Harapanahalli | ಮೇಘರಾಜ್‌ಗೆ ಮೈಸೂರು ವಿವಿಯಿಂದ ಪಿಎಚ್‌ಡಿ

ಹರಪನಹಳ್ಳಿ : ತಾಲೂಕಿನ ಚಿಕ್ಕಬ್ಬಳ್ಳಿ ಗ್ರಾಮದ ಅರಸೀಕೆರೆ ಮೇಘರಾಜ್ ಅವರಿಗೆ ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ಪ್ರದಾನ ಮಾಡಲಿದೆ.
ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಕೃಷ್ಣ ಹೊಂಬಳ ಅವರ ಮಾರ್ಗದರ್ಶನದಲ್ಲಿ ಮೇಘರಾಜ್ ಅವರು “ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡದವರ ಅಭಿವೃದ್ಧಿಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಪಾತ್ರ: ವಿಶೇಷವಾಗಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ 2010ರಿಂದ 2020ರವರೆಗಿನ ಒಂದು ವಿಮರ್ಶಾತ್ಮಕ ಅಧ್ಯಯನ” ಎಂಬ ವಿಷಯದ ಕುರಿತು ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಸಮೀಪದ ಚಿಕ್ಕಬ್ಬಳ್ಳಿ ಗ್ರಾಮದ ರಾಮಪ್ಪ ಹಾಗೂ ನೀಲಮ್ಮ ದಂಪತಿಯ ಪುತ್ರರಾಗಿರುವ ಮೇಘರಾಜ್ ಅವರ ಸಂಶೋಧನಾ ಪ್ರಬಂಧವನ್ನು ಮೌಲ್ಯಮಾಪನ ಮಾಡಿದ ಮೈಸೂರು ವಿಶ್ವವಿದ್ಯಾಲಯವು, ತನ್ನ ಮುಂಬರುವ ವಾರ್ಷಿಕ ಘಟಿಕೋತ್ಸವದಲ್ಲಿ ಪಿಎಚ್.ಡಿ ಪದವಿ ಪ್ರದಾನ ಮಾಡುವುದಾಗಿ ಘೋಷಿಸಿದೆ.
ಮೇಘರಾಜ್ ಅವರಿಗೆ ಪಿಎಚ್.ಡಿ ಪದವಿ ಲಭಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕರು, ಸ್ನೇಹಿತರು, ರಾಜಕೀಯ ಮುಖಂಡರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.






