾಹುಲ್ ಬಿಹಾರದಲ್ಲಿ ಮಾತನಾಡುವಾಗ ಮತ್ತೊಮ್ಮೆ ಖಾಸಗಿ ವಲಯದಲ್ಲಿ ಮೀಸಲಾತಿಗೆ ಒತ್ತಾಯಿಸಿದ್ದಾರೆ.

‘‘ಜಾತಿ ಜನಗಣತಿಯನ್ನು ಮಾಡಿಸಬೇಕು ಎಂದು ನಾನು ಸಂಸತ್ತಿನಲ್ಲಿ ಹೇಳಿದ್ದೆ. ಈಗ ನಾನು ಬಿಹಾರದ ಕ್ರಾಂತಿಕಾರಿ ಭೂಮಿಯಿಂದ ಹೇಳುತ್ತಿದ್ದೇನೆ, ಶಿಕ್ಷಣ ಮತ್ತು ನ್ಯಾಯಕ್ಕಾಗಿ ನಾವು ಈ ಮೂರು ಕೆಲಸಗಳನ್ನು ಮಾಡುತ್ತೇವೆ’’ ಎಂದಿದ್ದಾರೆ.

ರಾಹುಲ್ ಗಾಂಧಿ ಪ್ರಸ್ತಾವಿಸಿರುವ ಮೂರು ಅಂಶಗಳೆಂದರೆ,

1. ಪರಿಣಾಮಕಾರಿ ಮತ್ತು ಪಾರದರ್ಶಕ ಜಾತಿ ಜನಗಣತಿ

2. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ

3. ಎಸ್‌ಸಿ-ಎಸ್‌ಟಿ ಒಳ ಮೀಸಲಾತಿಯ ಕಟ್ಟುನಿಟ್ಟಿನ ಜಾರಿ

ಖಾಸಗಿ ವಲಯದಲ್ಲಿ ಮೀಸಲಾತಿ ಬಗ್ಗೆ ರಾಹುಲ್ ಮಾತಾಡುವುದರೊಂದಿಗೆ, ಮತ್ತೊಮ್ಮೆ ಈ ವಿಚಾರಕ್ಕೆ ಹೆಚ್ಚು ಮಹತ್ವ ಬಂದಿದೆ.

ಖಾಸಗಿ ಉದ್ಯಮ ಮತ್ತು ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗ ಮಾರುಕಟ್ಟೆಯಲ್ಲಿ ದೇಶದ ದಮನಿತ ವರ್ಗಕ್ಕೆ ಹೆಚ್ಚು ಜಾಗ ಸಿಗುತ್ತಿಲ್ಲ. ಹೀಗಾಗಿ ದಲಿತರು, ಒಬಿಸಿಗಳಲ್ಲಿ ನಿರುದ್ಯೋಗ ಹೆಚ್ಚಾಗಿದೆ.

ಖಾಸಗಿ ಕಂಪೆನಿಗಳು ಭೂಮಿ, ನೀರು, ವಿದ್ಯುತ್ ಸೇರಿದಂತೆ ಸರಕಾರದಿಂದ ಎಲ್ಲ ಸವಲತ್ತುಗಳನ್ನೂ ಪಡೆಯುತ್ತವೆ. ಅದಕ್ಕೆ ಪ್ರತಿಯಾಗಿ ಕೊಡುವುದೆಂದರೆ ಅವಕ್ಕೆ ಆಗುವುದಿಲ್ಲ.

ಆದರೆ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ ಹೋಗಲಾಡಿಸಲು ಖಾಸಗಿ ವಲಯದಲ್ಲೂ ಮೀಸಲಾತಿ ಕಲ್ಪಿಸಬೇಕೆಂಬುದು ಬಹುಕಾಲದ ಒತ್ತಾಯ.

ಭಾರತದ ಸಂವಿಧಾನ ಸರಕಾರಿ ನೌಕರಿಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿಗಳಿಗೆ ಮೀಸಲಾತಿ ನೀಡುತ್ತದೆ.

