Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಸನಾತನಿ ಅಜೆಂಡಾ ಈ ದೇಶದ ಸಾಮಾಜಿಕತೆಯ...

ಸನಾತನಿ ಅಜೆಂಡಾ ಈ ದೇಶದ ಸಾಮಾಜಿಕತೆಯ ಜೇನುಗೂಡನ್ನು ನಾಶಗೊಳಿಸುತ್ತಿದೆಯೇ?

ಆರ್. ಜೀವಿಆರ್. ಜೀವಿ15 Oct 2025 12:10 PM IST
share
ಸನಾತನಿ ಅಜೆಂಡಾ ಈ ದೇಶದ ಸಾಮಾಜಿಕತೆಯ ಜೇನುಗೂಡನ್ನು ನಾಶಗೊಳಿಸುತ್ತಿದೆಯೇ?

ಭಾಗ - 2

ಅಂಬೇಡ್ಕರ್ ಹಿಂದೂ ಧಾರ್ಮಿಕ ಗ್ರಂಥಗಳನ್ನು ನಂಬಿಕೆಯ ಆಧಾರವಾಗಿಯಲ್ಲ, ಪ್ರಾಚೀನ ಸಾಹಿತ್ಯ ಅಥವಾ ಐತಿಹಾಸಿಕ ಮೂಲಗಳೆಂದು ನೋಡಬೇಕು ಎಂದಿದ್ದರು. ವೇದಗಳ ದೈವಿಕ ಮೂಲವನ್ನು ಪ್ರತಿಪಾದಿಸುವ ಯತ್ನಗಳನ್ನು ಕೂಡ ಅಂಬೇಡ್ಕರ್ ಟೀಕಿಸಿದ್ದರು. ‘‘ವೇದಗಳು ಜಗತ್ತಿನ ಅತ್ಯಂತ ಪ್ರಾಚೀನ ಕೃತಿಗಳು ಎಂದು ಹಿಂದೂಗಳು ನಂಬಿದ್ದರೆ, ಯಾರೂ ಅದರ ಬಗ್ಗೆ ಜಗಳವಾಡಲು ಸಾಧ್ಯವಿಲ್ಲ. ಆದರೆ ಅವುಗಳಿಗೆ ಆರಂಭವಿಲ್ಲ ಎಂಬ ಅರ್ಥದಲ್ಲಿ ಅವು ಶಾಶ್ವತ ಎಂದು ಹೇಳಿದರೆ ಅದು ಸಮರ್ಥನೀಯವಲ್ಲ’’ ಎಂದು ಅಂಬೇಡ್ಕರ್ ಹೇಳಿರುವುದನ್ನು ವಿದ್ವಾಂಸರು ಉಲ್ಲೇಖಿಸಿದ್ದಾರೆ. ಹಿಂದೂ ಸಮಾಜ ಶಾಶ್ವತವಾಗಿದೆ ಎಂಬ ಪ್ರತಿಪಾದನೆಯನ್ನು ಕೂಡ ಅಂಬೇಡ್ಕರ್ ತಳ್ಳಿಹಾಕುತ್ತಾರೆ. ‘ಬ್ರಾಹ್ಮಣರು ಹಿಂದೂ ನಂಬಿಕೆ ವ್ಯವಸ್ಥೆಯನ್ನು ಒಳಗಿನಿಂದ ಬದಲಾಯಿಸುತ್ತಿದ್ದರು. ಬ್ರಾಹ್ಮಣರು ಬದಲಾಗಿದ್ದಾರೆ’ ಎಂದು ಅಂಬೇಡ್ಕರ್ ಬರೆಯುತ್ತಾರೆ. ಅವರು ವೈದಿಕ ದೇವರುಗಳನ್ನು ಪೂಜಿಸುತ್ತಿದ್ದ ಕಾಲವಿತ್ತು. ಕ್ರಮೇಣ ಇಂದ್ರ, ವರುಣ ಮತ್ತು ಬ್ರಹ್ಮನ ಆರಾಧನೆ ಲಾಭದಾಯಕವಾಗಿಲ್ಲ ಎಂದಾದ ಮೇಲೆ ಅದು ಹಿಂದೆ ಸರಿಯಿತು. ಹಿಂದೂ ಧರ್ಮವನ್ನು ಈಗ ವಿಷ್ಣು ಮತ್ತು ಶಿವನಂತಹ ದೇವರುಗಳೊಂದಿಗೆ ಗುರುತಿಸಲಾಗಿದೆ. ಬಿಜೆಪಿ ರಾಜಕೀಯ ಲಾಭಕ್ಕಾಗಿ ಹಿಂದೂ ದೇವರುಗಳನ್ನು ತನಗೆ ಬೇಕಾದಂತೆ ಬದಲಿಸುತ್ತ, ಬಳಸಿಕೊಳ್ಳುತ್ತ ಬಂದಿದೆ. ವಿದ್ವಾಂಸರು ಹೇಳುವ ಹಾಗೆ, ಆರೆಸ್ಸೆಸ್ ದೇವರುಗಳ ವ್ಯಕ್ತಿತ್ವ ಬದಲಾಯಿಸುವುದಕ್ಕೆ ಕುಖ್ಯಾತವಾಗಿದೆ. ಅದು ರಾಮನ ಶಾಂತ, ಶಿಸ್ತುಬದ್ಧ ಮತ್ತು ವಿಧೇಯ ಸೇವಕ ಹನುಮಂತನನ್ನು ಕೋಪಿಷ್ಠನಾಗಿ ಬದಲಿಸಿ, ಸಂಘದ ಉಗ್ರ ಅನುಯಾಯಿಗಳ ಜೊತೆ ಸಮೀಕರಿಸುತ್ತದೆ. ಈ ಮೂಲಕ, ಮುಸ್ಲಿಮರು, ಕ್ರಿಶ್ಚಿಯನ್ನರು, ದಲಿತರು ಮತ್ತು ಆದಿವಾಸಿಗಳ ವಿರುದ್ಧದ ಹಿಂಸಾತ್ಮಕ ಕೃತ್ಯಗಳಿಗೆ ಧಾರ್ಮಿಕ ಸಮರ್ಥನೆ ನೀಡಲಾಗುತ್ತದೆ. ಬುದ್ಧನನ್ನು ವಿಷ್ಣುವಿನ ಅವತಾರವೆಂದು ಮರುರೂಪಿಸುವ ಮೂಲಕ ಶಂಕರಾಚಾರ್ಯರು ಬೌದ್ಧರಿಂದ ಹಿಂದೂ ಧರ್ಮವನ್ನು ರಕ್ಷಿಸಿದರು ಎಂದು ಗೋಳ್ವಾಲ್ಕರ್ ಬರೆಯುತ್ತಾರೆ. ಬೌದ್ಧಧರ್ಮವನ್ನು ಹಿಂದೂ ಧರ್ಮಕ್ಕೆ ಒಳಪಡಿಸುವ ಈ ಪ್ರಚಾರವನ್ನು ಆರೆಸ್ಸೆಸ್ ಮುಂದುವರಿಸಿದೆ. ಅದೇ ಶಂಕರಾಚಾರ್ಯರ ದ್ವಂದ್ವ ನಿಲುವುಗಳನ್ನು ಅಂಬೇಡ್ಕರ್ ಬಯಲಿಗೆಳೆಯುತ್ತಾರೆ. ಒಂದೆಡೆ, ಬ್ರಹ್ಮವೇ ಸತ್ಯ ಮತ್ತು ಅದು ಎಲ್ಲರನ್ನೂ ವ್ಯಾಪಿಸಿದೆ ಎನ್ನುವ ಶಂಕರಾಚಾರ್ಯರು ಮತ್ತೊಂದೆಡೆ, ಹಿಂದೂ ಸಮಾಜದ ಶ್ರೇಣೀಕೃತ ಅಸಮಾನತೆಯನ್ನು ಎತ್ತಿಹಿಡಿದಿದ್ದಾರೆ. ಹಿಂದೂ ಧರ್ಮ ಸನಾತನವಲ್ಲ ಎಂದು ಅವತ್ತೇ ಅಂಬೇಡ್ಕರ್ ಪ್ರತಿಪಾದಿಸಿದ್ದರು. ಮಾತ್ರವಲ್ಲದೆ, ಬ್ರಾಹ್ಮಣರು ಹೇಗೆ ಮೋಸಗೊಳಿಸುತ್ತಿದ್ದಾರೆ, ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದರು.

