Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಸಿನೆಮಾದಿಂದ ರಾಜಕೀಯಕ್ಕೆ:...

ಸಿನೆಮಾದಿಂದ ರಾಜಕೀಯಕ್ಕೆ: ಗೆದ್ದವರೆಷ್ಟು? ಬಿದ್ದವರೆಷ್ಟು?

ವಾರ್ತಾಭಾರತಿವಾರ್ತಾಭಾರತಿ22 Jan 2026 11:10 AM IST
share
ಸಿನೆಮಾದಿಂದ ರಾಜಕೀಯಕ್ಕೆ: ಗೆದ್ದವರೆಷ್ಟು? ಬಿದ್ದವರೆಷ್ಟು?

ಭಾಗ - 2

ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ರಾಜಕಾರಣಕ್ಕೂ ಚಿತ್ರರಂಗಕ್ಕೂ ನಂಟು ಬೆಸೆದುಕೊಂಡೇ ಬರುತ್ತಿದೆ. ಕನ್ನಡ ಚಿತ್ರರಂಗದಿಂದ ಅನೇಕ ನಟ ನಟಿಯರು ರಾಜಕಾರಣಕ್ಕೆ ಬಂದಿದ್ದಾರೆ.

ಅನಂತ್ ನಾಗ್

ಕರ್ನಾಟಕದ ರಾಜಕಾರಣದಲ್ಲಿ ಚಿತ್ರರಂಗದವರು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯತೊಡಗಿದ್ದು ನಟ ಅನಂತ್ ನಾಗ್ ಅವರ ರಾಜಕೀಯ ಪ್ರವೇಶದೊಂದಿಗೆ. ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲರ ರಾಜಕೀಯ ಒಡನಾಡಿಯಾಗಿದ್ದ ಅವರು, 1983ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾಗ ಸಾಹಿತಿ ಶಿವರಾಮ ಕಾರಂತರೂ ಕಣದಲ್ಲಿದ್ದರು. ಇಬ್ಬರೂ ಸೋತರೆಂಬುದು ಬೇರೆ. ಬಳಿಕ 1994ರಲ್ಲಿ ವಿಧಾನಸಭೆ ಪ್ರವೇಶಿಸಿ, ಪಟೇಲ್ ಸಂಪುಟದಲ್ಲಿ ಸಚಿವ ಸ್ಥಾನ ಪಡೆದರು. 2004ರಲ್ಲಿ ಮತ್ತೆ ಚುನಾವಣೆಗೆ ನಿಂತರಾದರೂ, ಅಲ್ಲಿನ ಸೋಲು ಅವರನ್ನು ಸಕ್ರಿಯ ರಾಜಕಾರಣದಿಂದ ಹಿಂದಕ್ಕೆ ಸರಿಸಿತು.

ಅಂಬರೀಷ್

ಸಕ್ರಿಯ ರಾಜಕಾರಣದಲ್ಲಿ ಅನಂತ್ ನಾಗ್ ಅವರಿಗಿಂತ ಹೆಚ್ಚು ಮಿಂಚಿದವರು ರೆಬೆಲ್ ಸ್ಟಾರ್ ಅಂಬರೀಷ್. ಅವರೂ ಜನತಾ ಪರಿವಾರದಿಂದ ರಾಜಕಾರಣ ಶುರುಮಾಡಿ ಬಳಿಕ ಕಾಂಗ್ರೆಸ್ ಸೇರಿ, ಮತ್ತೆ ಬಿಟ್ಟು, ಮತ್ತೆ ಸೇರಿ, ಕಡೆಗೆ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡಿದ್ದರು. ಮೂರು ಬಾರಿ ಸಂಸದರಾಗಿ ಮಂಡ್ಯದ ಜನತೆಯ ಅಭಿಮಾನ, ಅಸಮಾಧಾನ ಎರಡಕ್ಕೂ ಪಾತ್ರರಾಗಿದ್ದರು. ಕೇಂದ್ರದಲ್ಲೂ, ರಾಜ್ಯದಲ್ಲೂ ಮಂತ್ರಿಯಾಗಿದ್ದರು.

