Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಎಸ್‌ಐಟಿ ರಚನೆ: ಉದ್ದೇಶವೇನು?...

ಎಸ್‌ಐಟಿ ರಚನೆ: ಉದ್ದೇಶವೇನು? ಸಾಧಿಸಿದ್ದೇನು?

ಆರ್.ಜೀವಿಆರ್.ಜೀವಿ5 Nov 2025 3:07 PM IST
share
ಎಸ್‌ಐಟಿ ರಚನೆ: ಉದ್ದೇಶವೇನು? ಸಾಧಿಸಿದ್ದೇನು?

ಭಾಗ - 2

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮತ್ತು ಎಂ.ಎಂ. ಕಲಬುರ್ಗಿ ಹತ್ಯೆಯಂಥ ಪ್ರಮುಖ ಪ್ರಕರಣಗಳ ತನಿಖೆಗಾಗಿಯೂ ಎಸ್‌ಐಟಿ ರಚಿಸಲಾಗಿತ್ತು. ಇದು ರಾಜಕೀಯವಾಗಿ ಸೂಕ್ಷ್ಮ ವಿಷಯಗಳನ್ನು ನಿಭಾಯಿಸುವಲ್ಲಿ ಎಸ್‌ಐಟಿ ಮಹತ್ವ ಎಷ್ಟೆಂಬುದನ್ನು ಸೂಚಿಸುತ್ತದೆಯಾದರೂ, ಅಂತಿಮವಾಗಿ ಭ್ರಮನಿರಸನವೇ ಉಳಿಯುವುದು ವಿಪರ್ಯಾಸ.

ಗೌರಿ ಹತ್ಯೆ ಪ್ರಕರಣದಲ್ಲಿ ರಚನೆಯಾದ ಎಸ್‌ಐಟಿ ಅಮೋಲ್ ಕಾಳೆ, ಪರಶುರಾಮ್ ವಾಗ್ಮೋರೆ, ರಾಜೇಶ್ ಡಿ. ಬಂಗೇರಾ, ವಾಸುದೇವ್ ಸೂರ್ಯವಂಶಿ, ಋಷಿಕೇಶ್ ದೇವ್ಡೇಕರ್, ಅಮಿತ್ ರಾಮಚಂದ್ರ ಬುಡ್ಡಿ, ಮನೋಹರ್ ದುಂಡೀಪ ಯಡವೆ, ಗಣೇಶ್ ಮಿಸ್ಕಿನ್ ಸೇರಿ 18 ಆರೋಪಿಗಳನ್ನು ಬಂಧಿಸಿತು. ಆದರೆ ಎಲ್ಲರೂ ಜಾಮೀನಿನ ಮೇಲೆ ಹೊರಗಿದ್ದಾರೆ. ಹತ್ಯೆ ನಡೆದು 8 ವರ್ಷಗಳೇ ಕಳೆದರೂ, ವಿಚಾರಣೆ ಇನ್ನೂ ಪೂರ್ಣಗೊಂಡಿಲ್ಲ.

ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದಲ್ಲಿಯೂ ಎಸ್‌ಐಟಿ ತನಿಖೆ ಕೈಗೊಂಡು ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಪ್ರವೀಣ್ ಚತುರ್, ವಾಸುದೇವ ಸೂರ್ಯವಂಶಿ, ಶರದ್ ಕಲಾಸ್ಕರ್ ಮತ್ತು ಅಮಿತ್ ಬಡ್ಡಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. 2015ರಲ್ಲಿ ಕಲಬುರ್ಗಿ ಅವರ ಕೊಲೆಯಾಗಿತ್ತು.

ದೇಶದಲ್ಲಿ ಎಸ್‌ಐಟಿ ರಚನೆಯಾದ ಪ್ರಮುಖ ಪ್ರಕರಣಗಳನ್ನು ನೋಡುವುದಾದರೆ,

ವನತಾರಾ ಪ್ರಕರಣ

ಗುಜರಾತಿನ ಜಾಮ್‌ನಗರದಲ್ಲಿರುವ ರಿಲಯನ್ಸ್ ಸಮೂಹದ ವನತಾರಾ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದವು. ಇಲ್ಲಿಗೆ ವನ್ಯಜೀವಿಗಳನ್ನು ವಿದೇಶಗಳಿಂದ, ಅದರಲ್ಲೂ ದಕ್ಷಿಣ ಆಫ್ರಿಕಾದಿಂದ ಸಾಗಿಸಿದ ವಿಧಾನದ ಬಗ್ಗೆ ಕೆಲ ಅಂತರ್‌ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ್ದವು. ವನ್ಯಜೀವಿಗಳ ಅಕ್ರಮ ಸ್ವಾಧೀನ ಮತ್ತು ಆರ್ಥಿಕ ಅಕ್ರಮಗಳ ಕುರಿತು ಆರೋಪಗಳಿದ್ದವು. ಆರೋಪಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ಆಗಸ್ಟ್‌ನಲ್ಲಿ ಎಸ್‌ಐಟಿ ರಚಿಸಿತು. ಅದು ವನತಾರಾದಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ವರದಿ ಸಲ್ಲಿಸಿದ ಬಳಿಕ, ಸುಪ್ರೀಂ ಕೋರ್ಟ್ ಕ್ಲೀನ್ ಚಿಟ್ ಕೊಟ್ಟಿದೆ.

ವಿಜಯ್ ಶಾ ಹೇಳಿಕೆ ವಿರುದ್ಧದ ಪ್ರಕರಣ

ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಮಧ್ಯಪ್ರದೇಶ ಸಚಿವ ವಿಜಯ್ ಶಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಪ್ರಕರಣದ ತನಿಖೆಗೆ ಸುಪ್ರೀಂ ಕೋರ್ಟ್ ಮೂವರು ಸದಸ್ಯರ ಎಸ್‌ಐಟಿಗೆ ಆದೇಶಿಸಿತು.

ಕಪ್ಪು ಹಣದ ತನಿಖೆ

ವಿದೇಶಿ ಬ್ಯಾಂಕ್ ಖಾತೆಗಳಲ್ಲಿ ಇಡಲಾದ ಲೆಕ್ಕವಿಲ್ಲದಷ್ಟು ಹಣದ ವಿಷಯವಾಗಿ ತನಿಖೆ ಮಾಡಲು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಯಿತು. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಅದನ್ನು ರಚಿಸಲಾಯಿತು. ಈ ತಂಡ, ಕಪ್ಪುಹಣಕ್ಕೆ ಸಂಬಂಧಿಸಿದ ಬಾಕಿ ಪ್ರಕರಣಗಳು, ನಡೆಯುತ್ತಿರುವ ಮತ್ತು ಹೊಸ ತನಿಖೆಗಳ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿದೆ. ಅಕ್ರಮ ಹಣಕಾಸಿನ ಹರಿವು ಪತ್ತೆಹಚ್ಚಲು ಒಂದು ಕಾರ್ಯವಿಧಾನ ಅಭಿವೃದ್ಧಿಪಡಿಸುವಂತೆ ಎಸ್‌ಐಟಿ ಆರ್‌ಬಿಐ ಅನ್ನು ಕೇಳಿದೆ.

