Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಬಿಹಾರದ ಫಲಿತಾಂಶ ರಾಷ್ಟ್ರ ರಾಜಕಾರಣದಲ್ಲಿ...

ಬಿಹಾರದ ಫಲಿತಾಂಶ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರಲಿದೆಯೇ?

ಆರ್.ಜೀವಿಆರ್.ಜೀವಿ29 Oct 2025 12:02 PM IST
share
ಬಿಹಾರದ ಫಲಿತಾಂಶ ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ತರಲಿದೆಯೇ?

ರಾಷ್ಟ್ರ ರಾಜಕಾರಣದಲ್ಲಿ ಸದ್ಯದ ಅತಿದೊಡ್ಡ ಕುತೂಹಲ ಬಿಹಾರ ಚುನಾವಣೆ. ರಾಷ್ಟ್ರೀಯ ರಾಜಕೀಯಕ್ಕೂ ಬಿಹಾರ ಚುನಾವಣೆ ಬಹಳ ಮುಖ್ಯವಾಗಿರುವುದರಿಂದ, ಇಡೀ ದೇಶದ ಗಮನ ಈಗ ಈ ಪೂರ್ವಭಾರತದ ರಾಜ್ಯದ ಮೇಲಿದೆ.

ರಾಷ್ಟ್ರ ರಾಜಕೀಯದಲ್ಲಿ ಬಿಹಾರದ ಮಹತ್ವ, ಅಲ್ಲಿಂದ ಬಂದಿರುವ ಪ್ರಭಾವೀ ರಾಷ್ಟ್ರೀಯ ನಾಯಕರು, ದೇಶಾದ್ಯಂತ ಬದಲಾವಣೆಗೆ ಕಾರಣವಾದ ಬಿಹಾರ ನೆಲದಲ್ಲಿನ ಆಂದೋಲನಗಳು, ತನ್ನದೇ ಆದ ರಾಜಕೀಯದ ವೈಶಿಷ್ಟ್ಯ-ಇವೆಲ್ಲವುಗಳಿಂದಾಗಿ ಬಿಹಾರ ಈಗಲೂ ರಾಜಕೀಯವಾಗಿ ತನ್ನ ವಿಭಿನ್ನ ಗುರುತನ್ನು ಕಾಯ್ದುಕೊಂಡು ಬಂದಿದೆ.

ಪ್ರಜಾತಂತ್ರದ ತಾಯಿ ಎಂದೇ ಗುರುತಾಗಿರುವ ಬಿಹಾರದ ಚುನಾವಣೆ ಹಿನ್ನೆಲೆಯಲ್ಲಿ ಅದರ ರಾಜಕೀಯ ಹಾದಿಯ ಕಡೆ ಹೊರಳಿ ನೋಡುವ ಯತ್ನ ಇಲ್ಲಿದೆ.

ಭಾಗ - 1

ಬಿಹಾರದ ರಾಜಕೀಯ ರೂಪುಗೊಂಡಿರುವುದು ಆ ನೆಲಕ್ಕೇ ವಿಶಿಷ್ಟವಾಗಿರುವ ಸಾಮಾಜಿಕ ಸ್ವರೂಪ, ಚಳವಳಿಗಳು ಮತ್ತು ನಾಯಕತ್ವದ ಅಸ್ಮಿತೆಗಳ ಮೂಲಕ. ಬಿಹಾರವನ್ನು ಬಹಳ ಹಿಂದಿನಿಂದಲೂ ಭಾರತದ ರಾಜಕೀಯವಾಗಿ ಮಹತ್ವದ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅದರ ಸಂಕೀರ್ಣ ಜಾತಿ ಚಲನಶೀಲತೆ, ಸಾಮಾಜಿಕ ಚಳವಳಿಗಳ ಇತಿಹಾಸ ಮತ್ತು ಸಮ್ಮಿಶ್ರ ರಾಜಕೀಯವನ್ನು