ರಮ್ಯಾ

ಕನ್ನಡ ನಟಿಯರಲ್ಲಿ ಮಂಡ್ಯ ಕ್ಷೇತ್ರದಿಂದ ಸಂಸದೆಯಾಗಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದವರು ನಟಿ ರಮ್ಯಾ. ರಮ್ಯಾ 2012ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿ, 2013ರಲ್ಲಿ ಮಂಡ್ಯ ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದರು. ಆನಂತರದ ವರ್ಷಗಳಲ್ಲಿ ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಮುಖ್ಯಸ್ಥೆಯಾಗಿದ್ದರು. ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆಯಲ್ಲಿಯೂ ಕಾಣಿಸಿಕೊಂಡಿದ್ದರು.

ಸುಮಲತಾ

ಅಂಬರೀಷ್ ನಿಧನದ ಬಳಿಕ ಅವರ ಪತ್ನಿ ಸುಮಲತಾ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದದ್ದು ಕೂಡ ದೇಶದ ಗಮನ ಸೆಳೆಯಿತು. ಅವರೀಗ ರಾಜ್ಯ ರಾಜಕಾರಣಕ್ಕೆ ಬರುವ ಇಂಗಿತ ವ್ಯಕ್ತಪಡಿಸಿರುವುದಾಗಿ ವರದಿಗಳಿವೆ.

ಜಗ್ಗೇಶ್

ಏಳುಬೀಳುಗಳೇನೇ ಇದ್ದರೂ, ಅಂಬರೀಷ್ ನಂತರದಲ್ಲಿ ರಾಜಕಾರಣದಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಮತ್ತೊಬ್ಬ ನಟ ಜಗ್ಗೇಶ್. ಕಾಂಗ್ರೆಸ್‌ನಿಂದ ಶಾಸಕರಾಗುವುದರೊಂದಿಗೆ ಶುರುವಾದ ಜಗ್ಗೇಶ್ ರಾಜಕಾರಣ ಬಿಜೆಪಿಯಲ್ಲಿ ಮುಂದುವರಿದಿದೆ. ಬಿಜೆಪಿಯಿಂದ ಪರಿಷತ್‌ಗೆ ಮತ್ತು ಈಗ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಒಂದು ಬಾರಿ ತುರುವೇಕೆರೆಯಿಂದ ಗೆದ್ದು ಶಾಸಕರಾಗಿದ್ದ ಜಗ್ಗೇಶ್, 2019ರಲ್ಲಿ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಕಂಡಿದ್ದರು.

ಮುಖ್ಯಮಂತ್ರಿ ಚಂದ್ರು

ಮುಖ್ಯಮಂತ್ರಿ ಚಂದ್ರು 1985ರಲ್ಲಿ ರಾಜಕೀಯಕ್ಕೆ ಬಂದು, ಗೌರಿಬಿದನೂರು ಕ್ಷೇತ್ರದಿಂದ ಶಾಸಕರಾದರು. ಬಳಿಕ ಬಿಜೆಪಿ ಸೇರಿ ಎರಡು ಅವಧಿಗೆ ಪರಿಷತ್ ಸದಸ್ಯರಾದರು. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಅವರು ಸುಮಾರು 8 ವರ್ಷ ಹೆಸರಿಗಷ್ಟೇ ರಾಜಕಾರಣಿಯಾಗಿ ಉಳಿದು, ಸದ್ಯ ಆಮ್ ಆದ್ಮಿ ಪಕ್ಷದಲ್ಲಿದ್ದಾರೆ.

ಬಿ.ಸಿ. ಪಾಟೀಲ್

ಪೊಲೀಸ್ ಅಧಿಕಾರಿಯಾಗಿದ್ದವರು ಸಿನೆಮಾ ರಂಗದಲ್ಲಿ ಹೆಸರು ಮಾಡಿ ಜೆಡಿಎಸ್ ಮೂಲಕ ರಾಜಕೀಯಕ್ಕೆ ಬಂದರು. 2004ರಲ್ಲಿ ಹಿರೆಕೆರೂರು ಶಾಸಕರಾಗಿ, 2008ರಲ್ಲಿ ಕಾಂಗ್ರೆಸ್‌ನಿಂದ ಗೆದ್ದರು. 2013ರಲ್ಲಿ ಸೋತು, 2018ರಲ್ಲಿ ಮತ್ತೆ ಗೆದ್ದರು. ಮಂತ್ರಿ ಹುದ್ದೆ ಸಿಗಲಿಲ್ಲವೆಂಬ ಸಿಟ್ಟಿನಿಂದ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಹೋಗಿ ಗೆದ್ದು ಮಂತ್ರಿಯಾದರು.