ಗುಜರಾತ್ ಹತ್ಯಾಕಾಂಡ

ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಸೇರಿದಂತೆ 2002ರ ಹತ್ಯಾಕಾಂಡಕ್ಕೆ ಸಂಬಂಧಿಸಿದ 9 ಸೂಕ್ಷ್ಮ ಪ್ರಕರಣಗಳ ತನಿಖೆಗೆ ಸುಪ್ರೀಂ ಕೋರ್ಟ್ ಎಸ್‌ಐಟಿಯನ್ನು ನೇಮಿಸಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ ಎಸ್‌ಐಟಿ, ಗಲಭೆಯ ಹಿಂದಿನ ದೊಡ್ಡ ಪಿತೂರಿಯ ಆರೋಪಗಳು ಮತ್ತು ಆರಂಭಿಕ ಪೊಲೀಸ್ ಪ್ರತಿಕ್ರಿಯೆಯನ್ನು ತನಿಖೆ ಮಾಡಿತು. ತಂಡ ಅಂತಿಮವಾಗಿ ಹಲವಾರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡುವ ವರದಿ ಸಲ್ಲಿಸಿತು. ಗುಜರಾತಿನ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಕ್ಲೀನ್ ಚಿಟ್ ನೀಡಿದ ಎಸ್‌ಐಟಿ ವರದಿಯನ್ನು ನಂತರ ಸುಪ್ರೀಂ ಕೋರ್ಟ್ ಅಂಗೀಕರಿಸಿತು.

ಸಿಖ್ ವಿರೋಧಿ ದಂಗೆಗಳು

1984ರ ಸಿಖ್ ವಿರೋಧಿ ದಂಗೆಗಳಿಗೆ ಸಂಬಂಧಿಸಿದ 186 ಪ್ರಕರಣಗಳನ್ನು ಪುನಃ ತೆರೆಯಲು ಮತ್ತು ಮರು ತನಿಖೆ ಮಾಡಲು 2018ರಲ್ಲಿ ಸುಪ್ರೀಂ ಕೋರ್ಟ್ ಹೊಸ ಎಸ್‌ಐಟಿಯನ್ನು ರಚಿಸಿತು. ಆ ಎಲ್ಲ ಪ್ರಕರಣಗಳಲ್ಲಿ ಹಿಂದಿನ ತಂಡ ಕ್ಲೋಸರ್ ರಿಪೋರ್ಟ್ ಸಲ್ಲಿಸಿತ್ತು. ಹೊಸ ಎಸ್‌ಐಟಿ ತನಿಖೆ ಹಲವಾರು ಆರೋಪಿಗಳಿಗೆ ಶಿಕ್ಷೆ ವಿಧಿಸಲು ಕಾರಣವಾಯಿತು.

ಟಿಟಿಡಿ ತುಪ್ಪ ಕಲಬೆರಕೆ ಪ್ರಕರಣ

ತಿರುಮಲ ತಿರುಪತಿ ದೇವಸ್ಥಾನಗಳಿಗೆ (ಟಿಟಿಡಿ) ಕಲಬೆರಕೆ ತುಪ್ಪ ಪೂರೈಸಲಾಗಿದೆ ಎಂಬ ಆರೋಪಗಳ ಬಗ್ಗೆ ಸಿಬಿಐ ನೇತೃತ್ವದ ಎಸ್‌ಐಟಿ ತನಿಖೆ ನಡೆಸುತ್ತಿದೆ. ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಟಿಟಿಡಿ ಅಧ್ಯಕ್ಷರ ಆಪ್ತ ಸಹಾಯಕನನ್ನು ಬಂಧಿಸಲಾಗಿದೆ.

ಶಬರಿಮಲೆ ಚಿನ್ನದ ದರೋಡೆ

ಕೇರಳದ ಶಬರಿಮಲೆಯಲ್ಲಿ ದೇವಾಲಯದ ಚಿನ್ನದ ಆಭರಣಗಳನ್ನು ಕದ್ದು, ನಕಲಿ ಆಭರಣಗಳೊಂದಿಗೆ ಬದಲಾಯಿಸಿದ ವಿವಾದ ಭುಗಿಲೆದ್ದಿತು. ತನಿಖೆಗಾಗಿ ಕೇರಳ ಹೈಕೋರ್ಟ್ ಆದೇಶಿಸಿದ ಬಳಿಕ ಎಸ್‌ಐಟಿ ರಚನೆ ಯಾಯಿತು. ತಂಡ ಮಾಜಿ ಅಧಿಕಾರಿಯನ್ನು ಬಂಧಿಸಿತು ಮತ್ತು ಕದ್ದ ಚಿನ್ನವನ್ನು ವ್ಯಾಪಾರಿಗಳು ಮತ್ತು ಆಭರಣ ಅಂಗಡಿಗಳಿಂದ ವಶಪಡಿಸಿಕೊಳ್ಳುತ್ತಿದೆ.