ರೂಪಿಸುವಲ್ಲಿನ ಪಾತ್ರ ಎಲ್ಲವೂ ಮಹತ್ವ ಪಡೆಯುತ್ತವೆ. ಹಾಗಾಗಿ, ಪ್ರತೀ ಬಿಹಾರ ಚುನಾವಣೆಯನ್ನು ರಾಷ್ಟ್ರೀಯ ಮನಸ್ಥಿತಿಯ ಮೇಲೆ ಪ್ರಭಾವ ಬೀರುವ ವಿದ್ಯಮಾನವಾಗಿಯೇ ನೋಡಲಾಗುತ್ತದೆ. ಇತರ ಹಲವು ರಾಜ್ಯಗಳಿಗಿಂತ ಭಿನ್ನವಾಗಿ, ಬಿಹಾರದಲ್ಲಿನ ಚುನಾವಣಾ ಫಲಿತಾಂಶ ಹೆಚ್ಚಾಗಿ ಮೈತ್ರಿಗಳು, ನಾಯಕತ್ವ ಸಮೀಕರಣಗಳು ಮತ್ತು ಕೇಂದ್ರ ಸರಕಾರದ ತಂತ್ರಗಳನ್ನು ರೂಪಿಸುವ ಅಂಶವಾಗುತ್ತದೆ. ದಶಕಗಳಿಂದಲೂ ಭೂಮಾಲಕ ಮೇಲ್ಜಾತಿಗಳ ಪ್ರಾಬಲ್ಯದಲ್ಲಿದ್ದ ವ್ಯವಸ್ಥೆಯಿಂದ ಹೆಚ್ಚು ಬಹುಮುಖಿ ಮತ್ತು ಸ್ಪರ್ಧಾತ್ಮಕ ರಾಜಕೀಯಕ್ಕೆ ಹೊರಳಿಕೊಂಡಿದ್ದೇ ಅದರ ಹೆಗ್ಗಳಿಕೆ. ಸಾಮಾಜಿಕ ಚಳವಳಿಗಳು, ಮೀಸಲಾತಿ ರಾಜಕೀಯ ಮತ್ತು ಪ್ರಾದೇಶಿಕ ನಾಯಕತ್ವದ ಬೆಳವಣಿಗೆ -ಇವೆಲ್ಲವೂ ಇವತ್ತಿನವರೆಗಿನ ಸನ್ನಿವೇಶವನ್ನು ರೂಪಿಸುವುದರ ಹಿಂದೆ ಕೆಲಸ ಮಾಡಿವೆ.

ಬಿಹಾರದ ರಾಜಕೀಯ ರೂಪಾಂತರ ಆಳವಾದ ಬೇರುಗಳನ್ನು ಹೊಂದಿದೆ. 1960ರ ದಶಕದವರೆಗೆ, ಅನೇಕ ಜಿಲ್ಲೆಗಳು ಮುಂದುವರಿದ ಜಾತಿಗಳ ದೊಡ್ಡ ಭೂಮಾಲಕರಿಂದ ನಿಯಂತ್ರಿಸಲ್ಪಟ್ಟವು. ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಕೂಡ ಅದು ಕಾಣಿಸುತ್ತಿತ್ತು. ಭೂಮಿ, ಸ್ಥಳೀಯ ಆಡಳಿತ ಮತ್ತು ಸಾಮಾಜಿಕ ಪ್ರತಿಷ್ಠೆಯೇ ಕೇಂದ್ರೀಕೃತವಾಗಿದ್ದ ಆ ಮಾದರಿಯನ್ನು ಮುರಿದದ್ದು ಮೂರು ಬೆಳವಣಿಗೆಗಳು. ಮೊದಲನೆಯದಾಗಿ, ಲೋಹಿಯಾ ಸಂಪ್ರದಾಯವನ್ನು ಅನುಸರಿಸಿದ ಚಿಂತಕರು ರಾಜ್ಯದಲ್ಲಿ ಸಂಪನ್ಮೂಲಗಳು ಮತ್ತು ಅಧಿಕಾರದ ಮರು ಹಂಚಿಕೆಯ ಮಹತ್ವವನ್ನು ಪ್ರತಿಪಾದಿಸಿದರು. ಈ ವಿಚಾರಗಳು ಬಿಹಾರದ ವಿದ್ಯಾರ್ಥಿಗಳು ಮತ್ತು ಹೋರಾಟಗಾರರಲ್ಲಿ ಹೆಚ್ಚು ಮನದಟ್ಟಾದ ಬಳಿಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆ ಮಹತ್ವ ಪಡೆಯಿತು. ಎರಡನೆಯದಾಗಿ, 1970ರ ದಶಕದ ಜೆಪಿ ಚಳವಳಿ ಸರ್ವಾಧಿಕಾರಿ ರಾಜಕೀಯದ ವಿರುದ್ಧ ಯುವ ಮತ್ತು ಸಾಮಾನ್ಯ ನಾಗರಿಕರ ದೊಡ್ಡ ಪಡೆಯನ್ನೇ ಕಟ್ಟಿತು. ಜೆಪಿ ಸ್ವಚ್ಛ ಸಾರ್ವಜನಿಕ ಜೀವನ, ಸಾಮೂಹಿಕ ಭಾಗವಹಿಸುವಿಕೆ ಮತ್ತು ಸಾಮಾನ್ಯ ಜನರು ರಾಜಕೀಯಕ್ಕೆ ಬರುವ ಅಗತ್ಯವನ್ನು ಒತ್ತಿ ಹೇಳಿದರು. ಮೂರನೆಯದಾಗಿ, ಕರ್ಪೂರಿ ಠಾಕೂರ್ ಮತ್ತಿತರರು ಪ್ರಾತಿನಿಧ್ಯದ ನಿಶ್ಚಿತ ಸ್ವರೂಪವನ್ನೇ ಬದಲಾಯಿಸುವ ದೃಢ ಕ್ರಮಗಳನ್ನು ಜಾರಿಗೆ ತಂದರು. ಬಿಹಾರದಲ್ಲಿ ಹಿಂದುಳಿದ ಜಾತಿಗಳಿಗೆ ಮೀಸಲಾತಿ ವಿಸ್ತರಿಸುವ ಕರ್ಪೂರಿ ಅವರ ಕ್ರಮ ಒಂದು ಪ್ರಮುಖ ಸಂಕೇತವಾಗಿತ್ತು. ಅದು ಹೊಸ ನಿರೀಕ್ಷೆಗಳನ್ನು ಮತ್ತು ಹೊಸ ರಾಜಕೀಯ ಸಾಧ್ಯತೆಯನ್ನು ಸೃಷ್ಟಿಸಿತು. ಮಂಡಲ್ ಯುಗದ ನೀತಿಗಳು ರಾಷ್ಟ್ರೀಯ ರಾಜಕಾರಣದಲ್ಲಿ ಬರುವ ಹೊತ್ತಿಗಾಗಲೇ, ಬಿಹಾರದಲ್ಲಿನ ನೀತಿಗಳು ರಾಜಕೀಯ ಪರಿವರ್ತನೆಗೆ ನೆಲವನ್ನು ಸಜ್ಜುಗೊಳಿಸಿದ್ದವು.

1990ರ ದಶಕದ ಆರಂಭದಲ್ಲಿ ಮಂಡಲ್ ಆಯೋಗದ ಶಿಫಾರಸುಗಳು ರಾಷ್ಟ್ರೀಯ ತಿರುವಿಗೆ ಕಾರಣವಾದಾಗ, ಬಿಹಾರದಲ್ಲಿ ಅವು ಹಿಂದುಳಿದ ಜಾತಿಗಳಿಗೆ ದೊಡ್ಡ ಶಕ್ತಿ ತುಂಬಿದವು. ಅದರಿಂದಾಗಿ ಪ್ರಾತಿನಿಧ್ಯಕ್ಕೆ ಮಹತ್ವ ಬಂದು, ಅದು ಮತಗಳನ್ನು ಗೆಲ್ಲಬಹುದಾದ ಚುನಾವಣಾ ವಿಷಯವಾಗಿ ರೂಪುಗೊಂಡಿತು. ಜಾತಿಯ ಮೂಲಕವೇ ನಾಯಕರು ಮುನ್ನೆಲೆಗೆ ಬರುವುದಕ್ಕೆ ಅದು ದಾರಿ ತೆರೆಯಿತು. ಅವಮಾನವನ್ನೇ ಹೆಮ್ಮೆಯಾಗಿ ಪರಿವರ್ತಿಸುವ ಲಾಲು ಪ್ರಸಾದ್ ಯಾದವ್ ಅವರ ಘನತೆಯ ರಾಜಕೀಯ, ನಿತೀಶ್ ಕುಮಾರ್ ಅವರ ಆಡಳಿತಾತ್ಮಕ ಆದರ್ಶ ಮತ್ತು ಸಾಮಾಜಿಕ ಗುರುತು, ರಾಮ್ ವಿಲಾಸ್ ಪಾಸ್ವಾನ್ ಅವರ ದಲಿತ ಅಸ್ಮಿತೆ ಇವೆಲ್ಲವೂ ಬಿಹಾರದ ರಾಜಕೀಯವನ್ನೇ ಬದಲಿಸಿದವು. ಲಾಲು ಅವರ ಭಾಷಣಗಳು, ಶೈಲಿ ಮತ್ತು ಇಮೇಜ್ ಅಧಿಕಾರದಿಂದ ಹೊರಗಿಡಲಾಗಿದ್ದ ಸಾಮಾನ್ಯ ಜನರನ್ನು ಆಕರ್ಷಿಸಿದವು. ಮತದಾರರೊಂದಿಗೆ ಸಂಪರ್ಕ ಸಾಧಿಸಲು ಅವರು ಹಾಸ್ಯ, ಕೋಪ ಮತ್ತು ವೈಯಕ್ತಿಕ ಕಥೆಗಳನ್ನು ಬಳಸಿದರು. ಸ್ಥಿರವಾದ ಯಾದವ ಮತಬ್ಯಾಂಕ್ ಅನ್ನು ಅವರು ಸೃಷ್ಟಿಸಿದರು ಮತ್ತು ಮೈತ್ರಿಗಳನ್ನು ಕಟ್ಟಿದರು. ವಿಶೇಷವಾಗಿ ಮುಸ್ಲಿಮ್ ಮತದಾರರೊಂದಿಗೆ ಬಾಂಧವ್ಯ ಸಾಧಿಸಿದ ಲಾಲು ಅವರ ರಾಜಕೀಯಕ್ಕೆ ಈ ದೇಶದ ರಾಜಕಾರಣದಲ್ಲಿ ಸಾಂಕೇತಿಕ ಮಹತ್ವವಿದೆ. ಇನ್ನು ನಿತೀಶ್ ಕುಮಾರ್ ಕೂಡ ಅದೇ ರಾಜಕೀಯ ಸಂಪ್ರದಾಯದಿಂದ ಹೊರಹೊಮ್ಮಿದರು. ಆದರೆ ಅವರು ಸಾಮಾಜಿಕ ಅಸ್ಮಿತೆ ಮತ್ತು ಆಡಳಿತದಂತಹ ವಿಭಿನ್ನ ಭರವಸೆಗಳ ಮೂಲಕ ಗಮನ ಸೆಳೆದರು. ಕುರ್ಮಿಗಳು ಮತ್ತು ಕೊಯೇರಿಗಳು ಮತ್ತು ಅನೇಕ ಇಬಿಸಿಗಳ ಮನಗೆಲ್ಲುವಲ್ಲಿ ಅವರು ಯಶಸ್ವಿಯಾದರು. ಹಿಂದುಳಿದ ವರ್ಗದ ನಾಯಕರು ಸಹ ಪರಿಣಾಮಕಾರಿಯಾಗಿ ಆಡಳಿತ ನಡೆಸಬಲ್ಲರು ಎಂದು ತೋರಿಸಿಕೊಟ್ಟದ್ದು ನಿತೀಶ್ ಅವರ ರಾಜಕೀಯ ಕೌಶಲ್ಯ. ರಾಮ್ ವಿಲಾಸ್ ಪಾಸ್ವಾನ್ ಅವರ ರಾಜಕೀಯ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದಲಿತ ಗುರುತು ಗೋಚರಿಸುವಂತೆ ಮಾಡಿತು. ಅವರು ಸಮುದಾಯಗಳನ್ನು ಸಂಘಟಿಸಿದರು, ಮೈತ್ರಿಗಳಲ್ಲಿ ಮಹತ್ವದ ಪಾತ್ರ ವಹಿಸಿದರು ಮತ್ತು ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಿದರು. ಪಾಸ್ವಾನ್ ಅವರ ಮಧ್ಯಸ್ಥಿಕೆಗಳ ಪರಿಣಾಮವಾಗಿ ದಲಿತ ವಿಷಯಗಳು ರಾಜಕೀಯ ಅಜೆಂಡಾದ ಭಾಗವಾದವು. ಮತ್ತದು ಬಿಹಾರದ ಸಮ್ಮಿಶ್ರ ಅಂಕಗಣಿತದಲ್ಲಿ ದಲಿತ ಮತದಾರರನ್ನು ಒಂದು ವಿಶಿಷ್ಟ ಶಕ್ತಿಯನ್ನಾಗಿ ಮಾಡಿತು.

