Harapanahalli | ಎಸ್‌ಐಆರ್ ಪ್ರಕ್ರಿಯೆ ಯಶಸ್ವಿಯಾಗಿ ನಿರ್ವಹಿಸಿದ ಬಿಎಲ್ಓ ನಾಗರಾಜ್‌ಗೆ ಸನ್ಮಾನ

ಹರಪನಹಳ್ಳಿ: ಎಸ್‌ಐಆರ್ (SIR) ಪ್ರಕ್ರಿಯೆಯನ್ನು ಶೇ.100ರಷ್ಟು ಅಚ್ಚುಕಟ್ಟಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸಿದ ನಿಟ್ಟೂರು ಬಸಾಪುರದ ಬೂತ್ ಸಂಖ್ಯೆ 163ರ ಬಿಎಲ್ಓ ಅಧಿಕಾರಿ ಎಸ್.ಎಂ. ನಾಗರಾಜ್ ಅವರನ್ನು ಸನ್ಮಾನಿಸಲಾಯಿತು.
ಹರಪನಹಳ್ಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ವಿ. ಅಂಜಿನಪ್ಪ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಪೂಜಾರ್ ಕೃಷ್ಣ ನಾಯ್ಕ್ ಅವರು ನಾಗರಾಜ್ ಅವರ ಕಾರ್ಯವನ್ನು ಶ್ಲಾಘಿಸಿ ಗೌರವಿಸಿದರು.
ಚುನಾವಣಾ ಸಂಬಂಧಿತ ಕಾರ್ಯಗಳಲ್ಲಿ ಶುದ್ಧತೆ, ನಿಷ್ಠೆ ಮತ್ತು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿದ ಅಧಿಕಾರಿಗಳಿಗೆ ಈ ರೀತಿಯ ಸನ್ಮಾನಗಳು ಪ್ರೇರಣೆಯಾಗಲಿವೆ. ಎಸ್‌ಐಆರ್ ಪ್ರಕ್ರಿಯೆಯಲ್ಲಿ ನಿಖರತೆ ಮತ್ತು ಸಮರ್ಪಣಾಭಾವದಿಂದ ಸೇವೆ ಸಲ್ಲಿಸಿದ ನಾಗರಾಜ್ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಲಾಟಿ ದಾದಾಪೀರ್, ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಟಿ. ಹನುಮಂತಪ್ಪ, ಶಿಕ್ಷಕ ಸೋಮಣ್ಣ, ಡಿ.ಕೆ. ನದೀಮ್ ಅಕ್ರಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story




