Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ‘ಧರ್ಮಸ್ಥಳ ದೂರು’ ನೆನಪಿಸಿದ ನಿಗೂಢ...

‘ಧರ್ಮಸ್ಥಳ ದೂರು’ ನೆನಪಿಸಿದ ನಿಗೂಢ ಹತ್ಯಾಕಾಂಡಗಳು

ವಾರ್ತಾಭಾರತಿವಾರ್ತಾಭಾರತಿ23 July 2025 11:02 AM IST
share
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ತನ್ನಿಂದ ಹೂತುಹಾಕಿಸಲಾಗಿದೆ ಎಂದು ವ್ಯಕ್ತಿಯೊಬ್ಬ ಆರೋಪಿಸಿರುವುದು ಸಂಚಲನ ಮೂಡಿಸಿದೆ. ಅಪಾರ ಸಂಖ್ಯೆಯ ಅತ್ಯಾಚಾರ, ಕೊಲೆ ಮತ್ತು ಹೆಣಗಳನ್ನು ಹೂಳಿರುವ ಪ್ರಕರಣದಲ್ಲಿ ಸಾಕ್ಷಿ ಫಿರ್ಯಾದಿ ನೀಡಿರುವ ಹೇಳಿಕೆ ದೇಶವನ್ನೇ ತಬ್ಬಿಬ್ಬುಗೊಳಿಸಿದೆ. ಈ ಪ್ರಕರಣ ದೇಶದಲ್ಲಿನ ಸರಣಿ ಹತ್ಯಾಕಾಂಡಗಳ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಿದೆ. ದೇಶದಲ್ಲಿ ಸರಣಿ ಹಂತಕರ ಕಥೆಗಳು ಭಯಾನಕವಾಗಿವೆ. ಅಂಥ ಕೆಲವು ಅತ್ಯಂತ ಕುಖ್ಯಾತ ಪ್ರಕರಣಗಳ ಕುರಿತ ಒಂದು ನೋಟ ಇಲ್ಲಿದೆ.

ಭಾಗ- 2

ಉಮೇಶ್ ರೆಡ್ಡಿ (1996-2002)

ಚಿತ್ರದುರ್ಗ ಜಿಲ್ಲೆಯ ಬಸಪ್ಪ ಮಾಳಿಗೆ ಗ್ರಾಮದವನು. ಸರಣಿ ಹಂತಕ, ವಿಕೃತ ಕಾಮಿ ಎಂದೇ ಕುಖ್ಯಾತ. 18 ಮಹಿಳೆಯರನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. 9 ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾನೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಕನಿಷ್ಠ 20 ಮಹಿಳೆಯರ ಮೇಲೆ ಅವನು ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತದೆ. ಬಲಿಪಶುಗಳು ಮರ್ಯಾದೆಗೆ ಅಂಜಿ ದೂರು ನೀಡದೆ ಇರುವುದರಿಂದ ಆತನ ಹಲವಾರು ಅಪರಾಧಗಳು ಬೆಳಕಿಗೆ ಬಂದಿಲ್ಲ ಎನ್ನಲಾಗುತ್ತದೆ. ಕರ್ನಾಟಕ ಹೈಕೋರ್ಟ್ 2009ರಲ್ಲಿ ರೆಡ್ಡಿಗೆ ಮರಣದಂಡನೆ ವಿಧಿಸಿತು. 2011ರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಿತು. ರೆಡ್ಡಿ ಕ್ಷಮಾದಾನ ಅರ್ಜಿ ಸಲ್ಲಿಸಿದ ನಂತರ, ಸುಪ್ರೀಂ ಕೋರ್ಟ್ 2022ರಲ್ಲಿ ಅವನ ಮರಣದಂಡನೆಯನ್ನು 30 ವರ್ಷಗಳ ಶಿಕ್ಷೆಗೆ ಇಳಿಸಿದೆ.

