Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಮಹಿಳಾ ನಾಯಕತ್ವ ಎದುರಿಸಿದ,...

ಮಹಿಳಾ ನಾಯಕತ್ವ ಎದುರಿಸಿದ, ಎದುರಿಸುತ್ತಿರುವ ಸವಾಲುಗಳು

ಆರ್.ಜೀವಿ6 Jan 2026 11:00 AM IST
share
ಮಹಿಳಾ ನಾಯಕತ್ವ ಎದುರಿಸಿದ, ಎದುರಿಸುತ್ತಿರುವ ಸವಾಲುಗಳು

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿಯಾಗಿದ್ದ, ಎರಡು ಪೂರ್ಣಾವಧಿಗೆ ಬಾಂಗ್ಲಾವನ್ನು ಆಳಿದ ಖಾಲಿದಾ ಝಿಯಾ 2025ರ ಡಿಸೆಂಬರ್ 30ರಂದು ತೀರಿಕೊಂಡರು. ಬಾಂಗ್ಲಾವನ್ನು ಆಳಿದ ಮತ್ತೊಬ್ಬ ನಾಯಕಿ ಶೇಕ್ ಹಸೀನಾ. ಐದು ಬಾರಿ ಪ್ರಧಾನಿಯಾದ ಅವರು 2024ರ ವಿದ್ಯಾರ್ಥಿ ಚಳವಳಿ ಬಳಿಕ ಪದಚ್ಯುತರಾಗಿ ದೇಶ ಬಿಡಬೇಕಾಯಿತು. ಸದ್ಯ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಖಾಲಿದಾ ಝಿಯಾ ಅವರು ಮಿಲಿಟರಿ ಆಡಳಿತಗಾರ ಝಿಯಾವುರ್ ರಹಮಾನ್ ಅವರ ಪತ್ನಿಯಾದರೆ, ಶೇಕ್ ಹಸೀನಾ ಅವರು ಬಾಂಗ್ಲಾದೇಶದ ಸಂಸದೀಯ ಸರಕಾರದ ಮೊದಲ ಪ್ರಧಾನಿ ಮುಜೀಬುರ‌್ರಹ್ಮಾನ್ ಅವರ ಪುತ್ರಿ. ದಶಕಗಳಿಂದಲೂ ಬಾಂಗ್ಲಾ ರಾಜಕೀಯ ಈ ಇಬ್ಬರು ಬೇಗಂಗಳ ನಡುವಿನ ಕಹಿ ಪೈಪೋಟಿಯ ಸುತ್ತ ಸುತ್ತುತ್ತಿದೆ. ಯಾವ ಪ್ರಜಾಪ್ರಭುತ್ವ ಇವರಿಬ್ಬರನ್ನೂ ಅಧಿಕಾರಕ್ಕೆ ತಂದಿತೋ ಅದೇ ಪ್ರಜಾಪ್ರಭುತ್ವದ ಆಶಯಗಳು ಬಾಂಗ್ಲಾದಲ್ಲಿ ದಿಕ್ಕೆಡುವಂತಾಗಲು ಇವರಿಬ್ಬರ ನಡುವಿನ ರಾಜಕೀಯ ಕದನವೇ ಕಾರಣವಾಯಿತು. ಒಂದು ಬಗೆಯ ಸರ್ವಾಧಿಕಾರವೇ ಅಲ್ಲಿ ತಲೆದೋರಿತು. ಅದೇನೇ ಇದ್ದರೂ, ರಾಜಕೀಯದಲ್ಲಿ ಮಹಿಳೆ ಎಷ್ಟು ಪ್ರಾಬಲ್ಯ ಸಾಧಿಸಬಹುದು ಎನ್ನುವುದರ ಉದಾಹರಣೆಯಾಗಿ ನಿಲ್ಲುವ ಜಗತ್ತಿನ ಪ್ರಮುಖ ನಾಯಕಿಯರಲ್ಲಿ ಖಾಲಿದಾ, ಹಸೀನಾ ನಿಲ್ಲುತ್ತಾರೆ.