ಈ ನಾಯಕರು ಒಟ್ಟಾಗಿ ಬಿಹಾರದ ರಾಜಕೀಯ ಸನ್ನಿವೇಶವನ್ನೇ ಪುನರ್‌ರಚಿಸಿದರು. ಅಧಿಕಾರ ಬೆರಳೆಣಿಕೆಯಷ್ಟೇ ಮೇಲ್ಜಾತಿ ಕುಟುಂಬಗಳ ಆಸ್ತಿಯಾಗಿ ಉಳಿಯುವುದು ತಪ್ಪಿತು. ತಮ್ಮದೇ ಆದ ಭಾಷೆಯನ್ನು ಮಾತನಾಡುವ ಮತ್ತು ತಮ್ಮ ಹಕ್ಕುಗಳನ್ನು ಮಂಡಿಸುವ ನಾಯಕರು ಮುನ್ನೆಲೆಗೆ ಬರುವಂತಾಯಿತು. ಬಿಹಾರದ ಸಾಮಾಜಿಕ ಸಂಯೋಜನೆ ಹೇಗಿದೆಯೆಂದರೆ, ಸಮ್ಮಿಶ್ರ ರಾಜಕೀಯದ ಅಗತ್ಯವನ್ನು ಅದು ಸ್ವತಃ ಪ್ರತಿಪಾದಿಸುತ್ತದೆ. ಯಾವುದೇ ಒಂದು ಜಾತಿ ಅಥವಾ ಸಮುದಾಯ ಏಕಾಂಗಿಯಾಗಿ ಗೆಲ್ಲಲು ಸಾಧ್ಯವಿಲ್ಲದ ನೆಲ ಬಿಹಾರ. ಯಾದವರು ಮಧ್ಯ ಮತ್ತು ದಕ್ಷಿಣ ಗ್ರಾಮೀಣ ಜಿಲ್ಲೆಗಳಲ್ಲಿ ಅಲ್ಲದೆ ಅನೇಕ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಕುರ್ಮಿಗಳು ಮತ್ತು ಕೊಯೇರಿಗಳು ಅಂದರೆ ಕುಶ್ವಾಹರು ಕೃಷಿ ಹೆಚ್ಚಿರುವ ಜಿಲ್ಲೆಗಳಲ್ಲಿ ಪ್ರಬಲರಾಗಿದ್ಧಾರೆ. ಬಿಹಾರದ ಜನಸಂಖ್ಯೆಯ ಹೆಚ್ಚಿನ ಪಾಲು ಒಬಿಸಿಗಳು ಮತ್ತು ಇಬಿಸಿಗಳಿಂದ ಕೂಡಿದೆ. ಹಾಗಾಗಿ, ಮತದಾರರ ಬಹುಭಾಗ ಈ ಗುಂಪುಗಳಿಂದಲೇ ರೂಪುಗೊಳ್ಳುತ್ತದೆ. ಅತ್ಯಂತ ಹಿಂದುಳಿದ ವರ್ಗಗಳು ಅಂದರೆ ಇಬಿಸಿಗಳು ರಾಜ್ಯದಾದ್ಯಂತ ಹರಡಿಕೊಂಡಿವೆ. ಸಾಮೂಹಿಕವಾಗಿ ದೊಡ್ಡದಾಗಿದ್ದರೂ ಈ ವರ್ಗ ಛಿದ್ರಗೊಂಡಿದೆ ಮತ್ತು ಅವರ ಮತಗಳು ಬದಲಾಗುತ್ತವೆ. ನಿಕಟ ಪೈಪೋಟಿಗೂ ಕಾರಣವಾಗುತ್ತವೆ. ದಲಿತರು ಕೂಡ ಮತದಾರರಲ್ಲಿ ಗಣನೀಯ ಭಾಗವಾಗಿದ್ದಾರೆ ಮತ್ತು ಅವರು ಹೆಚ್ಚಾಗಿ ನಿರ್ದಿಷ್ಟ ಗ್ರಾಮೀಣ ಪ್ರದೇಶಗಳ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ಮುಸ್ಲಿಮರು