ಸಯನೈಡ್ ಮಲ್ಲಿಕಾ (1999-2007)

ಈಕೆಯ ನಿಜ ಹೆಸರು ಕೆ.ಡಿ. ಕೆಂಪಮ್ಮ. ಕರ್ನಾಟಕದ ಕಗ್ಗಲಿಪುರದವಳು. 1999ರಲ್ಲಿ ಮೊದಲ ಕೊಲೆ ಮಾಡಿದ್ದವಳು, ಮುಂದಿನ 8 ವರ್ಷಗಳಲ್ಲಿ 6 ಮಹಿಳೆಯರನ್ನು ಕೊಂದಿದ್ದಳು. ಅದರಲ್ಲಿ 5 ಮಹಿಳೆಯರನ್ನು 2007ರಲ್ಲಿ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಕೊಂದಳು. ದೇವಾಲಯಕ್ಕೆ ಬರುವ ಮಹಿಳೆಯರ ಸ್ನೇಹ ಬೆಳೆಸಿಕೊಂಡು, ಅವರ ವಿಶ್ವಾಸ ಗಳಿಸಿದ ನಂತರ ಅವರ ಮನೆಗಳಿಂದ ದೂರವಿರುವ ಬೇರೆ ದೇವಾಲಯಕ್ಕೆ ಕರೆದು, ತೀರ್ಥ ಎಂದು ಸಯನೈಡ್ ಮಿಶ್ರಿತ ನೀರು ಕುಡಿಯಲು ಕೊಡುತ್ತಿದ್ದಳು. ಕಡೆಗೆ ಅವರ ಬಟ್ಟೆ, ಹಣ ಮತ್ತು ಆಭರಣಗಳನ್ನು ದೋಚುತ್ತಿದ್ದಳು. ಆಭರಣಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಳು. ಡಿಸೆಂಬರ್ 31, 2008ರಂದು ಆಕೆಯನ್ನು ಬಂಧಿಸಲಾಯಿತು. ಮುನಿಯಮ್ಮ ಕೊಲೆಗೆ ಸಂಬಂಧಿಸಿ ಆಕೆಗೆ 2010ರಲ್ಲಿ ಮರಣದಂಡನೆ ವಿಧಿಸಲಾಯಿತು. ನಾಗವೇಣಿ ಕೊಲೆಗೆ 2012ರಲ್ಲಿ ಮತ್ತೊಂದು ಮರಣದಂಡನೆ ವಿಧಿಸಲಾಯಿತು. ಕರ್ನಾಟಕದಲ್ಲಿ ಮರಣದಂಡನೆ ಶಿಕ್ಷೆ ವಿಧಿಸಲಾದ ಮೊದಲ ಮಹಿಳೆ ಆಕೆ. ಕಡೆಗೆ ಆಕೆಯ ವಿರುದ್ಧದ ಗಲ್ಲುಶಿಕ್ಷೆಗಳೆಲ್ಲವನ್ನೂ ಜೀವಾವಧಿ ಶಿಕ್ಷೆಗೆ ಇಳಿಸಲಾಯಿತು.

ಡಾಕ್ಟರ್ ಡೆತ್ (2002-2004)