ರಾಜ ರಘುವಂಶಿ ಕೊಲೆ ಪ್ರಕರಣ

ಮೇಘಾಲಯ ಎಸ್‌ಐಟಿ ಈ ಪ್ರಕರಣವನ್ನು ನಿರ್ವಹಿಸುತ್ತಿದೆ, ಇದರಲ್ಲಿ ಐದು ಆರೋಪಿಗಳ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ.

ಕರೂರ್ ಕಾಲ್ತುಳಿತ ಪ್ರಕರಣ

ತಮಿಳುನಾಡಿನ ಕರೂರ್‌ನಲ್ಲಿ ನಡೆದ ನಟ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಘಟನೆಯ ತನಿಖೆಯನ್ನು ಹೈಕೋರ್ಟ್ ನೇಮಿಸಿದ ಎಸ್‌ಐಟಿ ಪ್ರಾರಂಭಿಸಿತು. ನಂತರ ಸುಪ್ರೀಂ ಕೋರ್ಟ್ ತನಿಖೆಯನ್ನು ಸಿಬಿಐಗೆ ವರ್ಗಾಯಿಸಿತು.

ಪುರುಲಿಯಾ ಶಸ್ತ್ರಾಸ್ತ್ರ ಡ್ರಾಪ್ ಪ್ರಕರಣ

1995ರಲ್ಲಿ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಿಮಾನದಿಂದ ಬೀಳಿಸಿದ ಘಟನೆಯನ್ನು ಸಿಬಿಐ ಅಡಿಯಲ್ಲಿ ರಚಿಸಲಾದ ಎಸ್‌ಐಟಿ ತನಿಖೆ ಮಾಡಿತು. ಈ ತನಿಖೆ ಹಲವಾರು ವಿದೇಶಿ ಪ್ರಜೆಗಳಿಗೆ ಶಿಕ್ಷೆ ವಿಧಿಸಲು ಕಾರಣವಾಯಿತು.

ರಾಜೀವ್ ಗಾಂಧಿ ಹತ್ಯೆ ಪ್ರಕರಣ

1991ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ತನಿಖೆಗಾಗಿ ಡಿ.ಆರ್. ಕಾರ್ತಿಕೇಯನ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಯಿತು.

2008 ಮುಂಬೈ ಭಯೋತ್ಪಾದಕ ದಾಳಿ

ಮುಂಬೈನಲ್ಲಿ ನಡೆದ ಸಂಘಟಿತ ಸರಣಿ ಬಾಂಬ್ ಸ್ಫೋಟಗಳು ಮತ್ತು ಗುಂಡಿನ ದಾಳಿಗಳನ್ನು ಒಳಗೊಂಡ ದಾಳಿಗಳ ತನಿಖೆಗಾಗಿ ಎಸ್‌ಐಟಿ ರಚಿಸಲಾಯಿತು.