ಬಿಜೆಪಿ ಸನಾತನ ಧರ್ಮ ಕುರಿತ ಹೇಳಿಕೆ ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಗುರಿಯಾಗಿಸಿದ್ದ ಹೊತ್ತಲ್ಲಿ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಜಾತಿ ತಾರತಮ್ಯ ಇರುವುದರ ಬಗ್ಗೆ ಒಪ್ಪಿಕೊಂಡರು ಮತ್ತು ಮೀಸಲಾತಿಯನ್ನು ಬೆಂಬಲಿಸಿದರು. ಇಂಥದೊಂದು ವ್ಯವಸ್ಥಿತ ನಾಟಕದಲ್ಲಿ ಬಿಜೆಪಿ, ಆರೆಸ್ಸೆಸ್ ಒಟ್ಟಾಗಿ ತೊಡಗಿರುವಾಗ, ವಿರೋಧಪಕ್ಷಗಳು ಧರ್ಮದ ಬಗ್ಗೆ ನಿಲುವು ತೆಗೆದುಕೊಳ್ಳಲಾಗದ ಸ್ಥಿತಿಯಲ್ಲಿವೆ. ಅವು ಹಿಂದೂ ಆಚರಣೆಗಳಲ್ಲಿ ಭಾಗವಹಿಸುವ ಮೂಲಕ ಮತ್ತು ಧರ್ಮವನ್ನು ವೈಭವೀಕರಿಸುವ ಮೂಲಕ ಬಿಜೆಪಿಯನ್ನೇ ಅನುಕರಿಸುತ್ತವೆ. ಸಾಫ್ಟ್ ಹಿಂದುತ್ವ ಎಂಬಿತ್ಯಾದಿ ಯಾವುದೇ ಹೆಸರಿಂದ ಕರೆದರೂ, ಅಂತಿಮವಾಗಿ ಇದು ಹಿಂದೂ ಧರ್ಮದ ವಿಷಯದಲ್ಲಿ ಬಿಜೆಪಿಯ ಪರವಾಗಿ ನಿಲ್ಲುವುದೇ ಆಗಿದೆ. ಇಂಥ ಇಕ್ಕಟ್ಟಿನ ಸ್ಥಿತಿಯಲ್ಲಿ, ಹಿಂದೂ ಧರ್ಮದ ಬಗ್ಗೆ ಮಾತನಾಡಲು ಬೇರೆಯದೇ ಭಾಷೆಯನ್ನು ಕಂಡುಕೊಳ್ಳುವ ಯತ್ನ ಮಾಡುತ್ತಿರುವವರು ರಾಹುಲ್ ಗಾಂಧಿ ಮಾತ್ರ. ಅವರು ಸಂವಿಧಾನ ಮತ್ತದು ಪ್ರತಿಪಾದಿಸುವ ಜಾತ್ಯತೀತತೆ ತತ್ವದ ಮೂಲಕ ಸನಾತನವನ್ನು ಎದುರಿಸುವ ದಿಟ್ಟ ಪ್ರಯತ್ನಗಳನ್ನು ಮಾಡುತ್ತಾ ಬಂದಿದ್ದಾರೆ.

