ತಾಯಿ ನಿಧನದ ನಡುವೆಯೂ ಎಸೆಸೆಲ್ಸಿಯಲ್ಲಿ ಸಾಧನೆ: ಹೊಸಪೇಟೆಯ ಸಬಾ ಫರೀನ್‌ಗೆ 95.36 ಅಂಕ

ಹೊಸಪೇಟೆ / ವಿಜಯನಗರ : ಹೊಸಪೇಟೆಯ ಮಹಾವೀರ ಶಾಲೆಯ ವಿದ್ಯಾರ್ಥಿನಿಯಾಗಿರುವ ಸಬಾ ಫರೀನ್ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ರಲ್ಲಿ 596 (95.36) ಅಂಕ ಪಡೆದಿದ್ದಾರೆ.
ಎಸೆಸೆಲ್ಸಿ ಪರೀಕ್ಷೆಗೆ ಕೇವಲ 10 ದಿನಗಳು ಬಾಕಿ ಇರುವಾಗಲೇ ತನ್ನ ತಾಯಿ ಜುಬೇದಾ ಅವರನ್ನು ಕಳೆದುಕೊಂಡ ಸಬಾ ಫರೀನ್ ಅವರು ಪರೀಕ್ಷೆಗೆ ತಯಾರಿ ನಡೆಸಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.
ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಸ್ಥಳೀಯರು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Next Story




