ಹರಪನಹಳ್ಳಿ: ಸಂಭ್ರಮದ ಅಜ್ಜಿ ಹಬ್ಬ ಆಚರಣೆ

ಹರಪನಹಳ್ಳಿ: ಪಟ್ಟಣದ ವಾಲ್ಮೀಕಿ ನಗರ, ಕುರುಬರಗೇರಿ, ಸೋಂಡರಗೇರಿ, ಆಂಜನೇಯ ಬಡಾವಣೆ ಸೇರಿದಂತೆ ವಿವಿಧೆಡೆ ಶುಕ್ರವಾರ ಸಂಜೆ ಅಮ್ಮನನ್ನು ಕಳಿಸುವ ಆಚರಣೆ ಸಂಭ್ರಮದಿಂದ ನಡೆಯಿತು.
ಉತ್ತಮ ಮಳೆ-ಬೆಳೆ ಬರಲಿ ಮತ್ತು ರೋಗ-ರುಜಿನಿ ದೂರವಾಗಲೆಂದು ಪ್ರತಿ ವರ್ಷ ಈ ಆಚರಣೆ ನಡೆಯುತ್ತ ಬಂದಿದೆ.
ಮನೆಯಲ್ಲಿ ಮಹಿಳೆಯರು ತಮಗೆ ಅನುಕೂಲವಾಗುವ ಹೋಳಿಗೆ, ಕರಿಗಡಬು ತಯಾರಿಸಿ ಬೇವಿನ ಸೊಪ್ಪು, ಪೂಜಾ ಸಾಮಗ್ರಿಯನ್ನು ಮೊರದಲ್ಲಿ ಇರಿಸುತ್ತಾರೆ. ಇದನ್ನು ಮನೆಯಲ್ಲಿ ಪೂಜಿಸಿ ನಂತರ ಬಡಾವಣೆಯ ರಸ್ತೆಯಲ್ಲಿ ಒಂದೆಡೆ ಇಂತಹ ನೂರಾರು ಮೊರಗಳನ್ನು ಇಡಲಾಗುತ್ತದೆ. ನಂತರ ಅಲ್ಲಿಯೇ ಪ್ರತಿಷ್ಠಾಪಿಸಲಾದ ಅಮ್ಮನನನ್ನು ಪೂಜಿಸಿ, ಮಂಗಳಾರತಿ ಬೆಳಗಿ, ಸಕಲ ವಾದ್ಯಗಳೊಂದಿಗೆ ಕುಟುಂಬದ ಪುರುಷ ಸದಸ್ಯರು ಹರಪನಹಳ್ಳಿ ಪಟ್ಟಣದ ಕರಗಲ್ಲು ಬರುವವರೆಗೂ ಕೈಯಲ್ಲಿ ಈ ಮೊರಗಳನ್ನು ತೆಗೆದುಕೊಂಡು ಹೋಗುತ್ತಾರೆ. ನಂತರ ಬನ್ನಿಮರದ ಕೆಳಗೆ ಮೊರಗಳಿಗೆ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಬೆಳಗಿ ಮನೆಗೆ ವಾಪಸ್ಸಾಗುತ್ತಾರೆ.
Next Story