ಇತ್ತೀಚಿನ ವರ್ಷಗಳಲ್ಲಿ, ರಾಜಕೀಯವಾಗಿ ಸೂಕ್ಷ್ಮ ಮತ್ತು ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ನ್ಯಾಯಾಲಯಗಳೇ ನೇರವಾಗಿ ಎಸ್‌ಐಟಿ ರಚಿಸಿ, ಮೇಲ್ವಿಚಾರಣೆ ನಡೆಸುತ್ತಿರುವ ಪ್ರವೃತ್ತಿ ಹೆಚ್ಚಾಗಿದೆ. ಉತ್ತರ ಪ್ರದೇಶದ ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಸ್ಥಳೀಯ ಪೊಲೀಸರ ತನಿಖೆಯ ಬಗ್ಗೆ ಅನುಮಾನಗಳು ವ್ಯಕ್ತವಾದಾಗ, ಸುಪ್ರೀಂ ಕೋರ್ಟ್ ನಿಷ್ಪಕ್ಷ ತನಿಖೆಗಾಗಿ ಹೊಸ ಎಸ್‌ಐಟಿಯನ್ನು ರಚಿಸಿತ್ತು. ಅದೇ ರೀತಿ, ಮಣಿಪುರ ಹಿಂಸಾಚಾರದ ಸಮಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಗಂಭೀರ ಪ್ರಕರಣಗಳ ತನಿಖೆಗಾಗಿ ಸುಪ್ರೀಂ ಕೋರ್ಟ್ ಹಲವು ಎಸ್‌ಐಟಿಗಳನ್ನು ರಚಿಸಲು ಆದೇಶಿಸಿತು.

ಇದಕ್ಕೂ ಮೊದಲು, ಮಧ್ಯಪ್ರದೇಶದ ಕುಖ್ಯಾತ ವ್ಯಾಪಂ ಹಗರಣದ ಆರಂಭಿಕ ತನಿಖೆಯನ್ನು ಎಸ್‌ಐಟಿ ನಿರ್ವಹಿಸಿತ್ತಾದರೂ, ಪ್ರಕರಣದ ವ್ಯಾಪ್ತಿಯನ್ನು ಪರಿಗಣಿಸಿ ನಂತರ ಅದನ್ನು ಸಿಬಿಐಗೆ ವರ್ಗಾಯಿಸಲಾಯಿತು. ಈ ಎಲ್ಲಾ ಪ್ರಕರಣಗಳು, ದೇಶದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಾಗ ಅಥವಾ ಸ್ಥಳೀಯ ತನಿಖಾ ಸಂಸ್ಥೆಗಳು ವಿಫಲವಾದಾಗ ನ್ಯಾಯಾಂಗವು ಎಸ್‌ಐಟಿಯನ್ನು ಹೇಗೆ ಒಂದು ಪರಿಣಾಮಕಾರಿ ಅಸ್ತ್ರವಾಗಿ ಬಳಸುತ್ತದೆ ಎಂಬುದನ್ನು ತೋರಿಸುತ್ತವೆ.