ಡಾಕ್ಟರ್ ಡೆತ್ ಎಂದೇ ಗುರುತಾಗಿರುವ ದೇವೇಂದರ್ ಶರ್ಮಾ ಎಂಬ ಆಯುರ್ವೇದ ಡಾಕ್ಟರ್ ಟ್ಯಾಕ್ಸಿ ಮತ್ತು ಟ್ರಕ್ ಚಾಲಕರನ್ನು ಕೊಂದು, ಶವಗಳನ್ನು ಮೊಸಳೆಗಳಿಗೆ ತಿನ್ನಿಸುತ್ತಿದ್ದ ಅತಿ ಕ್ರೂರ ಸರಣಿ ಹಂತಕ. 2002ರಿಂದ 2004ರ ಅವಧಿಯಲ್ಲಿ ಆತ 7 ಟ್ಯಾಕ್ಸಿ ಡ್ರೈವರ್‌ಗಳನ್ನು ಕೊಂದಿದ್ದಲ್ಲದೆ, ಕೊಲೆ, ಅಪಹರಣ ಮತ್ತು ದರೋಡೆ ಸೇರಿದಂತೆ 27ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಶರ್ಮಾ ಮತ್ತವನ ಸಹಚರರು ಪ್ರವಾಸಗಳಿಗೆ ಬೇಕೆಂದು ಸುಳ್ಳು ಹೇಳಿ ವಾಹನ ಚಾಲಕರನ್ನು ಕರೆಸಿಕೊಳ್ಳುತ್ತಿದ್ದರು. ನಂತರ ಅವರನ್ನು ಕೊಲೆ ಮಾಡಿ, ವಾಹನಗಳನ್ನು ಮಾರಾಟ ಮಾಡುತ್ತಿದ್ದರು. ಸಾಕ್ಷ್ಯ ಅಳಿಸಿ ಹಾಕಲು ಶವಗಳನ್ನು ಉತ್ತರ ಪ್ರದೇಶದ ಕಾಸ್ಗಂಜ್‌ನಲ್ಲಿರುವ ಹಜಾರ ಕಾಲುವೆಯ ಮೊಸಳೆಗಳಿರುವ ನೀರಿಗೆ ಎಸೆಯುತ್ತಿದ್ದರು. ಇದಲ್ಲದೆ, ಆತ 1995ರಿಂದ 2004ರವರೆಗೆ ಅಕ್ರಮ ಮೂತ್ರಪಿಂಡ ಕಸಿ ಜಾಲದಲ್ಲೂ ಭಾಗಿಯಾಗಿದ್ದು, ಹಲವಾರು ರಾಜ್ಯಗಳಲ್ಲಿನ ವೈದ್ಯರು ಮತ್ತು ಮಧ್ಯವರ್ತಿಗಳ ಸಹಾಯದಿಂದ 125 ಕ್ಕೂ ಹೆಚ್ಚು ಅಕ್ರಮ ಮೂತ್ರಪಿಂಡ ಕಸಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇವೇಂದರ್ ಶರ್ಮಾ ಹಲವು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದಾನೆ. ದಿಲ್ಲಿ, ರಾಜಸ್ಥಾನ ಮತ್ತು ಹರ್ಯಾಣದಾದ್ಯಂತ 7 ಪ್ರತ್ಯೇಕ ಪ್ರಕರಣಗಳಲ್ಲಿ ಈತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಗುರ್ಗಾಂವ್ ನ್ಯಾಯಾಲಯ ಈತನಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಕಿಡ್ನಿ ದಂಧೆ ಮತ್ತು ಸರಣಿ ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶರ್ಮಾನನ್ನು 2004ರಲ್ಲಿ ಮೊದಲ ಬಾರಿಗೆ ಬಂಧಿಸಲಾಯಿತು. ಅದಾದ ಬಳಿಕ ಪೆರೋಲ್ ಮೇಲಿರುವಾಗ ಹಲವು ಬಾರಿ ಪರಾರಿಯಾಗಿರುವುದೂ ಇದೆ. 2020ರಲ್ಲಿ, 2023ರಲ್ಲಿ ಹೀಗೆ ಪರಾರಿಯಾಗಿದ್ದ. ರಾಜಸ್ಥಾನದ ದೌಸಾದ ಆಶ್ರಮವೊಂದರಲ್ಲಿ ನಕಲಿ ಗುರುತಿನಡಿ ಅರ್ಚಕನ ವೇಷದಲ್ಲಿದ್ದ ಬಗ್ಗೆ ನಿಖರ ಮಾಹಿತಿ ಸಿಕ್ಕಿದ ಬಳಿಕ ಇದೇ ಮೇ ತಿಂಗಳಲ್ಲಿ ಆತನನ್ನು ಮತ್ತೆ ಪೊಲೀಸರು ಬಂಧಿಸಿದ್ದಾರೆ.

ಬೇಬಿ ಕಿಲ್ಲರ್ (2004)

ನಿಜ ಹೆಸರು ದರ್ಬಾರ ಸಿಂಗ್. ಪಂಜಾಬ್‌ನ ಜಲಂಧರ್ ನಗರದಲ್ಲಿ 2004ರ ಎಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಪಂಜಾಬಿಗಳಲ್ಲದ ವಲಸಿಗರ 23 ಮಕ್ಕಳ ಅಪಹರಣ ನಡೆದು, ಅನೇಕರು ಲೈಂಗಿಕ ದೌರ್ಜನ್ಯಕ್ಕೆ ತುತ್ತಾದರು. ಅವರಲ್ಲಿ 17 ಮಕ್ಕಳ ಕೊಲೆಯಾಗಿತ್ತು. ಪೊಲೀಸರು ದರ್ಬಾರ ಸಿಂಗ್‌ನನ್ನು ಬಂಧಿಸಿದರು. ದಶಕದ ಕಾಲ ಜೈಲಿನಲ್ಲಿದ್ದ ಆತ, 2004ರ ಈ ಎಲ್ಲಾ ಅಪಹರಣಗಳು, ಲೈಂಗಿಕ ದೌರ್ಜನ್ಯಗಳು ಮತ್ತು ಕೊಲೆಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದ. ಎರಡು ಕೊಲೆಗಳಲ್ಲಿ ಅವನಿಗೆ ಶಿಕ್ಷೆ ವಿಧಿಸಲಾಯಿತು. 2018ರಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವಾಗ ಆತ ಸಾವನ್ನಪ್ಪಿದ.

ನಿಥಾರಿ ಹತ್ಯಾಕಾಂಡ (2005-06)

2005-06ರಲ್ಲಿ ದೇಶವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಇದು. ನೊಯ್ಡಾ ಸಮೀಪದ ನಿಥಾರಿ ಗ್ರಾಮದಲ್ಲಿ ನಡೆದದ್ದು. ಮೋನಿಂದರ್ ಸಿಂಗ್ ಪಂಧೇರ್ ಮತ್ತು ಸುರೀಂದರ್ ಕೋಲಿ ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದರು. ಆದರೆ, ಸಾಕ್ಷ್ಯಾಧಾರಗಳ ಕೊರತೆಯಿಂದ ಇಬ್ಬರನ್ನೂ ಖುಲಾಸೆಗೊಳಿಸಲಾಯಿತು. ನಿಥಾರಿ ಗ್ರಾಮದ 14 ವರ್ಷದ ರಿಂಪಾ ಸೇರಿದಂತೆ 15 ಹೆಣ್ಣುಮಕ್ಕಳು ಹಾಗೂ ನಾಲ್ವರು ಮಹಿಳೆಯರು ಕಾಣೆಯಾಗಿದ್ದರು. ಕಡೆಗೆ ಅವರೆಲ್ಲರ ಅಸ್ಥಿಪಂಜರಗಳು ಪಂಧೇರ್ ಮನೆಯ ಸಮೀಪದಲ್ಲಿ ಪತ್ತೆಯಾಗಿದ್ದವು. ತೀವ್ರ ಕೋಲಾಹಲ ಸೃಷ್ಟಿಸಿದ್ದ ಪ್ರಕರಣವನ್ನು ಯುಪಿ ಸರಕಾರ ಸಿಬಿಐಗೆ ವಹಿಸಿತ್ತು. 2006ರಲ್ಲಿ ಪಂಧೇರ್‌ನ ಮನೆ ಹಿಂಬದಿಯ ಚರಂಡಿಯಲ್ಲಿಯೇ ಹಲವು ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಅವರಿಬ್ಬರೂ ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದು, ಶವಗಳನ್ನು ತುಂಡುತುಂಡಾಗಿ ಕತ್ತರಿಸಿ ಚರಂಡಿಗೆ ಎಸೆದಿದ್ದಾರೆ ಎಂಬ ಆರೋಪವಿತ್ತು. ಇಬ್ಬರ ವಿರುದ್ಧವೂ 19 ಪ್ರಕರಣಗಳು ದಾಖಲಾಗಿದ್ದವು. ವಿಚಾರಣೆ ನಡೆಸಿದ್ದ ಕೆಳ ನ್ಯಾಯಾಲಯ ಈ ಇಬ್ಬರಿಗೆ ಗಲ್ಲುಶಿಕ್ಷೆಯನ್ನೂ ವಿಧಿಸಿತ್ತು. ಆದರೆ, ಕಡೆಗೆ ಎಲ್ಲ ಪ್ರಕರಣಗಳಲ್ಲೂ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಇಬ್ಬರನ್ನೂ ಖುಲಾಸೆಗೊಳಿಸಲಾಯಿತು.