ಆದರೆ ಖಾಸಗಿಯವರಿಗೆ ಇವಾವುದೂ ಅನ್ವಯವಾಗುತ್ತಿಲ್ಲ.

ಸಾರ್ವಜನಿಕ ಉದ್ಯಮಗಳ ಖಾಸಗೀಕರಣದಿಂದ ಲಕ್ಷಾಂತರ ಉದ್ಯೋಗಗಳು ನಷ್ಟವಾಗುತ್ತಿರುವಾಗ, ಇದೊಂದು ದೊಡ್ಡ ಬಿಕ್ಕಟ್ಟಾಗಿದೆ.

ಖಾಸಗಿ ಕಂಪೆನಿಗಳಲ್ಲಿ ಸಮಾಜದ ಅಂಚಿನಲ್ಲಿರುವವರಿಗೆ ಮೀಸಲಾತಿ ಕಲ್ಪಿಸುವ ಸರಕಾರದ ನಿರ್ಧಾರ ಕೈಗೊಂಡಿಲ್ಲ.

ಭಾರತದಲ್ಲಿ ಮೀಸಲಾತಿ ಎಂಬುದು ಕೇವಲ ನೀತಿಯಲ್ಲ, ಅದೊಂದು ಸಾಮಾಜಿಕ ನ್ಯಾಯದ ಸಾಧನ. ಶತಮಾನಗಳಿಂದ ಅಸಮಾನತೆ ಮತ್ತು ತಾರತಮ್ಯಕ್ಕೆ ಒಳಗಾದ ಸಮುದಾಯಗಳಿಗೆ ಸಮಾಜದ ಮುಖ್ಯವಾಹಿನಿಯಲ್ಲಿ ಸ್ಥಾನ ಕಲ್ಪಿಸುವ ಮಹತ್ವದ ಪ್ರಯತ್ನವಿದು.

ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಯಲ್ಲಿರುವ ಈ ಮೀಸಲಾತಿ ನೀತಿಯ ವ್ಯಾಪ್ತಿಯನ್ನು ಖಾಸಗಿ ವಲಯಕ್ಕೂ ವಿಸ್ತರಿಸಬೇಕೆಂಬ ಚರ್ಚೆ ದಶಕಗಳಿಂದ ನಡೆಯುತ್ತಲೇ ಇದೆ.

ಆರ್ಥಿಕ ಉದಾರೀಕರಣದ ನಂತರ ಖಾಸಗಿ ಕ್ಷೇತ್ರವು ಅಭಿವೃದ್ಧಿಯ ಪ್ರಮುಖ ಕೇಂದ್ರವಾಗಿ ಬೆಳೆದಂತೆ, ಅಲ್ಲಿನ ಪ್ರಾತಿನಿಧ್ಯದ ಕೊರತೆ ಹೆಚ್ಚು ಸ್ಪಷ್ಟವಾಗಿದೆ.

ಮೀಸಲಾತಿ ಎಂದರೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಅಂದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಉದ್ಯೋಗ, ಶಿಕ್ಷಣ ಮತ್ತು ಶಾಸಕಾಂಗದಲ್ಲಿ ನಿರ್ದಿಷ್ಟ ಪ್ರಮಾಣದ ಸ್ಥಾನಗಳನ್ನು ಕಾಯ್ದಿರಿಸುವುದು. ಭಾರತದಲ್ಲಿ ಇದು ವಸಾಹತುಶಾಹಿ ಆಡಳಿತದ ಅವಧಿಯಲ್ಲೇ ಶುರುವಾಗಿದೆ.