ಭಾರತದಲ್ಲಿ ಎಸ್‌ಐಟಿ ಯಶಸ್ಸು ಕಂಡದ್ದೂ ಇದೆ, ವಿಫಲವಾದದ್ದೂ ಇದೆ. ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ. ಅಕ್ರಮ ಹಣ ಮತ್ತು ಕೆಲವು ಪ್ರಮುಖ ಕೊಲೆಗಳ ತನಿಖೆಯಲ್ಲಿ ಯಶಸ್ವಿಯಾಗಿವೆ. ಆದರೆ ಕೆಲವು ಸಲ ಎಸ್‌ಐಟಿ ರಾಜಕೀಯ ಒತ್ತಡ ಮತ್ತು ಇನ್ನೂ ಕೆಲವು ಸಲ ನಿರ್ಣಾಯಕ ತೀರ್ಮಾನಗಳ ಕೊರತೆಯಿಂದಾಗಿ ಟೀಕೆಗಳಿಗೆ ತುತ್ತಾಗುವುದನ್ನು ಕಾಣಬಹುದು. ಎಸ್‌ಐಟಿ ಅನೇಕ ಸಲ ತನ್ನ ಕೆಲಸದ ವೇಗ ಮತ್ತು ದಕ್ಷತೆಗಾಗಿ ಮೆಚ್ಚುಗೆಗೆ ಪಾತ್ರವಾಗುವುದಿದೆ. ಅದರ ಸದಸ್ಯರು ಸಾಕ್ಷ್ಯಗಳನ್ನು ಸಂಗ್ರಹಿಸಲು ಮತ್ತು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲು ಸಾಕಷ್ಟು ಕೆಲಸ ಮಾಡುತ್ತಾರೆ ಎಂಬುದನ್ನು ಉಲ್ಲೇಖಿಸಿ ಕೊಂಡಾಡಿರುವ ಉದಾಹರಣೆಗಳಿವೆ. ಆದರೂ, ಕೆಲವು ಸಲ ಎಸ್‌ಐಟಿ ರಾಜಕೀಯ ಒತ್ತಡಗಳಿಂದಾಗಿ ತೀರ್ಮಾನಗಳನ್ನು ತಲುಪಲು ವಿಫಲವಾಗಿರುವ ಬಗ್ಗೆಯೂ ಟೀಕೆಗಳು ಬರುತ್ತಲೇ ಇರುತ್ತವೆ. ಮುಕ್ತ ಮತ್ತು ನ್ಯಾಯಯುತ ತನಿಖೆ ನಡೆಸುವ ತನ್ನ ಸಾಮರ್ಥ್ಯವನ್ನು ಅದು ಮರೆಯುವುದಿದೆ ಎಂಬುದಕ್ಕೆ ಇದು ಸಾಕ್ಷಿ. ಸರಕಾರದಿಂದ ಎಸ್‌ಐಟಿ ರಚನೆಯಾದಾಗ, ಅದರ ಹಿಂದೆ ರಾಜಕೀಯ ಅಂಶವೂ ಕೆಲಸ ಮಾಡುತ್ತದೆ. ಇದರಿಂದಾಗಿ, ಕೆಲವು ತನಿಖೆಗಳಿಗೆ ಅಗತ್ಯವಾದ ನಿಜವಾದ ಸ್ವಾತಂತ್ರ್ಯ ಇಲ್ಲದಂತಾಗುವ ಸಾಧ್ಯತೆ ಹೆಚ್ಚು. ಇನ್ನೂ ಹಲವು ಸಂದರ್ಭಗಳಲ್ಲಿ ಎಸ್‌ಐಟಿ ಯಾವುದೇ ಪರಿಣಾಮ ಬೀರದೆ ಹೋಗಿರುವುದರ ಬಗ್ಗೆಯೂ ವರದಿಗಳು ಹೇಳುತ್ತವೆ. ಎಸ್‌ಐಟಿಯನ್ನು ಕೆಲವೊಮ್ಮೆ ರಾಜಕೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ, ರಾಜಕೀಯ ವಿರೋಧಿಗಳನ್ನು ಗುರಿಯಾಗಿರಿಸಿಕೊಳ್ಳಲಾಗುತ್ತದೆ ಎಂಬ ಕಳವಳವಿದೆ. ಪಕ್ಷಪಾತ, ಅಧಿಕಾರ ವ್ಯಾಪ್ತಿಯನ್ನು ಮೀರುವುದು, ಕಿರುಕುಳ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯಂಥ ಆರೋಪಗಳಿಗೂ ಅನೇಕ ಸಲ ಎಸ್‌ಐಟಿ ತುತ್ತಾಗಿರುವುದಿದೆ. ಸರಕಾರಗಳು ರಾಜಕೀಯ ಪ್ರತಿಸ್ಪರ್ಧಿಗಳನ್ನು ತನಿಖೆ ಮಾಡಲು ಮತ್ತು ಕಿರುಕುಳ ನೀಡಲು ಎಸ್‌ಐಟಿ ರಚಿಸಬಹುದು, ರಾಜಕೀಯ ಒತ್ತಡ ಹೇರಬಹುದು ಎಂಬ ಅನುಮಾನಗಳೂ ಇವೆ.