ಜಗತ್ತಿನಲ್ಲಿ ಪ್ರಾಚೀನ ಕಾಲದಿಂದಲೂ ರಾಜಕೀಯ ಮಾತ್ರವಲ್ಲ, ಯಾವುದೇ ಕ್ಷೇತ್ರ ತೆಗೆದುಕೊಂಡರೂ ಮಹಿಳೆ ತನ್ನ ಶಕ್ತಿಯನ್ನು ತೋರಿಸಿದ ದೊಡ್ಡ ಚರಿತ್ರೆಯೇ ಇದೆ. ರಾಜಕೀಯ ನಾಯಕತ್ವದ ವಿಚಾರ ನೋಡುವುದಾದರೆ, ಬಹಳ ಸಲ ಸಂದರ್ಭದ ಒತ್ತಾಯದಿಂದಲೇ ಕೌಟುಂಬಿಕ ಬದುಕಿನ ಆಚೆಗೆ ಬಂದು ಆಡಳಿತದ ಸೂತ್ರ ಹಿಡಿದ ಮತ್ತು ಅಷ್ಟೇ ಸಮರ್ಥವಾಗಿ ನಿಭಾಯಿಸಿದ ರಾಣಿಯರನ್ನು, ನಾಯಕಿಯರನ್ನು ಈ ಜಗತ್ತು ಕಂಡಿದೆ. ಯಾವ ಮೀಸಲಾತಿಯೂ ಇಲ್ಲದ ಕಾಲದಿಂದಲೂ, ಯಾವ ‘ಬೇಟಿ ಬಚಾವೊ ಬೇಟಿ ಪಢಾವೊ’ ಘೋಷಣೆಗಳೂ ಇಲ್ಲದ ಕಾಲದಿಂದಲೂ ಮಹಿಳೆಯೊಳಗಿನ ನಾಯಕತ್ವದ ಗುಣ ಹೊರಹೊಮ್ಮಿ ಈ ಜಗತ್ತನ್ನು ಅಚ್ಚರಿಗೊಳಿಸಿದ್ದಿದೆ. ಇತಿಹಾಸ ಮತ್ತು ವರ್ತಮಾನದೊಳಗಿನ ಆ ಬೆರಗಿನ ವ್ಯಕ್ತಿತ್ವಗಳ ಕಡೆ ನೋಡುತ್ತ, ಜಗತ್ತಿನಲ್ಲಿ ಮಹಿಳಾ ನಾಯಕತ್ವ ಆಯಾ ಸಂದರ್ಭಗಳಲ್ಲಿ ವಹಿಸಿದ ನಿರ್ಣಾಯಕ ಪಾತ್ರ, ಕಡೆಗೆ ಪುರುಷರಂತೆಯೇ ಅಧಿಕಾರದ ಹಸಿವಿನಲ್ಲಿ ಭ್ರಷ್ಟತೆಯ ಹಾದಿ ಹಿಡಿದ ಪರಿ, ಅಂದಿಗೂ ಇಂದಿಗೂ ಮಹಿಳಾ ನಾಯಕತ್ವ ಎದುರಿಸಿದ, ಎದುರಿಸುತ್ತಿರುವ ಸವಾಲುಗಳು ಇವೆಲ್ಲವನ್ನೂ ತಿಳಿಯುವ ಯತ್ನ ಇಲ್ಲಿದೆ.

ಇತಿಹಾಸದುದ್ದಕ್ಕೂ ಮತ್ತು ಆಧುನಿಕ ಜಗತ್ತಿನಲ್ಲಿ ರಾಜಕೀಯ, ವ್ಯವಹಾರ, ವಿಜ್ಞಾನ ಮತ್ತು ಸೃಜನಶೀಲತೆಯಂಥ ಯಾವುದೇ ಕ್ಷೇತ್ರವನ್ನು ಗಮನಿಸಿದರೂ, ಮಹಿಳೆಯರು ಗಮನಾರ್ಹ ಶಕ್ತಿ ತೋರಿಸಿದ್ದಾರೆ. ರಾಜಕೀಯವಾಗಿಯಂತೂ, ಪ್ರಾಚೀನ ಕಾಲದ ರಾಣಿಯರಿಂದ ಹಿಡಿದು ಆಧುನಿಕ ಜಗತ್ತಿನ ನಾಯಕಿಯರವರೆಗೆ ಮಹಿಳೆಯರು ಅಸಾಧಾರಣ ಪ್ರಭಾವ ಬೀರಿದ್ದಾರೆ. ಅವರ ಪ್ರಭಾವ ಸಮಾಜಗಳನ್ನು ರೂಪಿಸಿದ್ದಿದೆ ಮತ್ತು ಅಸ್ತಿತ್ವದಲ್ಲಿರುವ ರೂಢಿಗಳನ್ನು ಪ್ರಶ್ನಿಸಿದ್ದಿದೆ.

