Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಆರೆಸ್ಸೆಸ್ ಗೆ ಕಡಿವಾಣ ಹಾಕುವುದು...

ಆರೆಸ್ಸೆಸ್ ಗೆ ಕಡಿವಾಣ ಹಾಕುವುದು ಅಸಾಧ್ಯವೇ?

ಆರ್.ಜೀವಿಆರ್.ಜೀವಿ22 Oct 2025 4:09 PM IST
share
ಆರೆಸ್ಸೆಸ್ ಗೆ ಕಡಿವಾಣ ಹಾಕುವುದು ಅಸಾಧ್ಯವೇ?
ಆರೆಸ್ಸೆಸ್ ಗೆ ಕಡಿವಾಣ ಹಾಕುವುದು ಅಸಾಧ್ಯವೇ?

ಭಾಗ - 2

ಸಂವಿಧಾನದ ಚೌಕಟ್ಟಿನಲ್ಲಿ ಈ ಸಂಘರ್ಷಕ್ಕೆ ಎರಡು ಬಲವಾದ ಆಯಾಮಗಳಿವೆ. ಒಂದೆಡೆ, ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂವಿಧಾನದ 19(1)(ಎ) (ವಾಕ್ ಸ್ವಾತಂತ್ರ್ಯ) ಮತ್ತು 19(1)(ಬಿ) (ಶಾಂತಿಯುತವಾಗಿ ಸಭೆ ಸೇರುವ ಹಕ್ಕು) ಅಡಿಯಲ್ಲಿ ತಮ್ಮ ಚಟುವಟಿಕೆಗಳು ಮೂಲಭೂತ ಹಕ್ಕುಗಳಾಗಿವೆ ಎಂದು ವಾದಿಸುತ್ತದೆ. ತಮ್ಮನ್ನು ಮಾತ್ರ ಗುರಿಯಾಗಿಸಿ ನಿರ್ಬಂಧ ಹೇರುವುದು ಅನುಚ್ಛೇದ 14ರ ಅಡಿಯಲ್ಲಿನ ಸಮಾನತೆಯ ಹಕ್ಕಿನ ಉಲ್ಲಂಘನೆ ಎಂಬುದು ಅದರ ಪ್ರತಿಪಾದನೆ. ಮತ್ತೊಂದೆಡೆ, ಸರಕಾರಗಳು ಇದೇ ಸಂವಿಧಾನದ 19(2) ಮತ್ತು 19(3)ನೇ ವಿಧಿಗಳನ್ನು ಮುಂದಿಡುತ್ತವೆ. ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ‘ಕೋಮು ಸೌಹಾರ್ದ’ದ ಹಿತದೃಷ್ಟಿಯಿಂದ ಈ ಹಕ್ಕುಗಳ ಮೇಲೆ ‘ಸಮಂಜಸವಾದ ನಿರ್ಬಂಧಗಳನ್ನು’ ವಿಧಿಸಲು ರಾಜ್ಯಕ್ಕೆ ಅಧಿಕಾರವಿದೆ ಎಂದು ಸರಕಾರಗಳು ವಾದಿಸುತ್ತವೆ. ಜೊತೆಗೆ, ಸರಕಾರಿ ಸ್ಥಳಗಳಲ್ಲಿ ಒಂದು ನಿರ್ದಿಷ್ಟ ಸಿದ್ಧಾಂತದ ಪ್ರಚಾರವು ಸಂವಿಧಾನದ ಮೂಲ ಆಶಯವಾದ ಜಾತ್ಯತೀತತೆಗೆ ಧಕ್ಕೆ ತರುತ್ತದೆ ಎಂಬುದು ಅವುಗಳ ನಿಲುವಾಗಿದೆ.

ಏನಿದು ತಮಿಳುನಾಡು ಮಾದರಿ?

► ಸೂಕ್ಷ್ಮ ಪ್ರದೇಶದಲ್ಲಿ ಆರೆಸ್ಸೆಸ್ ಜಾಥಾಕ್ಕೆ ತಮಿಳುನಾಡು ಸರಕಾರ ಅನುಮತಿ ನೀಡುವುದಿಲ್ಲ.

► ಸರಕಾರಿ ಆವರಣಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಲಾಗುತ್ತದೆ.

► ಸಾರ್ವಜನಿಕ ಸ್ಥಳಗಳಲ್ಲಿ ರೂಟ್ ಮಾರ್ಚ್‌ಗಳಿಗೆ ತಡೆಯೊಡ್ಡಲಾಗುತ್ತದೆ.