ಈಶಾನ್ಯದ ಕೆಲವು ಭಾಗಗಳಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ನಿರ್ಣಾಯಕರಾಗಿ ನಿಲ್ಲುತ್ತಾರೆ. ಮುಂಚೂಣಿ ಜಾತಿಗಳು ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ, ಕೆಲ ಪ್ರದೇಶಗಳಲ್ಲಿ ಸ್ಥಳೀಯ ಪ್ರಭಾವ ಹೊಂದಿವೆ. ರಾಜಕೀಯ ಪಕ್ಷಗಳು ಈ ಬಹು ಗುಂಪುಗಳನ್ನು ಒಳಗೊಳ್ಳುವ ಒಕ್ಕೂಟಗಳನ್ನು ನಿರ್ಮಿಸುವ ಮೂಲಕ ಗೆಲ್ಲುತ್ತವೆ. ಅದಕ್ಕಾಗಿಯೇ ಅಭ್ಯರ್ಥಿ ಆಯ್ಕೆ, ಸ್ಥಳೀಯ ಮೈತ್ರಿಗಳು ಮುಖ್ಯವಾಗುತ್ತವೆ. ಪಕ್ಷಗಳು ಎಂದಿಗೂ ಏಕರೂಪದ ಮತದಾರರನ್ನು ನೆಚ್ಚಿರಲು ಸಾಧ್ಯವಿಲ್ಲ. ಬದಲಿಗೆ ಅವು ಜಾತಿ ಆಧಾರದ ಮೇಲೆ ಸ್ಥಾನಗಳನ್ನು ನಿರ್ಧರಿಸುವುದು ಮತ್ತು ನಿರ್ದಿಷ್ಟ ಗುಂಪುಗಳಿಗೆ ನಿರ್ದಿಷ್ಟ ಕೊಡುಗೆಗಳನ್ನು ಘೋಷಿಸುವುದು ಅನಿವಾರ್ಯವಾಗುತ್ತದೆ.

ಬಿಹಾರದ ರಾಜಕಾರಣದಲ್ಲಿ ಗಮನಿಸಬೇಕಾದ ಇನ್ನೊಂದು ಮಹತ್ವದ ಸಂಗತಿಯೆಂದರೆ, ಒಂದು ಪ್ರದೇಶದಂತೆ ಇನ್ನೊಂದು ಪ್ರದೇಶದ ರಾಜಕೀಯ ಒಲವು ಇರುವುದಿಲ್ಲ ಎನ್ನುವುದು. ಅವು ವಿಭಿನ್ನ ತರ್ಕಗಳ ಮೇಲೆ ಚುನಾವಣೆಯಲ್ಲಿ ಪಾತ್ರ ವಹಿಸುತ್ತವೆ ಮತ್ತು ಅದಕ್ಕೆ ತಕ್ಕಂತೆ ಪಕ್ಷಗಳು ಪ್ರಚಾರಗಳನ್ನು ರೂಪಿಸಬೇಕಾಗುತ್ತದೆ. ಮೊದಲನೆಯದಾಗಿ, ಸೀಮಾಂಚಲ್. ಇದರಲ್ಲಿ ಕಿಶನ್‌ಗಂಜ್, ಪೂರ್ಣಿಯಾ, ಅರಾರಿಯಾ, ಕತಿಹಾರ್ ಜಿಲ್ಲೆಗಳು ಬರುತ್ತವೆ. ಹೆಚ್ಚಿನ ಮುಸ್ಲಿಮ್ ಜನಸಂಖ್ಯೆ ಇಲ್ಲಿನ ನಿರ್ಣಾಯಕ ಅಂಶ. ಎರಡನೆಯದಾಗಿ, ಮಧ್ಯ ಬಿಹಾರ ಮತ್ತು ಮಗಧ. ಪಾಟ್ನಾ, ನಳಂದ, ಗಯಾ ಈ ವಲಯದಲ್ಲಿ ಬರುತ್ತವೆ. ನಗರ ಮತ್ತು ಗ್ರಾಮೀಣ ಮತದಾರರ ಮಿಶ್ರಣ ಇಲ್ಲಿನ ವಿಶಿಷ್ಟತೆ. ಅಭ್ಯರ್ಥಿಯ ಗುಣ ನೋಡಿ ನಿರ್ಧರಿಸಬಲ್ಲ ಪ್ರದೇಶಗಳು ಇವಾಗಿವೆ. ಮಾಧ್ಯಮ ನಿರೂಪಣೆಗಳು ಮತ್ತು ಸ್ಥಳೀಯ ಅಭಿವೃದ್ಧಿ ಯೋಜನೆಗಳು ನಗರ ಮತದಾರರ ಮೇಲೆ ಪ್ರಭಾವ ಬೀರುತ್ತವೆ. ಆದರೆ ಗ್ರಾಮೀಣ ಪ್ರದೇಶಗಳ ಮತದಾರರು ಜಾತಿ ಸಂಬಂಧಗಳಿಗೆ ಒತ್ತು ನೀಡುತ್ತಾರೆ. ಮೂರನೆಯದಾಗಿ, ಉತ್ತರ ಮತ್ತು ವಾಯವ್ಯ ಬಿಹಾರ. ಮೇಲ್ಜಾತಿಯವರು ಮತ್ತು ಯಾದವೇತರ ಒಬಿಸಿ ಸಮುದಾಯದವರು ಬಿಜೆಪಿ ಮತ್ತು ಮಿತ್ರಪಕ್ಷಗಳಿಗೆ ಹೆಚ್ಚು ಅನುಕೂಲಕರವಾಗಿದ್ದಾರೆ. ಸ್ಥಳೀಯವಾಗಿ ಪಕ್ಷಗಳ ಪ್ರಭಾವ ಮತ್ತು ದೀರ್ಘಕಾಲದ ಸಾಮಾಜಿಕ ಸಂಬಂಧಗಳು ಮತದಾನದ ಮೇಲೆ ಪ್ರಭಾವ ಬೀರುತ್ತವೆ. ನಾಲ್ಕನೆಯದಾಗಿ, ದಕ್ಷಿಣ ಮಧ್ಯ. ಇದರಲ್ಲಿ ಭೋಜ್‌ಪುರ, ರೋಹ್ತಾಸ್, ಔರಂಗಾಬಾದ್ ಬರುತ್ತವೆ. ಪ್ರಬಲ ಸ್ಥಳೀಯ ನಾಯಕರು, ಜಾತಿ ಪಂಚಾಯತ್‌ಗಳು ಮತ್ತು ಐತಿಹಾಸಿಕ ಭೂ ಸಂಬಂಧಗಳು ಇಲ್ಲಿ ಫಲಿತಾಂಶಗಳನ್ನು ರೂಪಿಸುತ್ತವೆ. ಪಕ್ಷಗಳು ಸ್ಥಳೀಯ ಸಮೀಕರಣಗಳು ಮತ್ತು ಅಭ್ಯರ್ಥಿಗಳನ್ನು ಹೇಗೆ ನಿರ್ಧರಿಸುತ್ತವೆ ಎಂಬುದರ ಮೇಲೆ ಫಲಿತಾಂಶ ಅವಲಂಬಿತವಾಗಿರುತ್ತದೆ. ಐದನೆಯದಾಗಿ, ಜಾರ್ಖಂಡ್ ಗಡಿ ಮತ್ತು ಬುಡಕಟ್ಟು ಪ್ರದೇಶಗಳು. ಭೂಮಿ, ಅರಣ್ಯ ಹಕ್ಕುಗಳು ಮತ್ತು ಸ್ಥಳಾಂತರದಂತಹ ಸ್ಥಳೀಯ ಸಮಸ್ಯೆಗಳು ಪ್ರಾಬಲ್ಯ ಹೊಂದಿವೆ. ಇಲ್ಲಿ ಸಣ್ಣ ಏರಿಳಿತಗಳು ಕೂಡ ನಿಕಟ ಸ್ಪರ್ಧೆಗಳಲ್ಲಿ ಸ್ಥಾನಗಳ ಒಟ್ಟು ಸಂಖ್ಯೆಯನ್ನೇ ಬದಲಾಯಿಸಬಹುದು.