ಮಹಿಳೆಯರು ಅಧಿಕಾರ ಮತ್ತು ಪ್ರಭಾವೀ ಸ್ಥಾನಗಳನ್ನೇರಲು ಬಹಳಷ್ಟು ಸಾಮಾಜಿಕ ಮತ್ತು ರಾಜಕೀಯ ಅಡೆತಡೆಗಳನ್ನು ಮೀರಿ ನಿಂತ ನೂರಾರು ಉದಾಹರಣೆಗಳು ಚರಿತ್ರೆಯ ಪುಟಗಳಲ್ಲಿ ಮತ್ತು ಆಧುನಿಕ ಜಗತ್ತಿನ ವಿದ್ಯಮಾನಗಳಲ್ಲಿ ದಾಖಲಾಗಿವೆ.

ಕ್ಲಿಯೋಪಾತ್ರ (ಕ್ರಿ.ಪೂ. 6930):

ಈಜಿಪ್ಟ್‌ನ ಟಾಲೆಮಿಕ್ ಸಾಮ್ರಾಜ್ಯದ ಕೊನೆಯ ಸಕ್ರಿಯ ಆಡಳಿತಗಾರ್ತಿ ಕ್ಲಿಯೋಪಾತ್ರ ಅಸಾಧಾರಣ ಬುದ್ಧಿಶಕ್ತಿ ಮತ್ತು ರಾಜಕೀಯ ಕುಶಾಗ್ರಮತಿ ಹೊಂದಿದ್ದವಳು. ಜೂಲಿಯಸ್ ಸೀಸರ್ ಮತ್ತು ಮಾರ್ಕ್ ಆಂಟನಿ ಅವರಂತಹ ರೋಮನ್ ನಾಯಕರನ್ನೇ ತನ್ನ ಮೋಡಿಗೆ ಒಳಪಡಿಸಿದ್ದವಳು. ರಾಣಿಯಾಗಿ, ಅದುವರೆಗಿನ ಒಂದಿಡೀ ಸಂಪ್ರದಾಯವನ್ನೇ ಮುರಿದ ದಿಟ್ಟೆ ಎನ್ನಲಾಗುತ್ತದೆ. ಕ್ಲಿಯೋಪಾತ್ರಳ ರಾಜಕೀಯ ಮೈತ್ರಿಗಳು ಕಾರ್ಯತಂತ್ರದ ಭಾಗವಾಗಿದ್ದವು. ಜೂಲಿಯಸ್ ಸೀಸರ್ ಮತ್ತು ನಂತರ ಮಾರ್ಕ್ ಆಂಟನಿ ಅವರೊಂದಿಗಿನ ಅವಳ ಸಂಪರ್ಕಗಳು ರೋಮನ್ ವಿಸ್ತರಣೆಯ ಹಿನ್ನೆಲೆಯಲ್ಲಿ ಈಜಿಪ್ಟ್‌ನ ಸ್ವಾತಂತ್ರ್ಯವನ್ನು ಕಾಪಾಡುವ ಲೆಕ್ಕಾಚಾರ ಹೊಂದಿದ್ದವು. ಅವಳ ನಾಟಕೀಯ ಜೀವನ ಮತ್ತು ದುರಂತ ಸಾವು ಶತಮಾನಗಳಿಂದ ಅವಳ ಕಥೆಯನ್ನು ಆಕರ್ಷಕವಾಗಿಯೇ ಇರಿಸಿದೆ.