► ಶಾಖಾ ತರಬೇತಿ, ಗುರು ಪೂಜೆಗಳಂತಹ ಕಾರ್ಯಕ್ರಮಗಳನ್ನು ತಡೆಯಲಾಗುತ್ತದೆ.

► ಸರಕಾರಿ ಶಾಲೆಯಲ್ಲಿ ಆಧ್ಯಾತ್ಮಿಕ ಜಾಗೃತಿ ತರಗತಿ ನಡೆಸಿದ್ದರ ವಿರುದ್ಧ ಕ್ರಮ ಕೈಗೊಂಡದ್ದಿದೆ.

► ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ಇರುವುದಿಲ್ಲ.

► ಪೂರ್ವಾನುಮತಿ ಇಲ್ಲದೆ ಕಾರ್ಯಕ್ರಮ ನಡೆಸಲು ಅವಕಾಶವಿಲ್ಲ.

2021ರಿಂದಲೇ ಡಿಎಂಕೆ ನೇತೃತ್ವದ ತಮಿಳುನಾಡು ಸರಕಾರ ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸಲು ಹಲವಾರು ಕ್ರಮಗಳನ್ನು ಜಾರಿಗೆ ತಂದಿದೆ. ಕೋಮು ಸಾಮರಸ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು, ಸಾರ್ವಜನಿಕ ಆಸ್ತಿಯ ದುರುಪಯೋಗ ತಡೆಯುವುದು ಮತ್ತು ಆರೆಸ್ಸೆಸ್‌ನ ಸೈದ್ಧಾಂತಿಕ ಪ್ರಭಾವ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಸಂಸ್ಥೆಗಳಲ್ಲಿ ಆಗದಂತೆ ಮಾಡುವುದು ಈ ನಿರ್ಬಂಧಗಳ ಉದ್ದೇಶವಾಗಿದೆ. ರಾಜ್ಯಾದ್ಯಂತ ಸಂಪೂರ್ಣ ನಿಷೇಧದ ಬದಲು ಪೊಲೀಸ್ ನಿರ್ದೇಶನಗಳು ಮತ್ತು ಆಡಳಿತಾತ್ಮಕ ಮಾರ್ಗಸೂಚಿಗಳ ಮೂಲಕ ನೀತಿಗಳನ್ನು ಜಾರಿಗೊಳಿಸಲಾಗುತ್ತದೆ. ಕಚೇರಿಗಳು, ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಮೈದಾನಗಳು ಸೇರಿದಂತೆ ಸರಕಾರಿ ಸ್ವಾಮ್ಯದ ಅಥವಾ ನಿಯಂತ್ರಿತ ಆವರಣದಲ್ಲಿ ಆರೆಸ್ಸೆಸ್ ಶಾಖೆಗಳು, ರೂಟ್ ಮಾರ್ಚ್‌ಗಳು ಮತ್ತು ಸಭೆಗಳನ್ನು ನಿರ್ಬಂಧಿಸಲಾಗುತ್ತದೆ. ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತಗಳು ಅಂತಹ ಕಾರ್ಯಕ್ರಮಗಳಿಗೆ ಅನುಮತಿ ನಿರಾಕರಿಸುವಂತೆ ಸರಕಾರದ ನಿರ್ದೇಶನವಿದೆ. ಉಲ್ಲಂಘಿಸಿದಲ್ಲಿ ದಂಡದ ಜೊತೆಗೆ ಐಪಿಸಿ ಸೆಕ್ಷನ್ 153 ಎ (ದ್ವೇಷವನ್ನು ಉತ್ತೇಜಿಸುವುದು) ಅಥವಾ 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಅಡಿಯಲ್ಲಿ ಎಫ್‌ಐಆರ್ ಹಾಕಲು ಅವಕಾಶವಿರುತ್ತದೆ.

ಸರಕಾರದ ಈ ಕ್ರಮಗಳು ಸಾಂವಿಧಾನಿಕ ಜಾತ್ಯತೀತತೆಯನ್ನು ರಕ್ಷಿಸುತ್ತವೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ದ್ವೇಷ ಪ್ರಚಾರ ತಡೆಯುತ್ತವೆ ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಇದು ಹಿಂದೂ ವಿರೋಧಿ ಪಕ್ಷಪಾತ ಎಂಬುದು ಆರೆಸ್ಸೆಸ್ ಆರೋಪವಾಗಿದೆ. ಬಿಜೆಪಿ ಇದನ್ನು ಸೇಡಿನ ರಾಜಕೀಯ ಎಂದು ಕರೆದಿದೆ.