ಸಿ.ಪಿ. ಯೋಗೇಶ್ವರ್

ಸಿನಿ ತೆರೆಯ ಮೇಲೆ ತೀರಾ ಗಮನ ಸೆಳೆಯದಿದ್ದರೂ ರಾಜಕಾರಣದಲ್ಲಿನ ಆಟದಲ್ಲಿ ತುಸು ಜಾಸ್ತಿಯೇ ಪಳಗಿದಂತಿರುವವರು ಯೋಗೇಶ್ವರ್. ಚನ್ನಪಟ್ಟಣ ಕ್ಷೇತ್ರದಲ್ಲಿನ ಸತತ ಗೆಲುವುಗಳು ಅವರ ಮಹತ್ವವನ್ನು ಹೆಚ್ಚಿಸಿದ್ದವು. ಕಾಂಗ್ರೆಸ್‌ನಿಂದ ರಾಜಕೀಯ ಶುರುಮಾಡಿ, ಬಳಿಕ ಬಿಜೆಪಿ, ಸಮಾಜವಾದಿ ಪಕ್ಷ ಮತ್ತೆ ಕಾಂಗ್ರೆಸ್ ಮತ್ತೆ ಬಿಜೆಪಿ ಹೀಗೆ ಸುತ್ತುಹೊಡೆದು, ಸದ್ಯ ಕಾಂಗ್ರೆಸ್‌ನಲ್ಲಿ ಶಾಸಕರಾಗಿದ್ದಾರೆ. ಬಿಜೆಪಿಯಲ್ಲಿದ್ದಾಗ ಹೆಚ್ಚು ಸಕ್ರಿಯರಾಗಿದ್ದ ಅವರು ಈಗ ಸದ್ದಿಲ್ಲದಂತೆ ಇದ್ದಾರೆ. ಮತ್ತೆ ಕಾಂಗ್ರೆಸ್ ಬಿಡುವ ಯೋಚನೆಯಲ್ಲಿದ್ದಾರೆ ಎಂಬ ಸುದ್ದಿಗಳೂ ಆಗೀಗ ಹರಿದಾಡುತ್ತಿವೆ.

ಕುಮಾರ ಬಂಗಾರಪ್ಪ

ಬಂಗಾರಪ್ಪನವರ ಪುತ್ರ ಕುಮಾರ ಬಂಗಾರಪ್ಪ ಕೂಡ ಚಿತ್ರರಂಗದಲ್ಲಿ ಕಂಡಿದ್ದಕ್ಕಿಂತ ಹೆಚ್ಚು ಯಶಸ್ಸನ್ನು ರಾಜಕೀಯದಲ್ಲಿಯೇ ಕಂಡವರು. ಬಂಗಾರಪ್ಪ ಲೋಕಸಭೆಗೆ ಆಯ್ಕೆಯಾದಾಗ ತೆರವಾದ ಸೊರಬ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲುವುದರೊಂದಿಗೆ ಅತಿ ಕಿರಿಯ ಶಾಸಕನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಸತತ ಮೂರು ಬಾರಿ ಗೆದ್ದು, ಸಚಿವರೂ ಆಗಿ, ಕಾಂಗ್ರೆಸ್‌ನಿಂದ ಬಿಜೆಪಿ, ಸಮಾಜವಾದಿ ಪಕ್ಷ ಮತ್ತೆ ಕಾಂಗ್ರೆಸ್ ಹೀಗೆ ಸುತ್ತಿ ಈಗ ಬಿಜೆಪಿಯಲ್ಲಿದ್ದಾರೆ.

ಶಶಿಕುಮಾರ್

1999ರಲ್ಲಿ ಜೆಡಿಯುನಿಂದ ಚಿತ್ರದುರ್ಗ ಸಂಸದರಾಗಿ, ಬಳಿಕ ಜೆಡಿಎಸ್ ಸೇರಿ, ನಂತರ ಕಾಂಗ್ರೆಸ್‌ಗೆ ಜಿಗಿದು, 2008ರಲ್ಲಿ ಚಳ್ಳಕೆರೆ ವಿಧಾನಸಭೆ ಚುನಾವಣೆಯಲ್ಲಿ ಸೋತರು. ಸದ್ಯ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ.