ರಝಿಯಾ ಸುಲ್ತಾನ (1236-1240)

ದಿಲ್ಲಿ ಸುಲ್ತಾನರ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ರಝಿಯಾ ಸುಲ್ತಾನ. ಇವರು ದಿಲ್ಲಿಯ ಸಿಂಹಾಸನ ಏರಿದ ಮೊದಲ ಮತ್ತು ಏಕೈಕ ಮುಸ್ಲಿಮ್ ಮಹಿಳಾ ಆಡಳಿತಗಾರ್ತಿ. ತಮ್ಮ ತಂದೆ ಇಲ್ತುಮಿಶ್ ಅವರ ನಂತರ ಅಧಿಕಾರಕ್ಕೆ ಬಂದ ರಝಿಯಾ, ಪುರುಷರಂತೆ ರಾಜಪೋಷಾಕು ಧರಿಸಿ, ಆನೆಯ ಮೇಲೆ ಕುಳಿತು ದರ್ಬಾರ್ ನಡೆಸಿದವರು. ಮಧ್ಯಕಾಲೀನ ಭಾರತದ ಇತಿಹಾಸದಲ್ಲಿ ಸ್ತ್ರೀ ಶಕ್ತಿಯ ಪ್ರಬಲ ಸಂಕೇತವಾಗಿ ರಝಿಯಾ ಇಂದಿಗೂ ನಿಲ್ಲುತ್ತಾರೆ.

ಮಹಿಳೆಯರ ಸಾಮ್ರಾಜ್ಯ

16 ಮತ್ತು 17ನೇ ಶತಮಾನದ ಆಟೋಮನ್ ಸಾಮ್ರಾಜ್ಯದ ಇತಿಹಾಸದಲ್ಲಿ ಮಹಿಳೆಯರ ಸಾಮ್ರಾಜ್ಯ ಎಂದೇ ಕರೆಯಲ್ಪಡುವ ಒಂದು ವಿಶಿಷ್ಟ ಕಾಲಘಟ್ಟವಿತ್ತು. ಸುಮಾರು 130 ವರ್ಷಗಳ ಈ ಅವಧಿಯಲ್ಲಿ, ಸಾಮ್ರಾಜ್ಯದ ಸುಲ್ತಾನರು ಅಪ್ರಾಪ್ತ ವಯಸ್ಕರು ಅಥವಾ ಅಸಮರ್ಥರಾಗಿದ್ದಾಗ, ಅವರ ತಾಯಂದಿರು ಅಥವಾ ಪತ್ನಿಯರು (ಹಸೆಕಿ ಸುಲ್ತಾನರು ಮತ್ತು ವಾಲಿದತ್ ಸುಲ್ತಾನರು) ಪರದೆಯ ಹಿಂದಿನಿಂದಲೇ ಇಡೀ ಸಾಮ್ರಾಜ್ಯವನ್ನು ಮುನ್ನಡೆಸಿದ್ದರು. ಹುರ್ರೆಂ ಸುಲ್ತಾನ್ ಮತ್ತು ಕೋಸೆಮ್ ಸುಲ್ತಾನ್ ಅವರಂತಹ ಪ್ರಬಲ ಮಹಿಳೆಯರು ಯುದ್ಧತಂತ್ರದಿಂದ ಹಿಡಿದು ರಾಜತಾಂತ್ರಿಕ ನಿರ್ಧಾರಗಳವರೆಗೆ ಎಲ್ಲದರಲ್ಲೂ ಪ್ರಭುತ್ವ ಸಾಧಿಸಿ, ಪುರುಷರಿಗಿಂತಲೂ ತಾವು ಕಡಿಮೆ ಇಲ್ಲ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟರು.