1918ರಲ್ಲಿ ಮೈಸೂರು ಸಂಸ್ಥಾನದಲ್ಲಿ ಮಿಲ್ಲರ್ ಸಮಿತಿಯು ಸರಕಾರಿ ಸೇವೆಗಳಲ್ಲಿ ಬ್ರಾಹ್ಮಣೇತರರಿಗೆ ಪ್ರಾತಿನಿಧ್ಯ ನೀಡಲು ಶಿಫಾರಸು ಮಾಡಿದ್ದು ಒಂದು ಗಮನಾರ್ಹ ಹೆಜ್ಜೆ.

ಸ್ವಾತಂತ್ರ್ಯಾನಂತರ, ಭಾರತದ ಸಂವಿಧಾನವು ಸಾಮಾಜಿಕ ನ್ಯಾಯವನ್ನು ಪ್ರಮುಖ ಗುರಿಯಾಗಿಸಿಕೊಂಡಿತು.

ಸಂವಿಧಾನದ 15(4) ಮತ್ತು 16(4) ವಿಧಿಗಳು ಸರಕಾರವು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲು ಅವಕಾಶ ಕಲ್ಪಿಸಿತು. ಆರಂಭದಲ್ಲಿ, ಇದು ಕೇವಲ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಸೀಮಿತವಾಗಿತ್ತು.

1990ರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸುಗಳ ಜಾರಿಯೊಂದಿಗೆ ಇತರ ಹಿಂದುಳಿದ ವರ್ಗಗಳಿಗೂ(ಒಬಿಸಿ) ಕೇಂದ್ರ ಸರಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವಿಸ್ತರಿಸಲಾಯಿತು. ಇದು ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆ ಮತ್ತು ಸಾಮಾಜಿಕ ಪರಿವರ್ತನೆಗೆ ಕಾರಣವಾಯಿತು.

ಆದರೆ, 1991ರ ಆರ್ಥಿಕ ಸುಧಾರಣೆಗಳ ನಂತರ ಖಾಸಗಿ ವಲಯವು ಆರ್ಥಿಕತೆಯಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಿತು.

ಸರಕಾರಿ ಉದ್ಯೋಗಗಳ ಪ್ರಮಾಣ ಕುಸಿಯತೊಡಗಿದಾಗ, ಖಾಸಗಿ ವಲಯದಲ್ಲಿ ಮೀಸಲಾತಿ ಅಗತ್ಯತೆಯ ಕೂಗು ಹೆಚ್ಚಾಯಿತು.

2003ರಲ್ಲಿ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಖಾಸಗಿ ವಲಯದಲ್ಲಿ ಮೀಸಲಾತಿಯ ಬಗ್ಗೆ ಚರ್ಚೆಯಾಗಬೇಕು ಎಂದು ಹೇಳಿದ್ದರು.

ಯುಪಿಎ ಸರಕಾರ ಅಧಿಕಾರದಲ್ಲಿದ್ದಾಗ, ಖಾಸಗಿ ವಲಯದಲ್ಲಿ ಮೀಸಲಾತಿಯ ಬಗ್ಗೆ ಚರ್ಚಿಸಲು ಮಂತ್ರಿಗಳ ಒಂದು ಗುಂಪನ್ನು ರಚಿಸಲಾಗಿತ್ತು, ಆದರೆ ಯಾವುದೇ ನಿರ್ದಿಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ.

2024ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣದ ಸಂಸದೀಯ ಸಮಿತಿಯು ಖಾಸಗಿ ವಲಯದಲ್ಲಿ ಮೀಸಲಾತಿ ವಿಸ್ತರಣೆಯ ಸಾಧ್ಯತೆಗಳ ಬಗ್ಗೆ ಚರ್ಚಿಸುವುದನ್ನು ತನ್ನ ವಾರ್ಷಿಕ ಅಜೆಂಡಾದಲ್ಲಿ ಸೇರಿಸಿಕೊಂಡಿತ್ತು.

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಬೇಕು ಎಂದು ಪ್ರತಿಪಾದಿಸುವವರು ಹಲವು ಪ್ರಮುಖ ವಾದಗಳನ್ನು ಮುಂದಿಡುತ್ತಾರೆ.

