ವಿಜಯನಗರ | ಹೊಸಪೇಟೆ ಗ್ರಾಮಾಂತರ ಠಾಣೆಯ ಎಎಸ್ಸೈ ಹೃದಯಾಘಾತದಿಂದ ನಿಧನ

ಕರ್ತವ್ಯದ ಮೇಲೆ ರಾಜಸ್ಥಾನಕ್ಕೆ ತೆರಳಿದ್ದ ವೇಳೆ ಘಟನೆ
ಹೊಸಪೇಟೆ: ನಗರದ ಗ್ರಾಮೀಣ ಪೊಲೀಸ್ ಠಾಣೆಯ ಎಎಸ್ಸೈ ಹಾಲಪ್ಪ( 56) ಹೃದಯಾಘಾತದಿಂದ ರಾಜಸ್ಥಾನದಲ್ಲಿ ನಿಧನರಾಗಿದ್ದಾರೆ.
ಎಎಸ್ಸೈ ಹಾಲಪ್ಪ ಆ.17ರಂದು ಕರ್ತವ್ಯದ ಮೇಲೆ ರಾಜಸ್ಥಾನದ ಜೋಧಪುರಕ್ಕೆ ಹೊಸಪೇಟೆಯಿಂದ ತೆರಳಿದ್ದರು. ಅಲ್ಲಿ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ನಿವಾಸಿಯಾಗಿರುವ ಹಾಲಪ್ಪರ ಅಂತ್ಯಕ್ರಿಯೆ ಆ.21ರಂದು ಸ್ವಗ್ರಾಮದಲ್ಲಿ ನೆರವೇರಲಿದೆ ಎಂದು ತಿಳಿದು ಬಂದಿದೆ.
Next Story