ಸಯನೈಡ್ ಮೋಹನ್ (2005-09)

2005ರಿಂದ 2009ರ ಅವಧಿಯಲ್ಲಿ 20 ಮಹಿಳೆಯರ ಕೊಲೆ ಮಾಡಿದ್ದ ಆರೋಪ ಹೊತ್ತಿದ್ದ ಸಯನೈಡ್ ಮೋಹನ್ ನಿಜ ಹೆಸರು ಮೋಹನ್ ಕುಮಾರ್ ವಿವೇಕಾನಂದ. ದಕ್ಷಿಣ ಕನ್ನಡದಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕನಾಗಿದ್ದ ಆತ, ಮದುವೆಯಾಗಲು ನೋಡುತ್ತಿದ್ದ ಮಹಿಳೆಯರನ್ನು ಕಂಡುಕೊಂಡು ಬೇಟೆಯಾಡುವ ಸರಣಿ ಕೊಲೆಗಾರನಾಗಿದ್ದೇ ವಿಚಿತ್ರ. ವರದಕ್ಷಿಣೆ ನೀಡಲು ಸಾಧ್ಯವಾಗದ ಅಥವಾ ಸೂಕ್ತ ಗಂಡು ಸಿಗದ 22-35 ವರ್ಷ ವಯಸ್ಸಿನ ಮಹಿಳೆಯರನ್ನು, ವರದಕ್ಷಿಣೆಯಿಲ್ಲದೆ ಮದುವೆಯಾಗುವ ಆಮಿಷವೊಡ್ಡಿ ಬಲೆಗೆ ಬೀಳಿಸಿಕೊಂಡು, ಕಡೆಗೆ ಸಯನೈಡ್ ಮಾತ್ರೆ ನೀಡಿ, ಅವರ ಆಭರಣಗಳನ್ನು ದೋಚುತ್ತಿದ್ದ ಆರೋಪ ಅವನ ಮೇಲಿತ್ತು. ಕಾಸರಗೋಡಿನ 25 ವರ್ಷದ ಮಹಿಳೆಯ ಕೊಲೆ ಆರೋಪ 2020ರಲ್ಲಿ ಸಾಬೀತಾಗಿ ಜೀವಾವಧಿ ಶಿಕ್ಷೆ ವಿಧಿಸಿದಾಗ, ಅದು ಅವನ ವಿರುದ್ಧದ 20 ಕೊಲೆ ಪ್ರಕರಣಗಳಲ್ಲಿ ಕೊನೆಯದೆಂಬುದು ದಾಖಲಾಗಿತ್ತು. ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡಿನ ಅವಿವಾಹಿತ ಮಹಿಳೆಯರೊಂದಿಗೆ ಸ್ನೇಹ ಬೆಳೆಸುವುದು ಅವನ ಕಾರ್ಯ ವಿಧಾನವಾಗಿತ್ತು. ಮಹಿಳೆಯರನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ದು ಬಸ್ ನಿಲ್ದಾಣದ ಬಳಿಯ ಲಾಡ್ಜ್‌ಗಳಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಕಡೆಗೆ, ಗರ್ಭನಿರೋಧಕ ಮಾತ್ರ ಎಂದು ನಂಬಿಸಿ, ಬಸ್ ನಿಲ್ದಾಣದ ಶೌಚಾಲಯಗಳಲ್ಲಿ ಸಯನೈಡ್ ಸೇವಿಸುವಂತೆ ಮಾಡುತ್ತಿದ್ದ. ಬದುಕುಳಿದ ಏಕೈಕ ಮಹಿಳೆಯಿಂದಾಗಿ ಅವನ ಈ ತಂತ್ರ ಬಯಲಾಗಿತ್ತು. ಆತ ಮಹಿಳಾ ಹಾಸ್ಟೆಲ್‌ನಲ್ಲಿ ಅಡುಗೆಯವಳಾಗಿ ಕೆಲಸ ಮಾಡುತ್ತಿದ್ದ ಪುಷ್ಪಾಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದ. ಅವಳನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಮೂರು ಬಾರಿ ಅವಳ ಮನೆಗೆ ಭೇಟಿ ನೀಡಿದ್ದ. ಜುಲೈ 8, 2009ರಂದು ಸುಳ್ಯದ ದೇವಸ್ಥಾನಕ್ಕೆ ಭೇಟಿ ನೀಡುವ ನೆಪದಲ್ಲಿ ತನ್ನ ಮನೆಯಿಂದ ಹೊರಟುಹೋದ ಪುಷ್ಪಾ ಹಿಂದಿರುಗಲಿಲ್ಲ. ಜುಲೈ 15, 2009ರಂದು ಪುಷ್ಪಾಳನ್ನು ಮೆಜೆಸ್ಟಿಕ್ ಬಸ್ ಟರ್ಮಿನಸ್‌ಗೆ ಕರೆದೊಯ್ದು, ಅಲ್ಲಿ ಗರ್ಭನಿರೋಧಕ ಮಾತ್ರೆ ಎಂದು ನಂಬಿಸಿ ಸಯನೈಡ್ ಮಾತ್ರೆ ಕೊಟ್ಟು, ಮುಗಿಸಿಹಾಕಿದ್ದ. ಇದೇ ರೀತಿಯ ಕೊಲೆಗಳಿಗೆ ಸಂಬಂಧಿಸಿದಂತೆ ಅಕ್ಟೋಬರ್ 21, 2009ರಂದು ಅವನನ್ನು ಬಂಧಿಸಲಾಯಿತು. ಮೋಹನ್‌ಗೆ 5 ಪ್ರಕರಣಗಳಲ್ಲಿ ಮರಣದಂಡನೆ ವಿಧಿಸಲಾಗಿದ್ದು, ಅದರಲ್ಲಿ ಒಂದನ್ನು ದೃಢಪಡಿಸಲಾಗಿದೆ. 10 ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಅವನು ಮೇಲ್ಮನವಿ ಸಲ್ಲಿಸಿದ್ದಾನೆ. ಐದು ಪ್ರಕರಣಗಳಲ್ಲಿ ಅವನನ್ನು ಖುಲಾಸೆಗೊಳಿಸಲಾಗಿದೆ.