1. ಸಾಮಾಜಿಕ ನ್ಯಾಯ ಮತ್ತು ಸಮಾನತೆ

ಭಾರತದಲ್ಲಿ ಜಾತಿ ಆಧಾರಿತ ತಾರತಮ್ಯ ಆಳವಾಗಿ ಬೇರೂರಿದೆ.

ಕೇವಲ ಸರಕಾರಿ ವಲಯದಲ್ಲಿ ಮೀಸಲಾತಿ ಕಲ್ಪಿಸುವುದು ಸಾಲದು. ಖಾಸಗಿ ವಲಯವು ಇಂದು ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದು, ಇಲ್ಲಿಯೂ ಹಿಂದುಳಿದ ವರ್ಗಗಳಿಗೆ ಪ್ರಾತಿನಿಧ್ಯ ದೊರೆಯದಿದ್ದರೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಅಪೂರ್ಣವಾಗುತ್ತದೆ.

ಖಾಸಗಿ ವಲಯದಲ್ಲಿ ಮೀಸಲಾತಿ ಐತಿಹಾಸಿಕ ಅನ್ಯಾಯಗಳನ್ನು ಸರಿಪಡಿಸುವ ಒಂದು ಮಾರ್ಗವಾಗಿದೆ.

2. ಅವಕಾಶಗಳ ಸಮಾನತೆ

ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶವನ್ನು ನೀಡುತ್ತದೆ. ಆದರೆ, ಸಾಮಾಜಿಕ ಹಿನ್ನೆಲೆ ಮತ್ತು ಸಾಂಸ್ಥಿಕ ತಾರತಮ್ಯದಿಂದಾಗಿ ಹಿಂದುಳಿದ ವರ್ಗದವರು ಖಾಸಗಿ ವಲಯದಲ್ಲಿ ಉತ್ತಮ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ‘ದಿ ಪ್ರಿಂಟ್’ನಲ್ಲಿ ಸುಮನ್ ಸಮೋಸ್ ಮತ್ತು ಅರ್ಜುನ್ ರಾಮಚಂದ್ರನ್ ಬರೆದ ಲೇಖನವೊಂದು ಉತ್ತರ ಪ್ರದೇಶದಲ್ಲಿ ನಡೆದ ಅಧ್ಯಯನವನ್ನು ಉಲ್ಲೇಖಿಸಿ, ಮೇಲ್ಜಾತಿಯವರು ಪೀಳಿಗೆಯಿಂದ ಪೀಳಿಗೆಗೆ ಉತ್ತಮ ಸೇವಾ ವಲಯದ ಉದ್ಯೋಗಗಳು ಮತ್ತು ವ್ಯಾಪಾರದಲ್ಲಿ ಪ್ರಾಬಲ್ಯ ಸಾಧಿಸಿರುವುದನ್ನು ಕಂಡುಕೊಂಡಿದೆ ಎಂದು ಹೇಳುತ್ತದೆ. ಇದು ಮಾರುಕಟ್ಟೆ ವ್ಯವಸ್ಥೆ ಸ್ವತಃ ಜಾತಿ ತಾರತಮ್ಯವನ್ನು ಹೋಗಲಾಡಿಸುವುದಿಲ್ಲ ಎಂಬುದಕ್ಕೆ ಪುರಾವೆಯಾಗಿದೆ.

3. ಆರ್ಥಿಕ ಸಬಲೀಕರಣ

ಉದ್ಯೋಗ ಮತ್ತು ಆರ್ಥಿಕ ಸಂಪನ್ಮೂಲಗಳ ಪ್ರವೇಶವು ಸಬಲೀಕರಣಕ್ಕೆ ಅತ್ಯಗತ್ಯ. ಖಾಸಗಿ ವಲಯದಲ್ಲಿ ಮೀಸಲಾತಿ ಹಿಂದುಳಿದ ವರ್ಗಗಳ ಜನರಿಗೆ ಆರ್ಥಿಕವಾಗಿ ಮೇಲೆ ಬರಲು, ಬಡತನವನ್ನು ನಿವಾರಿಸಲು ಮತ್ತು ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ವಿಶಾಲಾರ್ಥದಲ್ಲಿ ಆರ್ಥಿಕ ಪಾಲುದಾರಿಕೆಯನ್ನು ಹೆಚ್ಚಿಸುತ್ತದೆ.