ಇವತ್ತಿನ ರಾಜಕೀಯದಲ್ಲಿ ಬಿಜೆಪಿ ಅಥವಾ ಆರೆಸ್ಸೆಸ್ ಸನಾತನವನ್ನು, ಮನುವಾದವನ್ನು ಸ್ಪಷ್ಟವಾಗಿ ಒಂದು ಅಸ್ತ್ರದಂತೆ ಝಳಪಿಸುತ್ತಿರುವುದು ಏಕೆ ಎಂಬುದನ್ನು ನೋಡಬೇಕು. ಬಿಜೆಪಿ ಇದಕ್ಕಾಗಿಯೇ ಒಂದು ಮಾದರಿಯನ್ನು ರೂಪಿಸಿದೆ. ಅದು ಮುನ್ನೆಲೆಯಲ್ಲಿ ಅತ್ಯಂತ ಪ್ರಬಲವಾಗಿ ಮುಸ್ಲಿಮರನ್ನು ಗುರಿ ಮಾಡುತ್ತದೆ. ಮೋದಿ ಥರದ ಪ್ರಮುಖ ನಾಯಕರೇ ಮಂದಿರ, ಮಸೀದಿ, ಮಂಗಳಸೂತ್ರ, ಮಚಲಿ, ಮಟನ್ ಎಂಬುದನ್ನು ಅಬ್ಬರದಿಂದ ಹೇಳುತ್ತಾರೆ. ಇನ್ನೊಂದೆಡೆ ಅವರ ಪಡೆಯ ಇತರರು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಎಂದೆಲ್ಲ ಮುಸ್ಲಿಮರ ವಿರುದ್ಧ ಮುಗಿಬೀಳುತ್ತಾರೆ. ಅವರನ್ನು ನುಸುಳುಕೋರರು ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಹೆಚ್ಚು ಮಕ್ಕಳನ್ನು ಹೆರುತ್ತ ಹಿಂದೂಗಳ ಪಾಲಿಗೆ ಅಪಾಯಕಾರಿಯಾಗಲಿರುವವರು ಎಂಬ ಭೀತಿಯನ್ನು ವ್ಯವಸ್ಥಿತವಾಗಿ ಹರಡಲಾಗುತ್ತದೆ. ಬುಲ್ಡೋಜರ್ ನ್ಯಾಯ ಎಂಬ ಹೊಸ ಆಕ್ರಮಣ ನಡೆಯುತ್ತಿದೆ. ಹೀಗೆ ಮುಸ್ಲಿಮರ ವಿರುದ್ಧ ಹಿಂದೂಗಳಲ್ಲಿ ದ್ವೇಷ ಮೂಡಿಸಲಾಗುತ್ತದೆ, ಅವರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲಾಗುತ್ತದೆ. ಇದೆಲ್ಲವನ್ನೂ ಹಿಂದುತ್ವದ ಹೆಸರಿನಲ್ಲಿ ನಡೆಸುವ ಅವರ ನಿಜವಾದ ದ್ವೇಷ ಇರುವುದು ಈ ಸಮಾಜದ ದಲಿತರು, ಹಿಂದುಳಿದವರ ಬಗ್ಗೆಯೇ ಆಗಿದೆ ಎಂಬುದು ಸ್ಪಷ್ಟ. ದಲಿತರು ಮತ್ತು ಆದಿವಾಸಿಗಳನ್ನು ಹಿಂದುತ್ವದ ಹೆಸರಿನಲ್ಲಿ ತಮ್ಮ ಬುಟ್ಟಿಗೆ ಬೀಳಿಸುವ ಹುನ್ನಾರವನ್ನು ಆರೆಸ್ಸೆಸ್ ನಡೆಸಿಕೊಂಡೇ ಬಂದಿದೆ.

ಝಲಕ್

ಬೂಟು

‘‘ಗಾಂಧಿ ತಾತನ ತೆಳ್ಳಗಿನ ಎದೆಗೆ ನಮ್ಮ ನೆಚ್ಚಿನ ಅಜ್ಜ ಹೊಡೆದ ಮೂರು ಗುಂಡುಗಳು, ಮರಳಿ ಸಿಗಬಹುದೇ ನಮಗೆ

- ದಿವ್ಯ ಸ್ಮರಣಿಕೆಯಾಗಿ ಪ್ರದರ್ಶಿಸಲು?’’

ಹೀಗೆಂದು ಹಂಬಲಿಸುತ್ತಿರುವರಂತೆ ಗೋಡ್ಸೆಯ ಮೊಮ್ಮಕ್ಕಳು,

ಮನುವಾದಿ ರಾಕೇಶ ವಕೀಲನ ಬೂಟು ಮರಳಿಸಬೇಕೆಂಬ

ಕೋರ್ಟಿನ ಆದೇಶದಿಂದ ಪುಳಕಿತರಾಗಿ.

-ಕರ್ಣ ಪಿ.

share
ಆರ್. ಜೀವಿ
ಆರ್. ಜೀವಿ
Next Story
X