ಗಂಭೀರ ಅಪರಾಧಗಳಲ್ಲಿ ಭಾಗಿಯಾಗಿರುವ ಪ್ರಬಲ ವ್ಯಕ್ತಿಗಳನ್ನು ರಕ್ಷಿಸಲು ಸರಕಾರಗಳು ಎಸ್‌ಐಟಿ ತನಿಖೆಗಳಲ್ಲಿ ಹಸ್ತಕ್ಷೇಪ ಮಾಡಬಹುದು ಎಂಬುದು ಮತ್ತೊಂದು ಅನುಮಾನ. ಕೆಲವು ಉನ್ನತ ಮಟ್ಟದ ಪ್ರಕರಣಗಳಲ್ಲಿ, ಎಸ್‌ಐಟಿ ಸಾಕ್ಷ್ಯಗಳನ್ನು ಸರಿಯಾಗಿ ಸಂಗ್ರಹಿಸಲು ವಿಫಲವಾಗಿರುವ ಬಗ್ಗೆ ಆರೋಪಗಳಿವೆ. ಇದು ಖುಲಾಸೆಗೆ ಕಾರಣವಾಗುತ್ತದೆ ಮತ್ತು ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕುಗ್ಗಿಸುತ್ತದೆ. ಉದಾಹರಣೆಗೆ, ಗುಜರಾತ್ ಗಲಭೆ ಪ್ರಕರಣದಲ್ಲಿ ಎಸ್‌ಐಟಿ ಪ್ರಮುಖ ರಾಜಕೀಯ ವ್ಯಕ್ತಿಗಳಿಗೆ ಕ್ಲೀನ್ ಚಿಟ್ ನೀಡಿದಾಗ, ಪಕ್ಷಪಾತ ಮತ್ತು ಮೇಲ್ನೋಟದ ತನಿಖೆಯ ಆರೋಪ ಕೇಳಿಬಂದಿತ್ತು.

ಎಸ್‌ಐಟಿ ಸೇರಿದಂತೆ ತನಿಖಾ ಸಂಸ್ಥೆಗಳು ಕೆಲವೊಮ್ಮೆ ನ್ಯಾಯಯುತ ವಿಚಾರಣೆಗಳನ್ನು ತಪ್ಪಿಸಲು ವಿಳಂಬ ತಂತ್ರಗಳನ್ನು ಬಳಸುತ್ತಿವೆ ಎಂಬ ಆರೋಪವೂ ಇದೆ. ಅರ್ಹತೆ ಕಡಿಮೆ ಇರುವ ಅಥವಾ ಅನನುಭವಿ ಅಧಿಕಾರಿಗಳನ್ನು ಎಸ್‌ಐಟಿ ಒಳಗೊಂಡಿದ್ದರೆ ತನಿಖೆಯೇ ದಿಕ್ಕೆಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತದೆ.