ಇನ್ನು ದೇಶದ ಇತರ ರಾಜ್ಯ ಸರಕಾರಗಳು ಆರೆಸ್ಸೆಸ್ ಚಟುವಟಿಕೆಗಳ ವಿರುದ್ಧ ಕ್ರಮಗಳನ್ನು ಕೈಗೊಂಡಿವೆ. ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಲ್ಲಿ, ಕೋಮು ಸಾಮರಸ್ಯಕ್ಕೆ ಧಕ್ಕೆ, ವಿಭಜಕ ಸಿದ್ಧಾಂತದ ಪ್ರಚಾರ ಮತ್ತು ಸಾರ್ವಜನಿಕ ಸ್ಥಳಗಳ ದುರುಪಯೋಗದ ಕಾರಣಕ್ಕಾಗಿ ಆರೆಸ್ಸೆಸ್ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗುತ್ತವೆ. ಶಾಲೆಗಳು, ಕಚೇರಿಗಳು, ಕ್ಯಾಂಪಸ್‌ಗಳು ಸೇರಿದಂತೆ ಸರಕಾರಿ ಆವರಣದಲ್ಲಿ ಆರೆಸ್ಸೆಸ್ ಚಟುವಟಿಕೆಗಳ ಮೇಲೆ ನಿಷೇಧ, ರೂಟ್ ಮಾರ್ಚ್‌ಗಳು ಅಥವಾ ಶಾಖೆಗಳಿಗೆ ಅನುಮತಿ ನಿರಾಕರಣೆ ಮತ್ತು ಸರಕಾರಿ ನೌಕರರ ಭಾಗವಹಿಸುವಿಕೆ ನಿಷೇಧ -ಇವು ಇಂಥ ನಿರ್ಬಂಧ ಕ್ರಮಗಳಲ್ಲಿ ಸೇರಿವೆ.

ಆದರೆ, ರಾಜ್ಯ ಸರಕಾರದ ಇಂಥ ಕ್ರಮಗಳ ವಿರುದ್ಧ ಆರೆಸ್ಸೆಸ್ ಕೋರ್ಟ್ ಮೆಟ್ಟಿಲೇರುತ್ತಲೇ ಇರುತ್ತದೆ. ಯಾವುದೇ ರಾಜ್ಯ ಆರೆಸ್ಸೆಸ್ ಮೇಲೆ ಸಂಪೂರ್ಣ ನಿಷೇಧ ವಿಧಿಸಿಲ್ಲ. ಆದರೆ ಸುತ್ತೋಲೆಗಳು, ಸರಕಾರಿ ಆದೇಶಗಳು ಮತ್ತು ಪೊಲೀಸ್ ನಿರ್ದೇಶನಗಳ ಮೂಲಕ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶಗಳಂಥಲ್ಲಿ ಸರಕಾರಿ ನೌಕರರ ಭಾಗವಹಿಸುವಿಕೆ ಮೇಲಿನ ಹಳೆಯ ನಿಷೇಧಗಳನ್ನು ತೆಗೆದುಹಾಕಲಾಗಿದೆ.

ತಮಿಳುನಾಡು ಹೊರತುಪಡಿಸಿದರೆ, ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ವಿಚಾರದಲ್ಲಿ ಕೇರಳದ ಎಲ್‌ಡಿಎಫ್ ಸರಕಾರ 2016ರಿಂದ ಸಮರ ಹೂಡಿದೆ. ಸರಕಾರಿ ಶಾಲೆ-ಕಾಲೇಜುಗಳು ಮತ್ತು ಸಾರ್ವಜನಿಕ ಮೈದಾನಗಳಲ್ಲಿ ಆರೆಸ್ಸೆಸ್ ಶಾಖೆಗಳ ಮೇಲೆ ಅನೌಪಚಾರಿಕ ನಿಷೇಧಗಳಿವೆ. ಕೋಮು ಅಪಾಯಗಳನ್ನು ಉಲ್ಲೇಖಿಸಿ ಪೊಲೀಸರು ಅನುಮತಿ ನಿರಾಕರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸರಕಾರ 2011ರಿಂದ ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸುತ್ತಿದೆ. ಸರಕಾರಿ ಆವರಣಗಳು, ಶಾಲೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಶಾಖೆಗಳು ಮತ್ತು ಮೆರವಣಿಗೆಗಳ ಮೇಲೆ ಕಟ್ಟುನಿಟ್ಟಿನ ನಿಷೇಧವಿದೆ. ಕೋಲ್ಕತಾ ಹೈಕೋರ್ಟ್ 2022ರ ತೀರ್ಪಿನಲ್ಲಿ, ಸೂಕ್ಷ್ಮ ಪ್ರದೇಶಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ನಿರಾಕರಣೆಯನ್ನು ಎತ್ತಿಹಿಡಿದಿದೆ. ಆದರೆ ಷರತ್ತುಗಳೊಂದಿಗೆ ಶಾಂತಿಯುತ ಮೆರವಣಿಗೆಗಳಿಗೆ ಅವಕಾಶ ನೀಡಿದೆ.

ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳಗಳಲ್ಲದೆ, ಇತರ ರಾಜ್ಯಗಳಲ್ಲಿಯೂ ಆರೆಸ್ಸೆಸ್‌ಗೆ ವಿಭಿನ್ನ ಸ್ವರೂಪದ ವಿರೋಧ ವ್ಯಕ್ತವಾಗಿದೆ. ಉದಾಹರಣೆಗೆ, ಪಂಜಾಬ್‌ನಲ್ಲಿ ಸಿಖ್ಖರ ಪ್ರಬಲ ಧಾರ್ಮಿಕ ಸಂಸ್ಥೆಯಾದ ಶಿರೋಮಣಿ ಗುರುದ್ವಾರ ಪ್ರಬಂಧಕ್ ಕಮಿಟಿ, ರಾಜ್ಯದಲ್ಲಿ ಆರೆಸ್ಸೆಸ್‌ನ ಪ್ರಭಾವವನ್ನು ವಿರೋಧಿಸಿ ಹಲವು ಬಾರಿ ನಿರ್ಣಯಗಳನ್ನು ಅಂಗೀಕರಿಸಿದೆ. ಇದು ಸರಕಾರೇತರ ಸಂಸ್ಥೆಗಳಿಂದ ಬರುವ ವಿರೋಧಕ್ಕೆ ಒಂದು ಉದಾಹರಣೆಯಾಗಿದೆ. ಹಾಗೆಯೇ, 2018-2023ರ ಅವಧಿಯಲ್ಲಿ ಛತ್ತೀಸ್‌ಗಡದಲ್ಲಿದ್ದ ಕಾಂಗ್ರೆಸ್ ಸರಕಾರ ಕೂಡ, ಸರಕಾರಿ ಕಚೇರಿಗಳು ಮತ್ತು ಆವರಣಗಳಲ್ಲಿ ಆರೆಸ್ಸೆಸ್ ಶಾಖೆಗಳನ್ನು ನಿಷೇಧಿಸುವ ಬಗ್ಗೆ ಚರ್ಚೆ ನಡೆಸಿ ಆದೇಶ ಹೊರಡಿಸಿತ್ತು. ಇದು ಬಿಜೆಪಿಯೇತರ ಸರಕಾರಗಳಿರುವ ರಾಜ್ಯಗಳಲ್ಲಿ ಈ ವಿಷಯ ಒಂದು ಸಾಮಾನ್ಯ ರಾಜಕೀಯ ಚರ್ಚೆಯಾಗಿದೆ ಎಂಬುದನ್ನು ತೋರಿಸುತ್ತದೆ.

ಇನ್ನು, ಗಮನಾರ್ಹ ಕ್ರಮಗಳನ್ನು ತೆಗೆದುಕೊಂಡಿರುವ ಇತರ ರಾಜ್ಯಗಳೆಂದರೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್-ಎನ್‌ಸಿಪಿ ಸರಕಾರವಿದ್ದಾಗ ಭಾಗಶಃ ನಿರ್ಬಂಧವಿತ್ತು. 2014ರಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ನಿಷೇಧಗಳನ್ನು ತೆಗೆದುಹಾಕಲಾಗಿದೆ. 2023ರಲ್ಲಿ ಹಿಂಸಾಚಾರದ ನಂತರ ಮುಂಬೈ ಸರಕಾರಿ ಶಾಲೆಗಳಲ್ಲಿ ಆರೆಸ್ಸೆಸ್ ಅನ್ನು ನಿರ್ಬಂಧಿಸಲಾಗಿದೆ. ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಸರಕಾರವಿದ್ದಾಗ ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಶಾಖೆಗಳನ್ನು ನಿಷೇಧಿಸಿತು. ಜಾರ್ಖಂಡ್‌ನಲ್ಲಿ ಜೆಎಂಎಂ ಸರಕಾರ 2019ರಿಂದಲೂ ನಿರ್ಬಂಧಿಸಿದೆ. ಮೆರವಣಿಗೆಗಳಿಗೆ ಪೊಲೀಸ್ ಅನುಮತಿ ಇರುವುದಿಲ್ಲ. 2024ರಲ್ಲಿನ ತೀರ್ಪಿನಲ್ಲಿ ಹೈಕೋರ್ಟ್ ಕೂಡ ನಿರ್ಬಂಧಗಳನ್ನು ಎತ್ತಿಹಿಡಿದಿದೆ.

ಕೇಂದ್ರ ಸರಕಾರ ಸರಕಾರಿ ನೌಕರರು ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಮೇಲಿದ್ದ 58 ವರ್ಷಗಳ ನಿಷೇಧವನ್ನು ತೆಗೆದುಹಾಕಿದೆ. ಆದರೆ ರಾಜ್ಯ ಮಟ್ಟದ ನಿಷೇಧಗಳನ್ನು ಕೇಂದ್ರೀಯವಾಗಿ ಜಾರಿಗೊಳಿಸಿಲ್ಲ. ಸರಕಾರಗಳು ನಿರ್ಬಂಧದ ಆದೇಶಗಳನ್ನು ಹೊರಡಿಸಿದರೂ, ಅವುಗಳ ಜಾರಿ ಹಲವು ಪ್ರಾಯೋಗಿಕ ಸವಾಲುಗಳನ್ನು ಎದುರಿಸುತ್ತದೆ. ಮೊದಲನೆಯದಾಗಿ, ಕಾನೂನಾತ್ಮಕವಾಗಿ ‘ಆರೆಸ್ಸೆಸ್ ಚಟುವಟಿಕೆ’ಯನ್ನು ವ್ಯಾಖ್ಯಾನಿಸುವುದೇ ಕಷ್ಟ. ಐದು ಜನರು ಸೇರಿ ವ್ಯಾಯಾಮ ಮಾಡುವುದನ್ನು ಅಥವಾ ಚರ್ಚಿಸುವುದನ್ನು ‘ಶಾಖೆ’ ಎಂದು ಪರಿಗಣಿಸಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎರಡನೆಯದಾಗಿ, ಇಂತಹ ನಿರ್ಬಂಧಗಳನ್ನು ಜಾರಿಗೊಳಿಸಲು ಸ್ಥಳೀಯ ಪೊಲೀಸರು ಮುಂದಾದಾಗ, ಅದು ಸ್ಥಳೀಯ ಮಟ್ಟದಲ್ಲಿ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅಲ್ಲದೆ, ಸರಕಾರಿ ಸ್ಥಳಗಳಿಗೆ ನಿಷೇಧ ಹೇರಿದರೂ, ಅದರ ಪಕ್ಕದಲ್ಲಿರುವ ಖಾಸಗಿ ಜಾಗಗಳಲ್ಲಿ ಚಟುವಟಿಕೆಗಳನ್ನು ನಡೆಸುವುದನ್ನು ತಡೆಯಲು ಸಾಧ್ಯವಾಗುವುದಿಲ್ಲ, ಇದು ನಿರ್ಬಂಧದ ಮೂಲ ಉದ್ದೇಶವನ್ನೇ ಪ್ರಶ್ನಿಸುವಂತೆ ಮಾಡುತ್ತದೆ. ಈಗ ಕರ್ನಾಟಕ ಸರಕಾರ, ಆರೆಸ್ಸೆಸ್ ಚಟುವಟಿಕೆಗಳನ್ನು ನಿರ್ಬಂಧಿಸುವ ನಿಟ್ಟಿನಲ್ಲಿ ಗಂಭೀರವಾಗಿರುವುದಕ್ಕೆ, ಅದು ತೆಗೆದುಕೊಳ್ಳುತ್ತಿರುವ ತ್ವರಿತ ಕ್ರಮಗಳೇ ಸಾಕ್ಷಿ. ಇದು ಸರಕಾರ ಮತ್ತು ಸಂಘಪರಿವಾರದ ಜನರ ಮತ್ತೊಂದು ಸುತ್ತಿನ ಸಂಘರ್ಷಕ್ಕೂ ಎಡೆ ಮಾಡಿಕೊಟ್ಟಿದೆ.

share
ಆರ್.ಜೀವಿ
ಆರ್.ಜೀವಿ
Next Story
X