ರಾಣಿ ಎಲಿಝಬೆತ್-I (1533-1603)

1558ರಿಂದ 1603ರಲ್ಲಿ ತನ್ನ ಸಾವಿನವರೆಗೆ ಇಂಗ್ಲೆಂಡ್ ಅನ್ನು ಆಳಿದವರು ಎಲಿಝಬೆತ್-I. ಟ್ಯೂಡರ್ ರಾಜವಂಶದ ಕೊನೆಯ ರಾಣಿಯಾಗಿದ್ದ ಅವಳ ಆಳ್ವಿಕೆಯ ಕಾಲ ಎಲಿಝಬೆತ್ ಯುಗ ಎಂದೇ ಪ್ರಸಿದ್ಧವಾಗಿದೆ. ಚಾಣಾಕ್ಷ ಮತ್ತು ವರ್ಚಸ್ವಿ ವ್ಯಕ್ತಿತ್ವ ಅವರದಾಗಿತ್ತು. ದೇಶ ಮತ್ತು ವಿದೇಶಗಳಲ್ಲಿ ಸ್ಪರ್ಧಾತ್ಮಕ ಶಕ್ತಿಗಳನ್ನು ನಿಭಾಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ರಾಣಿ ವಿಕ್ಟೋರಿಯಾ (1819-1901)

ಬ್ರಿಟಿಷ್ ಇತಿಹಾಸದಲ್ಲಿ ವಿಕ್ಟೋರಿಯನ್ ಯುಗ ಎಂದೇ ಕರೆಯಲ್ಪಡುವ ಇವರ ಆಳ್ವಿಕೆ ಸುದೀರ್ಘ 63 ವರ್ಷಗಳ ಕಾಲ (1837-1901) ನಡೆಯಿತು. ಬ್ರಿಟನ್ ಕಂಡ ಅತ್ಯಂತ ಪ್ರಭಾವಶಾಲಿ ಮತ್ತು ಶಕ್ತಿಶಾಲಿ ರಾಣಿ ಇವರು. ಇವರ ಕಾಲದಲ್ಲೇ ಬ್ರಿಟಿಷ್ ಸಾಮ್ರಾಜ್ಯ ಜಗತ್ತಿನಾದ್ಯಂತ ವಿಸ್ತಾರವಾಗಿ ಬೆಳೆಯಿತು ಮತ್ತು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೂರ್ಯ ಮುಳುಗುವುದಿಲ್ಲ ಎಂಬ ಮಾತು ಜನಜನಿತವಾಯಿತು. ಕೈಗಾರಿಕಾ ಕ್ರಾಂತಿ, ವಿಜ್ಞಾನ ಮತ್ತು ಸೇನಾ ಬಲವರ್ಧನೆಯಲ್ಲಿ ಬ್ರಿಟನ್ ಉಚ್ಛ್ರಾಯ ಸ್ಥಿತಿ ತಲುಪಿದ್ದು ಇವರ ನೇತೃತ್ವದಲ್ಲೇ. ಭಾರತೀಯರ ಪಾಲಿಗೆ ಇವರು ಪ್ರಮುಖರಾಗಲು ಕಾರಣ, 1876ರಲ್ಲಿ ಇವರು ‘ಭಾರತದ ಸಾಮ್ರಾಜ್ಞಿ’ ಎಂಬ ಬಿರುದನ್ನು ಅಧಿಕೃತವಾಗಿ ಧರಿಸಿದ್ದು. ಇಂದಿನ ಆಧುನಿಕ ಬ್ರಿಟನ್ ಮತ್ತು ಕಾಮನ್‌ವೆಲ್ತ್ ರಾಷ್ಟ್ರಗಳ ರಚನೆಗೆ ಇವರ ಆಳ್ವಿಕೆ ಬಲವಾದ ಅಡಿಪಾಯ ಹಾಕಿತು.

ರಾಣಿ ಎಲಿಝಬೆತ್ II (1926-2022)

ಇಂಗ್ಲೆಂಡ್‌ನ ಇತ್ತೀಚಿನ ಮತ್ತು ಸುದೀರ್ಘಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಅವರದು. ಅವರು 1952ರಿಂದ 2022ರವರೆಗೆ 70 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಇದರೊಂದಿಗೆ ಇಂಗ್ಲೆಂಡ್‌ನಲ್ಲಿ ರಾಣಿ ಆಡಳಿತದ ಒಂದು ಶಕೆ ಮುಕ್ತಾಯವಾಯಿತು.