ಉಪೇಂದ್ರ

ಇವರೆಲ್ಲರ ಮಧ್ಯೆ, ನೇರವಾಗಿ ರಾಜಕೀಯ ಪ್ರವೇಶ ಮಾಡದೇ ಇದ್ದರೂ ಪ್ರಜಾಕೀಯ ರಾಜಕೀಯ ವೇದಿಕೆ ಮೂಲಕ ರಾಜಕಾರಣದಲ್ಲಿ ಸಕ್ರಿಯರಾಗಿರುವವರು ಉಪೇಂದ್ರ. ಅವರ ಸಿನೆಮಾಗಳಂತೆಯೇ ಅವರ ರಾಜಕೀಯ ನಿಲುವು ಮತ್ತು ಮಾತುಗಳೂ ತುಸು ಡಿಫರೆಂಟ್, ಮತ್ತೊಂದಿಷ್ಟು ಗೊಂದಲಗಳ ಕಲಸುಮೇಲೋಗರದ ಹಾಗಿವೆ. ಆದರೂ ತಮ್ಮದೇ ಆದ ಭಿನ್ನ ಹಾದಿಯಿಂದಾಗಿ ರಾಜಕೀಯದಲ್ಲಿ ಸುದ್ದಿಯಲ್ಲಿರುವುದು ಸುಳ್ಳಲ್ಲ.

ನಟಿ ಉಮಾಶ್ರೀ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಸಿದ್ದರಾಮಯ್ಯ ಸರಕಾರದಲ್ಲಿ ಮಂತ್ರಿ ಪದವಿ ನಿಭಾಯಿಸಿದರು. ಹಾಗೆಯೇ ಜಯಮಾಲಾ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದು, ಈ ಹಿಂದೆ ಪರಿಷತ್ ಸದಸ್ಯೆಯಾಗಿದ್ದರು, ಸಮ್ಮಿಶ್ರ ಸರಕಾರದಲ್ಲಿ ಸಚಿವೆಯಾಗಿದ್ದರು. ನಟಿಯರಾದ ತಾರಾ ಅನುರಾಧಾ, ಶ್ರುತಿ, ಮಾಳವಿಕಾ ಅವಿನಾಶ್, ಭಾವನಾ ಕೂಡ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ನಟಿ ಪೂಜಾ ಗಾಂಧಿ ಬಿಆರ್‌ಎಸ್ ಕಾಂಗ್ರೆಸ್‌ನಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತ ಬಳಿಕ ಅಷ್ಟು ಸುದ್ದಿಯಲ್ಲಿಲ್ಲ.

ಇನ್ನು, ರಾಜಕೀಯ ಹಿನ್ನೆಲೆಯಿದ್ದೂ, ರಾಜಕಾರಣದಲ್ಲಿ ಮಿಂಚಲಾಗದವರಲ್ಲಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಇದ್ದಾರೆ. ಅವರು ಲೋಕಸಭೆ ಚುನಾವಣೆಯಲ್ಲಾಗಲೀ ವಿಧಾನಸಭೆ ಚುನಾವಣೆಯಲ್ಲಾಗಲೀ ಗೆಲ್ಲಲು ಸಾಧ್ಯವಾಗಿಲ್ಲ. ಸಿನೆಮಾ ಮಾತ್ರವಲ್ಲದೆ ಹೋರಾಟದ ಮೂಲಕ ಗಮನ ಸೆಳೆದಿರುವ ಪ್ರಕಾಶ್ ರಾಜ್ ಕೂಡ ಚುನಾವಣಾ ರಾಜಕಾರಣದಲ್ಲಿ ಯಶಸ್ಸು ಕಾಣಲು ಆಗಿಲ್ಲ. ಹಾಸ್ಯನಟ ಸಾಧುಕೋಕಿಲ ಕಾಂಗ್ರೆಸ್ ಸೇರಿದ್ದಾರೆ. ನಿರ್ಮಾಪಕ ಮುನಿರತ್ನ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಶಾಸಕರಾಗಿ, ಸಚಿವರಾಗಿ ರಾಜಕಾರಣದಲ್ಲಿ ಸುದ್ದಿಯಲ್ಲಿದ್ದಾರೆ.

