ಹರಪನಹಳ್ಳಿ | ಸರಕಾರಿ ನೌಕರರ ಸಂಘದಿಂದ ಹರಪನಹಳ್ಳಿ ಪತ್ರಕರ್ತರಿಗೆ ಸನ್ಮಾನ

ಹರಪನಹಳ್ಳಿ : ಪತ್ರಕರ್ತರು ಶೋಷಿತರ ಧ್ವನಿಯಾಗಿ ವರದಿಗಳನ್ನು ಬಿತ್ತರಿಸಿ, ಆಳುವ ಸರ್ಕಾರಗಳ ಕಣ್ತೆರೆಸುವ ನಿಟ್ಟಿನಲ್ಲಿ ವರದಿಗಾರಿಕೆಗೆ ಒತ್ತುಕೊಡಬೇಕು. ಜೊತೆಗೆ ದಿಟ್ಟತನ ಬೆಳೆಸಿಕೊಳ್ಳಬೇಕು ಎಂದು ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿಗೆ ಆಯ್ಕೆಯಾಗಿರುವ ಪದಾಧಿಕಾರಿಗಳನ್ನು ನಗರದ ಸಮತಾ ರೆಸಾರ್ಟ್ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಹರಪನಹಳ್ಳಿ ತಾಲೂಕು ಘಟಕ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ, ಪ್ರೌಢಶಾಲೆ ಸಹಶಿಕ್ಷಕರ ಸಂಘ, ಸಮತಾ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶುಕ್ರವಾರ ಸನ್ಮಾನಿಸಿ ಅವರು ಮಾತನಾಡಿದರು.
ಸತ್ಯಕ್ಕೆ ದೂರವಾಗಿರುವ ಸುದ್ದಿಗಳಿಂದ ಪತ್ರಕರ್ತರು ದೂರವಿರಬೇಕು. ಸಮಾಜ ಮತ್ತು ಸರ್ಕಾರದ ನಡುವೆ ಉತ್ತಮ ಸೇತುವೆಯಾಗಿ ಕೆಲಸ ಮಾಡುವ ಗುಣವನ್ನು ಪತ್ರಕರ್ತರು ರೂಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎನ್.ಜಿ.ಮನೋಹರ ಅವರು ಉದ್ಘಾಟಿಸಿದರು.
ಹಿರಿಯ ಪತ್ರಕರ್ತರಾದ ಕೆ.ಉಚ್ಚೆಂಗೆಪ್ಪ, ಎ.ನಾಗೇಂದ್ರಪ್ಪ, ಪಟ್ನಾಮದ ವೆಂಕಟೇಶ್ ಅವರು ಪತ್ರಕರ್ತರು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ವಿಚಾರಗಳ ಬಗ್ಗೆ ಮಾತನಾಡಿದರು
ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ಷರೀಫ್, ಪ್ರೌಢಶಾಲೆ ಸಹಶಿಕ್ಷಕರ ಸಂಘದ ಅಧ್ಯಕ್ಷ ಗುರುಮೂರ್ತಿ, ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಟಿ.ಎಚ್.ಎಂ.ಲತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕಮ್ಮತ್ತರ ಅಂಜಿನಪ್ಪ, ತಾಲ್ಲೂಕು ಉಪಾಧ್ಯಕ್ಷ ಸಂಗಯ್ಯ, ಶಿಕ್ಷಕರಾದ ವೀರಪ್ಪ, ಪಿ.ಸುಬ್ಬಣ್ಣ, ಇಸ್ಮಾಯಿಲ್, ಗಿರಿರಾಜ್, ಜಮಾಲುದ್ದಿನ್, ನಾಗಪ್ಪ, ಶೋಭಾಕುಮಾರಿ, ಹುಸೇನ್ ಭಾಷ, ಜಿ.ಕರಿಬಸಪ್ಪ, ಡಿ.ವಿಶ್ವನಾಥ, ಬಿ.ವೈ.ದುರುಗೇಶ್, ಎ.ವೆಂಕಟರಾಜು, ನಾಗಭೂಷಣ, ಗುಡಿಹಳ್ಳಿ ಭೋವಿ ಮಂಜುನಾಥ, ಕವಸರ ಬಸವರಾಜ, ದೊಡ್ಡಬಸವರಾಜ, ಶಬ್ಬೀರ, ರುದ್ರಮುನಿ, ಮೈಲಾರಿ, ಹುಲಿಯಪ್ಪನವರ್ ಬಸವರಾಜ, ತಿರುಮಲ, ಕುಂಬಾರ ಬಸವರಾಜ, ಅಶೋಕ, ಚಿಗಟೇರಿ ಪರಶುರಾಮ, ಶಶಿಕುಮಾರ, ಎಲ್.ಪ್ರಕಾಶನಾಯ್ಕ, ಹುಲಿರಾಜ್ ಇತರರಿದ್ದರು.







