ವಿಜಯನಗರ | ಹಂಪಿಗೆ ಪ್ರವಾಸ ಬಂದಿದ್ದ ಮಹಾರಾಷ್ಟ್ರದ ಯುವಕ ನಾಪತ್ತೆ

ವಿಜಯನಗರ: ಹಂಪಿಗೆ ಪ್ರವಾಸ ಬಂದಿದ್ದ ಮಹಾರಾಷ್ಟ್ರ ಮೂಲದ 20 ವರ್ಷದ ಯುವಕನೋರ್ವ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಮಹಾರಾಷ್ಟ್ರ ಕೊಲ್ಲಾಪುರ ನಿವಾಸಿ ಕ್ಯಾಲಿ ಕುಮಾರ್ ಪ್ರಜಾಪತಿ ಎಂಬವರ ಪುತ್ರ ಆದಿತ್ಯ ಪ್ರಜಾಪತಿ(20) ನಾಪತ್ತೆಯಾದ ಯುವಕ.
ದೀಪಾವಳಿ ಹಬ್ಬದ ಪ್ರಯುಕ್ತ ರಜೆಯಿದ್ದ ಕಾರಣ ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಹಂಪಿ ವೀಕ್ಷಣೆಗೆ ಬಂದಿದ್ದ ಆದಿತ್ಯ ಪ್ರಜಾಪತಿ ಕಳೆದ ಎರಡು ದಿನದಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹಂಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸರು ಆದಿತ್ಯರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
Next Story