ಕ್ಯಾಥರೀನ್ ದಿ ಗ್ರೇಟ್ (1762-1796)

ರಶ್ಯದ ಸಾಮ್ರಾಜ್ಞಿಯಾಗಿ, ದೇಶದ ಅತ್ಯಂತ ದೀರ್ಘಾವಧಿಯ ನಾಯಕಿಯಾಗಿದ್ದವರು. ಆಕೆಯ ಆಳ್ವಿಕೆಯ ಅವಧಿ ವಿಸ್ತರಣೆ ಮತ್ತು ಆಧುನೀಕರಣವನ್ನು ಕಂಡ ಅವಧಿಯಾಗಿತ್ತು.

ಡೋವೇಜರ್ ಸಿಕ್ಸಿ (1861-1908)

ಚೀನಾದಲ್ಲಿ ಕ್ವಿಂಗ್ ರಾಜವಂಶವನ್ನು 40 ವರ್ಷಗಳಿಗೂ ಹೆಚ್ಚು ಕಾಲ ಪರಿಣಾಮಕಾರಿಯಾಗಿ ನಿಯಂತ್ರಿಸಿದ ಪ್ರಬಲ ಮತ್ತು ವಿವಾದಾತ್ಮಕ ಮಹಿಳೆ.

ಸಿರಿಮಾವೊ ಬಂಡಾರನಾಯಕೆ

ವಿಶ್ವದ ಮೊದಲ ಮಹಿಳಾ ಪ್ರಧಾನಿ ಸಿರಿಮಾ ರತ್ವಟ್ಟೆ ಡಯಾಸ್ ಬಂಡಾರನಾಯಕೆ. ಅವರನ್ನು ಸಾಮಾನ್ಯವಾಗಿ ಸಿರಿಮಾವೋ ಬಂಡಾರನಾಯಕೆ ಎಂದು ಕರೆಯಲಾಗುತ್ತದೆ. ಅವರು 1960 ರಲ್ಲಿ ಶ್ರೀಲಂಕಾದ ಪ್ರಧಾನಿಯಾಗಿ ಆಯ್ಕೆಯಾದರು. ಅವರು ಮೂರು ಅವಧಿಗಳಿಗೆ, ಅಂದರೆ 1960-1965, 1970-1977 ಮತ್ತು 1994-2000ರವರೆಗೆ ಸೇವೆಯಲ್ಲಿದ್ದರು. ಸಿರಿಮಾವೋ ಬಂಡಾರನಾಯಕೆ ಶ್ರೀಲಂಕಾದ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಆಧುನಿಕ ಇತಿಹಾಸದಲ್ಲಿ ವಿಶ್ವದ ಮೊದಲ ಆನುವಂಶಿಕವಲ್ಲದ ಮಹಿಳಾ ಸರಕಾರದ ಮುಖ್ಯಸ್ಥರಾದರು. 1980 ರಲ್ಲಿ ಅವರ ಅಧಿಕಾರಾವಧಿಯಲ್ಲಿ ಅಧಿಕಾರ ದುರುಪಯೋಗಕ್ಕಾಗಿ ಅವರ ನಾಗರಿಕ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು ಮತ್ತು 7 ವರ್ಷಗಳ ಕಾಲ ಸರಕಾರದಿಂದ ನಿಷೇಧಿಸಲಾಯಿತು. ಸಿರಿಮಾವೋ ಬಂಡಾರನಾಯಕೆ ಅಕ್ಟೋಬರ್ 10, 2000ದಂದು ಹೃದಯಾಘಾತದಿಂದ ನಿಧನರಾದರು.

ಗೋಲ್ಡಾ ಮೇಯರ್

ಇಸ್ರೇಲ್‌ನ ಪ್ರಧಾನಿಯಾಗಿದ್ದ ಗೋಲ್ಡಾ ಮೇಯರ್ ಅವರನ್ನು ಮಾರ್ಗರೇಟ್ ಥ್ಯಾಚರ್‌ಗಿಂತ ಮೊದಲೇ ಮಧ್ಯಪ್ರಾಚ್ಯದ ಉಕ್ಕಿನ ಮಹಿಳೆ ಎಂದು ಕರೆಯಲಾಗುತ್ತಿತ್ತು. ಯುದ್ಧದ ಬಿಕ್ಕಟ್ಟಿನ ಸಮಯದಲ್ಲೂ ದೇಶವನ್ನು ದೃಢವಾಗಿ ಮುನ್ನಡೆಸಿದ್ದರು.