1970ರ ದಶಕದಿಂದಲೂ ಬಿಹಾರದ ರಾಜಕೀಯದಲ್ಲಿ ಸಾಮಾಜಿಕ ನ್ಯಾಯ ಚಳವಳಿಗಳು ಪಾತ್ರ ವಹಿಸಿವೆ. ಸಂಪೂರ್ಣ ಕ್ರಾಂತಿಯನ್ನು ಪ್ರಾರಂಭಿಸಿದ ಜಯಪ್ರಕಾಶ್ ನಾರಾಯಣ್ ಅವರಂತಹ ನಾಯಕರ ಉದಯ ಬಿಹಾರವನ್ನು ರಾಜಕೀಯ ಪ್ರಯೋಗಗಳಿಗೆ ನೆಲವಾಗಿಸಿತು. ನಂತರ, ಲಾಲು ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಅವರಂತಹ ನಾಯಕರು ಜಾತಿ ಗುರುತುಗಳು, ಹಿಂದುಳಿದ ವರ್ಗಗಳ ಸಬಲೀಕರಣ ಮತ್ತು ಪ್ರಾದೇಶಿಕ ಆಕಾಂಕ್ಷೆಗಳ ಸುತ್ತಲಿನ ರಾಜಕೀಯದೊಂದಿಗೆ ಈ ಪರಂಪರೆ ಮುಂದುವರಿಸಿದರು. ಜೆಪಿ ಚಳವಳಿಯಿಂದ ಅಡ್ವಾಣಿ ರಥಯಾತ್ರೆವರೆಗೆ, ಮೊನ್ನೆ ನಡೆದ ರಾಹುಲ್ ಗಾಂಧಿಯವರ ಮತ ಅಧಿಕಾರ ಯಾತ್ರೆಯವರೆಗೆ, ಬಿಹಾರದಲ್ಲಿನ ಆಂದೋಲನಗಳು ರಾಷ್ಟ್ರೀಯ ರಾಜಕೀಯದ ಮೇಲೆ ಬೀರಿರುವ ಪ್ರಭಾವ ದೊಡ್ಡದು. 1970ರ ದಶಕದಲ್ಲಿ ವಿದ್ಯಾರ್ಥಿಗಳ ನೇತೃತ್ವದ ಬಿಹಾರ ಚಳವಳಿಯಿಂದ ಹಿಡಿದು, ಸಮಷ್ಟಿಪುರದಲ್ಲಿ ಲಾಲ್ ಕೃಷ್ಣ ಅಡ್ವಾಣಿ ಅವರ ಅಯೋಧ್ಯೆ ರಥಯಾತ್ರೆಯನ್ನು ಅಂದಿನ ಮುಖ್ಯಮಂತ್ರಿ ಲಾಲು ಯಾದವ್ ಅವರು ತಡೆದು ನಿಲ್ಲಿಸುವವರೆಗೆ, ಬಿಹಾರ ದೊಡ್ಡ ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಈ ಘಟನೆಗಳು ರಾಷ್ಟ್ರ ರಾಜಕೀಯದಲ್ಲಿ ಉಂಟುಮಾಡಿದ ಪರಿಣಾಮಗಳು ಗಮನಾರ್ಹ. ಅವು ಪ್ರಮುಖ ಬಿರುಕುಗಳಿಗೆ ಕಾರಣವಾದ ಪ್ರತಿಕ್ರಿಯೆಗಳ ಸರಮಾಲೆ ಯನ್ನೇ ಹುಟ್ಟುಹಾಕಿದ್ದಿದೆ. ಆಡಳಿತ ಪಕ್ಷಗಳನ್ನು ಅಧಿಕಾರದಿಂದ ಕೆಳಗಿಳಿಸಿದ್ದಿದೆ. ಕೆಲವೊಮ್ಮೆ ಅಸ್ಥಿರ ಮೈತ್ರಿಗಳ ಉದಯಕ್ಕೂ ಕಾರಣವಾದದ್ದಿದೆ.

share
ಆರ್.ಜೀವಿ
ಆರ್.ಜೀವಿ
Next Story
X