ಬಿಯರ್ ಮ್ಯಾನ್ (2006-07)

ಮುಂಬೈನಲ್ಲಿ ಅಕ್ಟೋಬರ್ 2006ರಿಂದ ಜನವರಿ 2007ರ ಅವಧಿಯಲ್ಲಿ ಚರ್ಚ್‌ಗೇಟ್ ಮತ್ತು ಮೆರೈನ್ ಲೈನ್ಸ್ ನಿಲ್ದಾಣಗಳ ನಡುವೆ ನಡೆದ ಕ್ರೂರ ಸರಣಿಕೊಲೆಗಳು ಬೆಚ್ಚಿಬೀಳಿಸಿದ್ದವು. ಕನಿಷ್ಠ 7 ಪುರುಷರನ್ನು ಕ್ರೂರವಾಗಿ ಕೊಂದು ಅರೆಬೆತ್ತಲಾಗಿಸಲಾಗಿತ್ತು. ಅವರೆಲ್ಲ ಹೆಚ್ಚಾಗಿ ನಿರಾಶ್ರಿತರು ಅಥವಾ ಕಾರ್ಮಿಕರಾಗಿದ್ದರು. ಕೆಲ ಶವಗಳ ಬಳಿ ಖಾಲಿ ಬಿಯರ್ ಕ್ಯಾನ್‌ಗಳು ಕಂಡುಬಂದ ಹಿನ್ನೆಲೆಯಲ್ಲಿ ಆ ಅಪರಿಚಿತ ಕೊಲೆಗಾರನನ್ನು ‘ಬಿಯರ್ ಮ್ಯಾನ್’ ಎಂದು ಕರೆಯಲಾಯಿತು. ಮುಂಬೈ ಪೊಲೀಸರು 2007ರಲ್ಲಿ ಒಬ್ಬ ಶಂಕಿತನನ್ನು ಬಂಧಿಸಿದರಾದರೂ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತನನ್ನು 2009ರಲ್ಲಿ ಖುಲಾಸೆಗೊಳಿಸಲಾಯಿತು. ಇಂದಿಗೂ ನಿಜವಾದ ಅಪರಾಧಿಯನ್ನು ಗುರುತಿಸಲಾಗಿಲ್ಲ ಮತ್ತು ಆ ಪ್ರಕರಣ ಕೂಡ ಬಗೆಹರಿಯದೆ ಉಳಿದಿದೆ.