4. ಕಾರ್ಯಕ್ಷೇತ್ರದಲ್ಲಿ ವೈವಿಧ್ಯತೆ

ವೈವಿಧ್ಯಮಯ ಹಿನ್ನೆಲೆಯ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುತ್ತವೆ ಮತ್ತು ಹೆಚ್ಚು ಸೃಜನಶೀಲವಾಗಿರುತ್ತವೆ. ವಿವಿಧ ಸಾಮಾಜಿಕ ಹಿನ್ನೆಲೆಯ ಜನರು ಒಟ್ಟಾಗಿ ಕೆಲಸ ಮಾಡುವುದರಿಂದ ಪರಸ್ಪರ ತಿಳುವಳಿಕೆ ಹೆಚ್ಚುತ್ತದೆ ಮತ್ತು ಸಮಾಜದಲ್ಲಿ ಸಾಮರಸ್ಯ ಬೆಳೆಯುತ್ತದೆ. ಖಾಸಗಿ ವಲಯದಲ್ಲಿ ಮೀಸಲಾತಿ ಕಾರ್ಯಕ್ಷೇತ್ರದ ವೈವಿಧ್ಯವನ್ನು ಹೆಚ್ಚಿಸಲು ಪರಿಣಾಮಕಾರಿ ಮಾರ್ಗವಾಗಿದೆ.

ಸಂಶೋಧನಕಾರ ಹಾಗೂ ಪ್ರಾಧ್ಯಾಪಕ ಅಸೀಮ್ ಪ್ರಕಾಶ್ ಅವರ ಅಧ್ಯಯನಗಳು ದಲಿತ ಉದ್ಯಮಿಗಳು ಮತ್ತು ಬಂಡವಾಳಶಾಹಿಯ ನಡುವಿನ ಸಂಬಂಧವು ಕೇವಲ ‘ಮೆರಿಟ್’ ಮತ್ತು ದಕ್ಷತೆ ಆಧರಿತವಲ್ಲ, ಬದಲಿಗೆ ಸಾಮಾಜಿಕ ಸಂಬಂಧಗಳಲ್ಲಿ ಆಳವಾಗಿ ಬೇರೂರಿದೆ ಎಂದು ತೋರಿಸುತ್ತವೆ ಎಂದು ‘ದಿ ಪ್ರಿಂಟ್’ ಲೇಖನ ಉಲ್ಲೇಖಿಸುತ್ತದೆ.

ಡೇವಿಡ್ ಮೋಸ್ಸೆ ಅವರ ಅಧ್ಯಯನದ ಪ್ರಕಾರ, ನಗರ ಪ್ರದೇಶಗಳಲ್ಲಿನ ಉದ್ಯೋಗ ವಿಂಗಡಣೆ ಕೂಡ ಕೌಶಲ್ಯ, ಭದ್ರತೆ, ಅಪಾಯ ಮತ್ತು ಸ್ಥಾನಮಾನದ ಆಧಾರದ ಮೇಲೆ ನಡೆಯುತ್ತಿದ್ದು, ಇದು ಜಾತಿಯಿಂದ ಪ್ರಭಾವಿತವಾಗಿದೆ ಎಂದು ‘ದಿ ಪ್ರಿಂಟ್’ ಲೇಖನ ತಿಳಿಸುತ್ತದೆ.

share
ಆರ್.ಜೀವಿ
ಆರ್.ಜೀವಿ
Next Story
X