ಮತ್ತೂ ಒಂದು ಆಯಾಮವನ್ನು ಇಲ್ಲಿ ಗಮನಿಸಬೇಕು. ಎಸ್‌ಐಟಿ ರಚನೆಯನ್ನು ಎಲ್ಲಾ ಪ್ರಕರಣಗಳಿಗೂ ಮಾಡುವುದು ಒಂದು ಸಾಮಾನ್ಯ ರೂಢಿಯಾಗಿಬಿಟ್ಟಾಗ, ಅದು ರಾಜಕೀಯ ಆಟವಾಗುವುದರ ಜೊತೆಗೇ ಮತ್ತೊಂದು ತನಿಖಾ ಸಂಸ್ಥೆಯ ನೈತಿಕ ಸ್ಥೈರ್ಯವನ್ನೂ ಕಸಿಯುತ್ತದೆಯೇ ಎಂಬ ಪ್ರಶ್ನೆಯಿದೆ. ಕರ್ನಾಟಕದ ಉದಾಹರಣೆಯನ್ನೇ ನೋಡುವುದಾದರೆ, ಆಳಂದ ಮತಗಳ್ಳತನದ ವಿಚಾರದಲ್ಲಿ ಎಸ್‌ಐಟಿ ರಚನೆಯಾದ ಹಿನ್ನೆಲೆಯಲ್ಲಿನ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಈ ಅಂಶದ ಬಗ್ಗೆ ಗಮನ ಸೆಳೆಯುತ್ತದೆ. ಆಳಂದ ಪ್ರಕರಣವನ್ನು ಎಸ್‌ಐಟಿಗೆ ವಹಿಸುವ ಮೊದಲು ಸಿಐಡಿ ತನಿಖೆ ನಡೆಸುತ್ತಿತ್ತು. ಸಂಕೀರ್ಣ, ಸೂಕ್ಷ್ಮ ಮತ್ತು ರಾಜಕೀಯವಾಗಿ ಮಹತ್ವದ ಪ್ರಕರಣಗಳನ್ನು ತನಿಖೆ ಮಾಡಲು ಎಸ್‌ಐಟಿ ರಚನೆ ಹೊಸದಲ್ಲ. ಆದರೂ, ಅಂತಹ ಪ್ರತಿಯೊಂದು ಪ್ರಕರಣವನ್ನು ತನಿಖೆ ಮಾಡಲು ಎಸ್‌ಐಟಿ ರಚಿಸುವ ಪ್ರವೃತ್ತಿ ಹಿಂದಿನ ಸಿಐಡಿ ತನಿಖೆಯ ಗಂಭೀರತೆ ಮತ್ತು ಪಾವಿತ್ರ್ಯಕ್ಕೆ ಹಿನ್ನಡೆ ಉಂಟುಮಾಡಿದೆ ಎಂಬ ಮಾತುಗಳಿವೆ. 90ರ ದಶಕದಲ್ಲಿ ಕೆಲವೇ ಆಯ್ದ ಪ್ರಕರಣಗಳಿಗೆ ಎಸ್‌ಐಟಿ ರಚನೆ ಮಾಡಲಾಗುತ್ತಿತ್ತು. ತನಿಖೆ ಪೂರ್ಣಗೊಳ್ಳುವವರೆಗೆ ನಿಯಮಿತ ಕಾನೂನು ಮತ್ತು ಸುವ್ಯವಸ್ಥೆಯ ಕರ್ತವ್ಯಗಳಿಂದ ದೂರವಿಟ್ಟು ವಿಶೇಷ ತನಿಖೆಯ ಕಾರ್ಯವನ್ನು ಅವರಿಗೆ ವಹಿಸುವುದು ಇದರ ಉದ್ದೇಶವಾಗಿತ್ತು. ಆದರೆ ಎಲ್ಲದಕ್ಕೂ ಎಸ್‌ಐಟಿ ರಚನೆ ಇತ್ತೀಚೆಗೆ ಸಾಮಾನ್ಯವಾಗಿದೆ. ಸರಕಾರ ಸೂಕ್ಷ್ಮ ಅಥವಾ ರಾಜಕೀಯ ಲಾಭವನ್ನು ಹೊಂದಿರುವ ಪ್ರತಿಯೊಂದು ಪ್ರಕರಣಕ್ಕೂ ಎಸ್‌ಐಟಿ ರಚಿಸುವುದು ಸರಕಾರದ ಸಂಸ್ಥೆಯ ಮೇಲಿನ ನಂಬಿಕೆ ಹೊರಟುಹೋಗಲು ಕಾರಣವಾಗುತ್ತದೆ ಎಂಬುದು ಇಲಾಖೆಯಲ್ಲೇ ದುಡಿದ ಕೆಲವರ ಅಭಿಪ್ರಾಯ ಎನ್ನುವುದನ್ನು ಆ ವರದಿ ಉಲ್ಲೇಖಿಸಿದೆ.

share
ಆರ್.ಜೀವಿ
ಆರ್.ಜೀವಿ
Next Story
X