ಮಾರ್ಗರೆಟ್ ಥ್ಯಾಚರ್ (1925-2013)

ಬ್ರಿಟನ್‌ನ ಮೊದಲ ಮಹಿಳಾ ಪ್ರಧಾನಿಯಾಗಿ 1979ರಿಂದ 1990ರವರೆಗೆ ಆಳಿದ್ದರು. ಬ್ರಿಟಿಷ್ ಆರ್ಥಿಕತೆಯನ್ನು ಪುನರ್‌ರೂಪಿಸಿದ, ಗಮನಾರ್ಹ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದ ಹೆಗ್ಗಳಿಕೆ ಅವರದಾಗಿದೆ. 20ನೇ ಶತಮಾನದ ಅತ್ಯಂತ ಗಮನಾರ್ಹ ರಾಜಕೀಯ ವ್ಯಕ್ತಿಗಳಲ್ಲಿ ಒಬ್ಬರು. ರಾಜಿಯಾಗದ ವ್ಯಕ್ತಿತ್ವದಿಂದಾಗಿ, ಐರನ್ ಲೇಡಿ ಎಂದೇ ಕರೆಸಿಕೊಂಡಿದ್ದರು. ಬ್ರಿಟಿಷ್ ಆರ್ಥಿಕತೆಯನ್ನು ಪುನರ್‌ರೂಪಿಸಿದ ವ್ಯಾಪಕ ಸಂಪ್ರದಾಯವಾದಿ ಸುಧಾರಣೆಗಳನ್ನು ಪರಿಚಯಿಸಿದರು. ಯುಕೆಯ ಜಾಗತಿಕ ಸ್ಥಾನಮಾನ ಮತ್ತು ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಿದರು. ಸಾಮಾಜಿಕ ಅಸಮಾನತೆ ಹೆಚ್ಚಲು ಕಾರಣರಾದರೆಂಬ ಟೀಕೆಗಳಿವೆ. 1982 ರಲ್ಲಿ ಫಾಕ್ಲ್ಯಾಂಡ್ಸ್ ಯುದ್ಧದ ಸಮಯದಲ್ಲಿ ಅವರು ಯುಕೆಯನ್ನು ಮುನ್ನಡೆಸಿದರು ಮತ್ತು ಪ್ರಬಲ, ನಿರ್ಣಾಯಕ ನಾಯಕಿಯಾಗಿ ಕಂಡರು. ಬ್ರಿಟಿಷ್ ರಾಜಕೀಯದ ಮೇಲಿನ ಥ್ಯಾಚರ್ ಅವರ ಪ್ರಭಾವ ನಿರಾಕರಿಸಲು ಸಾಧ್ಯವಾಗದೇ ಇರುವಂಥದ್ದು.

ವಿಗ್ಡಿಸ್ ಫಿನ್‌ಬೋಗಡೋಟ್ಟಿರ್

ಐಸ್‌ಲ್ಯಾಂಡ್‌ನ ಮಾಜಿ ಅಧ್ಯಕ್ಷೆ. ಅವರು ವಿಶ್ವದ ಮೊದಲ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಮಹಿಳಾ ರಾಷ್ಟ್ರ ಮುಖ್ಯಸ್ಥೆ. 1980ರಿಂದ 1996ರವರೆಗೆ 16 ವರ್ಷಗಳ ಕಾಲ ದೇಶದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು ಮತ್ತು ಯುನೆಸ್ಕೊ ಗುಡ್‌ವಿಲ್ ರಾಯಭಾರಿಯಾಗಿದ್ದರು.

Tags

womenleadership
share
ಆರ್.ಜೀವಿ
ಆರ್.ಜೀವಿ
Next Story
X