ಮೈಲಾರ: ದೇವಸ್ಥಾನ ಆವರಣದಲ್ಲಿ ಕುಸಿದು ಬಿದ್ದು ವೃದ್ಧ ಮೃತ್ಯು
ಹೂವಿನಹಡಗಲಿ: ಹುಣ್ಣಿಮೆ ಆಚರಣೆಗೆ ಬಂದಿದ್ದ ಭಕ್ತರೊಬ್ಬರು ಹೃದಯಾಘಾತದಿಂದ ಮೃತಪಟ್ಟ ಘಟನೆ ತಾಲೂಕಿನ ಧಾರ್ಮಿಕ ಕ್ಷೇತ್ರ ಮೈಲಾರದ ಶ್ರೀಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸಂಭವಿಸಿದೆ.
ಗದಗ ಜಿಲ್ಲೆಯ ಬೂದಿಹಾಳ ಗ್ರಾಮದ ರಾಮಣ್ಣ ಯಲ್ಲಪ್ಪ ಚಳಕೇರಿ (80) ಮೃತಪಟ್ಟವರು.
ಅವರು ದೇವಸ್ಥಾನದ ಆವರಣದಲ್ಲಿ ಚಾಟಿ ಹರಕೆ ತೀರಿಸುವ ಸಮಯದಲ್ಲೆ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Next Story