ಇನ್ನು, ಬಾಲಿವುಡ್ ಮಂದಿ ಕೂಡ ರಾಜಕೀಯದಲ್ಲಿ ಛಾಪು ಮೂಡಿಸಿದ್ಧಾರೆ. ಹಿಂದಿ ಸಿನೆಮಾದ ಹಲವಾರು ನಟ, ನಟಿಯರು ರಾಜಕೀಯ ಪ್ರವೇಶಿಸಿದ್ದಾರೆ. ರಾಜ್ ಬಬ್ಬರ್, ಜಯಪ್ರದಾ ಹೊರತುಪಡಿಸಿದರೆ ಮಿಕ್ಕಂತೆ ಯಾರೂ ಸುದೀರ್ಘ ಸಮಯ ರಾಜಕೀಯದಲ್ಲಿರಲಿಲ್ಲ. ನರ್ಗಿಸ್ ದತ್, ದಿಲೀಪ್ ಕುಮಾರ್, ಅಮಿತಾಭ್ ಬಚ್ಚನ್, ದೇವ್ ಆನಂದ್, ಧರ್ಮೇಂದ್ರ, ರಾಜೇಶ್ ಖನ್ನಾ, ಶತ್ರುಘ್ನ ಸಿನ್ಹಾ, ಸುನೀಲ್ ದತ್, ಸಂಜಯ್ ದತ್, ಗೋವಿಂದ, ಮಿಥುನ್ ಚಕ್ರವರ್ತಿ, ವಿನೋದ್ ಖನ್ನಾ, ಅನುಪಮ್ ಖೇರ್, ಕಿರಣ್ ಖೇರ್, ಪರೇಶ್ ರಾವಲ್, ಊರ್ಮಿಳಾ ಮಾತೋಂಡ್ಕರ್, ದಾರಾ ಸಿಂಗ್, ವೈಜಯಂತಿ ಮಾಲಾ ಬಾಲಿ, ಶಬಾನಾ ಆಝ್ಮಿ ಮುಂತಾದವರು ರಾಜಕೀಯದಲ್ಲಿ ಕೆಲ ಕಾಲ ಕಾಣಿಸಿಕೊಂಡು ಮರೆಯಾದರು. ಜಯಾ ಬಚ್ಚನ್, ಹೇಮಾ ಮಾಲಿನಿ, ಸ್ಮತಿ ಇರಾನಿ, ಕಂಗನಾ ರಣಾವತ್ ಅಂಥವರು ರಾಜಕೀಯದಲ್ಲಿ ಸದ್ದು ಮಾಡುತ್ತಿದ್ದಾರೆ.

ಮಲಯಾಳಂ ನಟ ಸುರೇಶ್ ಗೋಪಿ ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಮಡಿಲಿಗೆ ಹಾಕಿದವರು. ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆದರೂ, ರಾಜಕೀಯಕ್ಕಿಂತ ಚಿತ್ರರಂಗದ ಕಡೆಗೆ ಸೆಳೆತವೆಂದು ಆಗೀಗ ಅಲವತ್ತುಕೊಳ್ಳುತ್ತಲೇ ಇರುತ್ತಾರೆ. ಕೇರಳದಲ್ಲಿ ಹಿರಿಯ ನಟ ದಿವಂಗತ ಇನ್ನೋಸೆಂಟ್ ಎಡಪಕ್ಷಗಳ ಬೆಂಬಲದೊಂದಿಗೆ ಸಂಸದರಾಗಿ ಸೇವೆ ಸಲ್ಲಿಸಿದ್ದರೆ, ನಟ ಮುಕೇಶ್ ಪ್ರಸ್ತುತ ಶಾಸಕರಾಗಿದ್ದಾರೆ ಮತ್ತು ಕೆ.ಬಿ. ಗಣೇಶ್ ಕುಮಾರ್ ಕೇರಳ ಸರಕಾರದಲ್ಲಿ ಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

Tags

cinemapolitics
share
ವಾರ್ತಾಭಾರತಿ
ವಾರ್ತಾಭಾರತಿ
Next Story
X