ಹರಪನಹಳ್ಳಿ | ಗೋಕಟ್ಟೆಯಲ್ಲಿ ಈಜಲು ಹೋದ ಬಾಲಕ ಮೃತ್ಯು

ಹರಪನಹಳ್ಳಿ: ತಾಲೂಕಿನ ರಾಗಿಮಸಲವಾಡ ಗ್ರಾಮದಲ್ಲಿ ಭಾನುವಾರ ಗೋಕಟ್ಟೆಗೆ ಈಜಲು ಹೋದ 11 ವರ್ಷದ ಬಾಲಕನೊರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.
ರಾಗಿಮಸಲವಾಡ ಗ್ರಾಮದ ನಿವಾಸಿ ಸಿದ್ದಾರ್ಥ (11) ಮೃತಪಟ್ಟ ಬಾಲಕ. ಈತ ತನ್ನ ಮೂವರು ಸ್ನೇಹಿತರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಗೋಕಟ್ಟೆಗೆ ಈಜಲು ಹೋದ ವೇಳೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಸಿದ್ದಾರ್ಥನ ಜೊತೆಗಿದ್ದ ಇನ್ನುಳಿದ ಇಬ್ಬರು ಬಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಹಲುವಾಗಲು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