ಅಮರ್ಜೀತ್ ಸದಾ (2006-07)

ಜಗತ್ತಿನ ಅತಿ ಕಿರಿಯ ಸರಣಿ ಹಂತಕ. ಬಿಹಾರದ ಬೆಗುಸರಾಯ್‌ನವನು. ಆತನ ತಾಯ್ತಂದೆಯರು ಬಡ ಕೂಲಿಕಾರ್ಮಿಕರು. 2006ರಿಂದ 2007ರ ಅವಧಿಯಲ್ಲಿ 8 ವರ್ಷದವನಿದ್ದಾಗಲೇ ಆತ ಮೂವರು ಮಕ್ಕಳನ್ನು ಕೊಂದಿದ್ದ. ಆತನ ಮೊದಲ ಬಲಿ 8 ತಿಂಗಳ ಅವನ ತಂಗಿಯಾಗಿದ್ದಳು. ಅದೇ ವರ್ಷ 9 ತಿಂಗಳ ಸೋದರಸಂಬಂಧಿಯನ್ನು ಕೊಂದಿದ್ದ. ಕಡೆಗೆ, 6 ತಿಂಗಳ ಮಗುವನ್ನು ಕೊಂದಿದ್ದ. ಅವನ ವಯಸ್ಸಿನ ಕಾರಣದಿಂದಾಗಿ ಅವನ ಮೇಲೆ ಆರೋಪ ಹೊರಿಸಲಿಲ್ಲ. ಬದಲಿಗೆ ಮುಂಗೇರ್‌ನಲ್ಲಿರುವ ರಿಮಾಂಡ್ ಹೋಂಗೆ ಕಳುಹಿಸಲಾಯಿತು. 2016ರಲ್ಲಿ ಆತನಿಗೆ 18 ತುಂಬಿದಾಗ ಬಿಡುಗಡೆ ಮಾಡಲಾಯಿತು. ನಂತರದ ಆತನ ಸ್ಥಿತಿ ಬಗ್ಗೆ ಮಾಹಿತಿಗಳಿಲ್ಲ.

ಸೈಕೋ ಶಂಕರ್ (2008-11)

