ಹರಪನಹಳ್ಳಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಹರಪನಹಳ್ಳಿ: ತಾಲೂಕಿನ ವಿವಿಧೆಡೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಎಂ.ಪಿ ಲತಾ ಮಲ್ಲಿಕಾರ್ಜುನ್ ಬುಧವಾರ ಚಾಲನೆ ನೀಡಿದರು.
ತಾಲೂಕಿನ ಉದಯಪುರ, ಉದ್ದಗಟ್ಟಿ ಸಣ್ಣತಾಂಡ ಹಾಗೂ ಉದ್ದಗಟ್ಟಿ ಗ್ರಾಮಗಳ ಎಸ್ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.
ಬಳಿಕ ಶಾಂತಿನಗರ, ವಿ.ಕೊರಚರಹಟ್ಟಿ, ಅರೆಮಜ್ಜಿಗೇರಿ ಹಾಗೂ ಕಂಚಿಕೇರಿ ಗ್ರಾಮಗಳ ಎಸ್ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಹಾಗೂ ಕುಂಚೂರು ಗ್ರಾಮದಿಂದ ಅರಸನಾಳು ಗ್ರಾಮಕ್ಕೆ ಸೇರುವ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.
ನಂತರ ಬೈರಾಪುರ ಗ್ರಾಮದ ಎಸ್ಸಿ ಕಾಲೋನಿಗಳಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಇಇ ಕುಭೇಂದ್ರನಾಯ್ಕ್, ಇಂಜಿನಿಯರ್ ಸುಭಾಷ್ ನಾಯ್ಕ್, ಶಾಸಕರ ಆಪ್ತ ಸಹಾಯಕ ಮತ್ತೂರು ಬಸವರಾಜ, ಮಜ್ಜಿಗೇರಿ ವಿ.ದುರುಗಪ್ಪ, ಕರಿಯಲ್ಲಪ್ಪ, ಚೌಡಪ್ಪ, ರವಿಕುಮಾರ, ಅರಸನಾಳು ಗಿರಿರಾಜರೆಡ್ಡಿ, ಲಕ್ಕಪ್ಪ, ಮಾರುತಿ, ಪರಸಪ್ಪ, ಬೈರಾಪುರ ಚಿದಾನಂದ, ತೆಲಗಿ ಸಂಕ್ರಪ್ಪ ಪ್ರಕಾಶ, ಉದ್ಘಟ್ಟಿ ಲಕ್ಷ್ಮಣನಾಯ್ಕ್, ಪ್ರಕಾಶನಾಯ್ಕ್, ಕುಂಚೂರು ಶೌಕತ್ ಸೇರಿದಂತೆ ಇತರರು ಇದ್ದರು.






