ಹೊಸಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಡಿ.ನಾಗಪ್ಪ ಅವಿರೋಧ ಆಯ್ಕೆ

ಹರಪನಹಳ್ಳಿ: ವಿಜಯನಗರ ಜಿಲ್ಲೆಯ ಹೊಸಕೋಟೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನಕ್ಕೆ ಕೆರೆಗುಡಿಹಳ್ಳಿ ಗ್ರಾಮದ ಸದಸ್ಯ ಡಿ.ನಾಗಪ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿ.ರೇಣುಕಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಗೆ ಪಕ್ಷೇತರ ಸದಸ್ಯರಾಗಿದ್ದ ಡಿ.ನಾಗಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ ತಹಶೀಲ್ದಾರ್ ಗಿರೀಶ್ ಬಾಬು ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಿ, ಡಿ.ನಾಗಪ್ಪ ಅವರ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ನೂತನ ಅಧ್ಯಕ್ಷ ಡಿ.ನಾಗರಾಜ್ ಮಾತನಾಡಿ, ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳನ್ನು ನಾನು ಅಭಿವೃದ್ಧಿಪಡಿಸುತ್ತೇನೆ. ಎಲ್ಲಾ ಗ್ರಾಮಗಳ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಹೇಮಂತ್ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಪರಿಹರಿಸಿ ಪಂಚಾಯತ್‌ನ್ನು ತಾಲ್ಲೂಕಿನಲ್ಲೇ ಮಾದರಿ ಗ್ರಾಮ ಪಂಚಾಯತ್ ಆಗಿ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕವಿತಮ್ಮ ವಿರೇಶ್, ಸದಸ್ಯರಾದ ಕಬ್ಬಳ್ಳಿ ಶ್ರೀನಿವಾಸ್, ಟಿ.ಪಾಂಡುರಂಗಪ್ಪ, ಬೂದಿಹಾಳ್ ಸಿದ್ದೇಶ್, ಬಸಮ್ಮ ಲೋಕಪ್ಪ, ಗೌರಮ್ಮ ಜಗದೀಶ್, ಹೊಸಕೋಟೆ ಬಿ.ಮಂಜಮ್ಮ ಆನಂದಪ್ಪ, ಜಯಮ್ಮ ಕೃಷ್ಣಪ್ಪ, ವಡ್ಡನಹಳ್ಳಿ ಕೆಂಚಪ್ಪ, ಮುಖಂಡರಾದ ವಿರೇಶ್, ಕೋಣನಕಟ್ಟೆ ಅಣ್ಣಪ್ಪ, ಮಂಜಣ್ಣ, ಸುರೇಶ್, ಶಿವು, ಗುಡಿಹಳ್ಳಿ ಕೆ.ನಾಗರಾಜ್, ಕೆ.ಕೆಂಗಣ್ಣ, ಪರಮೇಶಪ್ಪ, ಶೇಖರಪ್ಪ, ಪಿಡಿಓ ಹೇಮಂತ್ ಕುಮಾರ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.