ಸೈಕೋ ಶಂಕರ್ ಎನ್ನಲಾಗುವ ಎಂ. ಜೈಶಂಕರ್ ತಮಿಳುನಾಡಿನವನು. ಈ ಸರಣಿ ಹಂತಕ 2008ರಿಂದ 2011ರ ಅವಧಿಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಗಳ ಸರಣಿಯಿಂದ ಕುಖ್ಯಾತನಾಗಿದ್ದ. ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ಸುಮಾರು 30 ಅತ್ಯಾಚಾರಗಳು, ಕೊಲೆಗಳು ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಆತ ಸುಮಾರು 40ನೇ ವಯಸ್ಸಿನಲ್ಲಿ ಸತ್ತಾಗ, ಕನಿಷ್ಠ 19 ಮಹಿಳೆಯರನ್ನು ಕೊಂದ ಆರೋಪ ಆತನ ಮೇಲಿತ್ತು. ಅವನು ಯಾವಾಗಲೂ ಕಪ್ಪು ಕೈಚೀಲದಲ್ಲಿ ಮಚ್ಚನ್ನು ಇಟ್ಟುಕೊಂಡಿರುತ್ತಿದ್ದ ಎನ್ನಲಾಗುತ್ತದೆ. ಹೆದ್ದಾರಿಗಳಲ್ಲಿರುವ ಡಾಬಾಗಳ ಬಳಿ ಲೈಂಗಿಕ ಕಾರ್ಯಕರ್ತೆಯರನ್ನು ಅಪಹರಿಸಿ, ಅವರ ಮೇಲೆ ಅತ್ಯಾಚಾರವೆಸಗಿ, ಬಳಿಕ ಕ್ರೂರವಾಗಿ ಕೊಲ್ಲುತ್ತಿದ್ದ. ಹಳ್ಳಿಗಳಲ್ಲಿನ ತೋಟದ ಮನೆಗಳಲ್ಲಿರುವ ಮಹಿಳೆಯರು ಕೂಡ ಆತನ ಟಾರ್ಗೆಟ್ ಆಗುತ್ತಿದ್ದರು. ಬೆಂಗಳೂರಿನಲ್ಲಿ ಆತನನ್ನು ಬಂಧಿಸಿದ ಬಳಿಕ, ಆತ ಮಾನಸಿಕ ಅಸ್ವಸ್ಥ ಎಂಬುದು ತಿಳಿಯಿತು. ಫೆಬ್ರವರಿ 2018ರಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳಲು ವಿಫಲ ಯತ್ನ ನಡೆಸಿದ ಆತ, ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ.

ರವೀಂದರ್ ಕುಮಾರ್ (2008-15)

ಉತ್ತರ ಪ್ರದೇಶದ ಈತ ಸರಣಿ ಹಂತಕ, ಅತ್ಯಾಚಾರಿ, ಶಿಶುಕಾಮಿ ಮತ್ತು ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಮನೋರೋಗಿಯಾಗಿದ್ದಾನೆ. 2008ರಿಂದ 2015ರ ಅವಧಿಯಲ್ಲಿ ಕನಿಷ್ಠ 15 ಮಕ್ಕಳನ್ನು ಅಪಹರಿಸಿ, ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾನೆ. ಅವನನ್ನು ಜುಲೈ 19, 2015ರಂದು ಬಂಧಿಸಲಾಯಿತು. ಒಟ್ಟು 30 ಮಕ್ಕಳನ್ನು ಕೊಂದಿರುವುದಾಗಿ ಆತ ಒಪ್ಪಿಕೊಂಡಿದ್ದು, 15 ಮಕ್ಕಳ ಕೊಲೆ ಪ್ರಕರಣದಲ್ಲಿ ಅಪರಾಧಿ ಎನ್ನುವುದು ಸಾಬೀತಾಗಿದೆ. ದಿಲ್ಲಿ ಮತ್ತು ಉತ್ತರ ಪ್ರದೇಶದ ಬಡ ಕುಟುಂಬಗಳ ಮಕ್ಕಳನ್ನು ಗುರಿಯಾಗಿಸಿಕೊಂಡಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಆ ಮಕ್ಕಳೆಲ್ಲ 4ರಿಂದ 6 ವರ್ಷ ವಯಸ್ಸಿನವರು. 2008ರಲ್ಲಿ ಸಮಯಪುರ್ ಬದ್ಲಿಯ ಕಾರ್ಮಿಕನ ಮಗುವಿನ ಅತ್ಯಾಚಾರ ಮತ್ತು ಕೊಲೆಯೊಂದಿಗೆ ಅವನ ಅಪರಾಧ ಸರಣಿ ಶುರುವಾಯಿತು. 2015ರಲ್ಲಿ ಆರು ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಗಾಗಿ ಮೇ 2023ರಲ್ಲಿ ದಿಲ್ಲಿ ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಇದರೊಂದಿಗೆ, ಆತ 2008ರಿಂದ 2015ರವರೆಗೆ ಮಾಡಿದ ವ್ಯಾಪಕ ಅಪರಾಧ ಕೃತ್ಯಗಳು ಬಯಲಾದವು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X